ಮೋದಿಯ ಸುಳ್ಳುಗಳ ಸರಮಾಲೆಗೆ 9 ವರ್ಷಗಳಾಗಿವೆ: ಸಂಸದ ಡಿ.ಕೆ ಸುರೇಶ್
ಕೇಂದ್ರ ಬಜೆಟ್ ಬಗ್ಗೆ ಸಂಸದ ಡಿ.ಕೆ ಸುರೇಶ್ ಲೇವಡಿ ಮಾಡಿದ್ದು, ಇದೊಂದು ಡಬ್ಬಾ ಬಜೆಟ್ ಎಂದು ಕಿಡಿ ಕಾರಿದ್ದಾರೆ.
ಇದು ಯಾವ ಕಾಲದ ಬಜೆಟ್ ಎಂದು ಅರ್ಥವಾಗಿಲ್ಲ. ಅಮೃತಕಾಲದ್ದೋ ಅಥವಾ ಅದಾನಿ ಕಾಲದ್ದೋ ಎಂದು ತಿಳಿಯುತ್ತಿಲ್ಲ ಎಂದು ಸಂಸದ ಡಿ.ಕೆ ಸುರೇಶ್ ತಿಳಿಸಿದ್ದಾರೆ. ಮೋದಿಯ ಸುಳ್ಳುಗಳ ಸರಮಾಲೆಗೆ 9 ವರ್ಷಗಳಾಗಿವೆ. ಆತ್ಮನಿರ್ಭರ ಯೋಜನೆಯನ್ನು ಅನುಷ್ಠಾನ ಮಾಡುವಲ್ಲಿ ವಿಫಲವಾಗಿದ್ದಾರೆ. ಕರ್ಮಯೋಗಿ ಯೋಜನೆಯಲ್ಲಿ ಉದ್ಯೋಗವನ್ನೇ ಕೊಡಲಿಲ್ಲ. ಬೆಲೆ ಏರಿಕೆಯನ್ನು ತಡೆಯುವಲ್ಲಿ ಕೇಂದ್ರ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.