nirmala sitaraman

    Union Budget 2026

    Finance Partner

    Finance Partner
    LIVE NOW

    Feb 01 2026, 05:51 PM IST

    Union Budget 2026 LIVE Update: ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ, ಷೇರು ಮಾರುಕಟ್ಟೆ ಡೌನ್

    05:51 PM (IST) Feb 01

    ಶೇರ್ ಮಾರ್ಕೆಟ್‌ನಲ್ಲಿ SGB ಕೊಂಡಿದ್ದೀರಾ? ಏಪ್ರಿಲ್ 1 ರಿಂದ ಬದಲಾಗಲಿದೆ ನಿಮ್ಮ ಲಾಭದ ಲೆಕ್ಕಾಚಾರ!

    ಸಾವರಿನ್‌ ಗೋಲ್ಡ್‌ ಬಾಂಡ್‌ಗಳ (SGBs) ಮೆಚುರಿಟಿ ಮೇಲಿನ ತೆರಿಗೆ ವಿನಾಯಿತಿ ನಿಯಮದಲ್ಲಿ ಬದಲಾವಣೆ ಪ್ರಸ್ತಾಪಿಸಲಾಗಿದೆ. ಈ ಪ್ರಯೋಜನವು ಇನ್ನು ಮುಂದೆ, ಆರ್‌ಬಿಐನಿಂದ ನೇರವಾಗಿ ಬಾಂಡ್‌ ಖರೀದಿಸಿ, ಮೆಚುರಿಟಿ ತನಕ ಹೊಂದಿರುವ ಮೂಲ ಹೂಡಿಕೆದಾರರಿಗೆ ಮಾತ್ರ ಅನ್ವಯವಾಗಲಿದೆ.

    Read Full Story
    04:59 PM (IST) Feb 01

    ಕಣ್ಣೀರಿನ ಕುಟಂಬಕ್ಕೆ ಕೇಂದ್ರದ ಬಜೆಟ್ ಗಿಫ್ಟ್, ರಸ್ತೆ ಅಪಘಾತ ಸಂತ್ರಸ್ತರ ಪರಿಹಾರಕ್ಕೆ ಶೂನ್ಯ ತೆರಿಗೆ

    ಕಣ್ಣೀರಿನ ಕುಟಂಬಕ್ಕೆ ಕೇಂದ್ರದ ಬಜೆಟ್ ಗಿಫ್ಟ್, ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಜನ ಸಾಮಾನ್ಯರಿಗೆ ಭರ್ಜರಿ ವಿನಾಯಿತಿ ನೀಡಿದೆ. ಈ ಪೈಕಿ ಸಂಕಷ್ಟದಲ್ಲಿರುವ ಕುಟುಂಬದ ನೆರವಿಗೂ ಹೊಸ ಪದ್ಧತಿ ಘೋಷಿಸಲಾಗಿದೆ.

    Read Full Story
    02:29 PM (IST) Feb 01

    ಕೇಂದ್ರ ಬಜೆಟ್ ಮಂಡಿಸಿದ 15 ನಿಮಿಷಕ್ಕೆ ಷೇರು ಮಾರುಕಟ್ಟೆಯಲ್ಲಿ ₹30,000 ಕೋಟಿ ನಷ್ಟ: ಜಿ.ಸಿ. ಚಂದ್ರಶೇಖರ್ ಆಕ್ರೋಶ

    ಕೇಂದ್ರ ಬಜೆಟ್ ಕುರಿತು ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ತೀವ್ರ ವಾಗ್ದಾಳಿ ನಡೆಸಿದ್ದು, ಬಜೆಟ್‌ನಿಂದಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಬರೋಬ್ಬರಿ 30 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದಿದ್ದಾರೆ. ಕರ್ನಾಟಕದ ಪ್ರಮುಖ ಬೇಡಿಕೆಗಳಾದ ಮಹದಾಯಿ, ಏಮ್ಸ್ ಯೋಜನೆಗಳ ಕಡೆಗಣಿಸಲಾಗಿದೆ ಎಂದರು.

    Read Full Story
    01:21 PM (IST) Feb 01

    ಶೇರು ಮಾರುಕಟ್ಟೆ ತಲ್ಲಣ, ಇದರಿಂದ ಗೊತ್ತಾಗುತ್ತೆ ಬಜೆಟ್ ಹೇಗಿದೆ ಅಂತ: ಜಿಸಿ ಚಂದ್ರಶೇಖರ್

    ಷೇರು ಮಾರುಕಟ್ಟೆಯಲ್ಲಿ ಹದಿನೈದು ನಿಮಿಷದಲ್ಲಿ ಮೂವತ್ತು ಸಾವಿರ ಕೋಟಿ ನಷ್ಟವಾಗಿದೆ. ಇದರಿಂದ ಬಜೆಟ್ ಹೇಗೆ ಇದೆ ಎಂದು ಗೊತ್ತಾಗುತ್ತಿದೆ.ಡಾಲರ್ ಮೌಲ್ಯ ಏನಾಗಿದೆ, 100 ತಲುಪಿದೆ ಇದು ಯಾವ ತರದ ಅಭಿವೃದ್ಧಿ. ಡಾಲರ್‌ಗೆ ಒಂದು ರೂಪಾಯಿ ಬರುತ್ತೆ ಅಂತಾ ಬಿಜೆಪಿ ನಾಯಕರು ಹೇಳಿದ್ದರು. ಅವರು ಎರಡು ಸೊನ್ನೆ ಮರೆತಿದ್ದಾರೆ. ದೇಶದ ಮೇಲಿನ ಸಾಲ ಹೆಚ್ಚಾಗುತ್ತಿದೆ, ಹತ್ತು ವರ್ಷದಲ್ಲಿ 150 ಲಕ್ಷ ಸಾಲ ಹೆಚ್ಚಾಗಿದೆ. ಕರ್ನಾಟಕ ಬಹಳ ನಿರೀಕ್ಷೆ ಇಟ್ಟುಕೊಂಡಿತ್ತು. 

    ಮಂಡ್ಯದಲ್ಲಿ ಕೈಗಾರಿಕೆ ಕಾರಿಡಾರ್ ತರಲಾಗುವುದು ಎಂದು ನಮ್ಮ ಕೇಂದ್ರ ಸಚಿವರು ಹೇಳಿದ್ದರು. ಎಲ್ಲಿದೆ ಬಜೆಟ್‌ನಲ್ಲಿ ಕಾರಿಡಾರ್, ನಮ್ಮ ಕೇಂದ್ರ ಮಂತ್ರಿಗಳಿಗೆ ಕಿಮ್ಮತ್ತೇ ಇಲ್ಲ. ನೀರಾವರಿ ಯೋಜನೆ ಪೈಕಿ ಒಂದು ರಾಷ್ಟ್ರೀಯ ಯೋಜನೆಯಾಗಲಿಲ್ಲ. ಪ್ರಹ್ಲಾದ್ ಜೋಶಿಯಂತಹ ನಾಯಕರಿಗೆ ಮಹದಾಯಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡಲು ಸಾಧ್ಯವಾಗಲಿಲ್ಲ. ಏಮ್ಸ್ ರಾಯಚೂರಿಗೆ ತರಲು ಸಾಧ್ಯವಾಗಲಿಲ್ಲ. ಹದಿನಾರನೆ ಹಣಕಾಸು ಆಯೋಗದ ಶಿಫಾರಸುಗಳನ್ನು ಒಪ್ಪಿಕೊಂಡಿದೆ. ಹದಿನೈದನೆಯ ಆಯೋಗದಲ್ಲಿ ಆದ ಅನ್ಯಾಯ ಸರಿಪಡಿಸಿಲ್ಲ. ನರೇಗಾ ಬದಲಾವಣೆಯಿಂದ ಎರಡು ಸಾವಿರ ಕೋಟಿ ಕರ್ನಾಟಕಕ್ಕೆ ನಷ್ಟವಾಗಲಿದೆ. ಟ್ಯಾಕ್ಸ್ ನಲ್ಲಿನ ಹಣ ರಾಜ್ಯಗಳಿಗೆ ನೀಡಬೇಕಾಗುತ್ತೆ ಎನ್ನುವ ಕಾರಣಕ್ಕೆ ಕೇಂದ್ರ ಸೆಸ್ ಹೆಚ್ಚಚ್ಚಿಸುತ್ತಿದೆ: ಜಿಸಿ ಚಂದ್ರಶೇಖರ್ 

    01:11 PM (IST) Feb 01

    ಚೀನಾಕ್ಕೆ ನಡುಕ ತಂದ ಭಾರತದ ಬಜೆಟ್! ಸೆಮಿಕಂಡಕ್ಟರ್ ಕ್ರಾಂತಿಗೆ ನಿರ್ಮಲಾ ಸೀತಾರಾಮನ್ 40,000 ಕೋಟಿ ರೂ. ಬೂಸ್ಟ್!

    Nirmala Sitharaman Union Budget 2026: ಭಾರತವು ಅಪರೂಪದ ಭೂಮಿಯ ಖನಿಜಗಳಿಂದ ಹಿಡಿದು ಸೆಮಿಕಂಡಕ್ಟರ್‌ವರೆಗೆ ಚೀನಾಕ್ಕೆ ದೊಡ್ಡ ಹೊಡೆತ ನೀಡಲು ಸಿದ್ಧತೆ ನಡೆಸುತ್ತಿದೆ. ಇದು ದೇಶೀಯ ಮಾರುಕಟ್ಟೆಗೆ ದೊಡ್ಡ ಉತ್ತೇಜನ ನೀಡಲಿದೆ.

    Read Full Story
    39 More Updates

    CHEAPERvsDEARER

    Budget News

    Opinion Poll

    SIP Calculator

    Your Budget, Your Investments: Try our SIP Calculator for Smart Planning
    Monthly Investment
    Expected Annual Return
    %
    Investment Duration
    Yr
    Total Amount(Invested + Return)₹ 0
      Expected ReturnsTotal Amount invested
    • Total Amount invested
      ₹ 0
    • Expected Returns
      ₹ 0
    • Expected maturity amount
      ₹ 0