Asianet Suvarna News Asianet Suvarna News

Union Budget 2023 ದೇಶದ 12 ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ಮುಂದಾದ ಕೇಂದ್ರ!

ಕೇಂದ್ರ ಬಜೆಟ್ ಮಂಡನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಜ್ಜಾಗಿದ್ದಾರೆ. ಈ ಬಾರಿಯ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಇದಕ್ಕೆ ಹಲವು ಕಾರಣಗಳು ಇವೆ. ಆದರೆ ಇದೇ ಬಜೆಟ್‌ನಲ್ಲಿ ದೇಶದ ಪ್ರಮುಖ 12 ವಿಮಾನ ನಿಲ್ದಾಣ ಖಾಸಗೀಕರಣ ಘೋಷಣೆಯೂ ಆಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದು ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ. 
 

Union Budget 2023 12 more airports are expected to be privatization under asset monetization ckm
Author
First Published Jan 31, 2023, 5:16 PM IST

ನವದೆಹಲಿ(ಜ.31): ಕೇಂದ್ರ ಬಜೆಟ್ 2023ರಲ್ಲಿ ನಿರೀಕ್ಷೆಗಳು, ಸರ್ಕಾರದ ಹೊಸ ಯೋಜನೆಗಳ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ದೇಶದ ಎಲ್ಲಾ ಕ್ಷೇತ್ರಗಳು ಇದೀಗ ಕೇಂದ್ರದ ಬಜೆಟ್‌ನತ್ತ ಚಿತ್ತ ಹರಿಸಿದೆ. ಇದರ ನಡುವೆ ಈ ಬಜೆಟ್‌ನಲ್ಲಿ ಕೆಲ ಐತಿಹಾಸಿಕ ಘೋಷಣೆಗಳು ನಡೆಯಲಿದೆ. ಹೀಗೆ ಬಜೆಟ್‌ನಲ್ಲಿನ ಕೆಲ ಘೋಷಣೆಗಳಲ್ಲಿ ದೇಶದ ವಿಮಾನ ನಿಲ್ದಾಣಗಳ ಖಾಸಗೀಕರಣ ಘೋಷಣೆಯೂ ನಡೆಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರೀಯ ಆಸ್ತಿ ಹಣಗಳಿಕೆ ಯೋಜನೆ ಅಡಿ ದೇಶದ 12 ವಿಮಾನ ನಿಲ್ದಾಣಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. 

ವಿಮಾನಯಾನ ಸಚಿವಾಲಯಕ್ಕೆ 20,000 ಕೋಟಿ ರೂಪಾಯಿ ಆದಾಯ ಗಳಿಕೆಗೆ ಸೂಚನೆ ನೀಡಲಾಗಿದೆ. ಇದಕ್ಕಾಗಿ ದೇಶದ 12 ವಿಮಾನ ನಿಲ್ದಾಣಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಲ್ಲಿ ಮುಂದಿನ 4 ರಿಂದ 5 ವರ್ಷ ದೇಶದ ವಿಮಾನ ನಿಲ್ದಾಣ ಹಾಗೂ ಮೂಲಭೂತ ಸೌಕರ್ಯ ಹೆಚ್ಚಳಕ್ಕೆ 9,800 ಕೋಟಿ ರೂಪಾಯಿ ಹೂಡಿಕೆ ಮಾಡಲು ನಿರ್ಧರಿಸಿದೆ. ಈ ಕುರಿತು ನಿರ್ಮಲಾ ಸೀತಾರಾಮನ್ ನಾಳೆ ಬಜೆಟ್‌ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ.

 

Economic Survey 2023:ಮುಂದಿನ ದಿನಗಳಲ್ಲಿ ಧಾನ್ಯಗಳು, ಮಸಾಲ ಪದಾರ್ಥ, ಹಾಲಿನ ಬೆಲೆ ಏರಿಕೆ ನಿರೀಕ್ಷೆ

ದೇಶದಲ್ಲಿ ವಿಮಾನ ನಿಲ್ದಾಣಗಳ ಖಾಸಗೀಕರಣ ಇದೇ ಮೊದಲ್ಲ. ಈಗಾಗಲೇ ಹಲವು ವಿಮಾನ ನಿಲ್ದಾಣಗಳನ್ನು ಖಾಸಗೀಕರಣ ಸಹಭಾಗಿತ್ವದಲ್ಲಿ ನಿರ್ವವಣೆಯಾಗುತ್ತಿದೆ. ಇಷ್ಟೇ ಅಲ್ಲ ಬಂದರು ಕೂಡ ಖಾಸಗೀಕರಣಗೊಂಡಿದೆ. ರಾಯಪುರ, ಜಬಲಪುರ, ವಿಜಯವಾಡ, ಕೋಲ್ಕತಾ, ಇಂದೋರ್ ಸೇರಿದಂತೆ ಪ್ರಮುಖ 12 ವಿಮಾನ ನಿಲ್ದಾಣಗಳನ್ನು ಖಾಸಗೀಕರಣ ಮಾಡಿ ವಿಮಾನಯಾನ ಸಚಿವಾಲಯದ ಆರ್ಥಿಕ ಹೊರೆ ತಗ್ಗಿಸಿ ಲಾಭದಾಯಕ ಮಾಡಲು ಕೇಂದ್ರ ಸರ್ಕಾರ ಬಹುದೊಡ್ಡ ಪ್ಲಾನ್ ರೂಪಿಸಿದೆ. ವಿಮಾನ ನಿಲ್ದಾಣ ಖಾಸಗೀಕರಣದಿಂದ ಸಚಿವಾಲಯಕ್ಕೆ ನೇರವಾಗಿ 8,000 ಕೋಟಿ ರೂಪಾಯಿ ಆದಾಯ ಹರಿದು ಬರಲಿದೆ.  

ಕರ್ನಾಟಕದ ಮಂಗಳೂರು ವಿಮಾನ ನಿಲ್ದಾಣ ಈಗಾಗಲೇ ಅದಾನಿ ಗ್ರೂಪ್ ನಿರ್ವಹಿಸುತ್ತಿದೆ. ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ ಪ್ರತಿಭಟನೆ, ವಿರೋಧದ ನಡುವೆಯ ಮಂಗಳೂರು ವಿಮಾನ ನಿಲ್ದಾಣ ಅದಾನಿ ಗ್ರೂಪ್ ವಶಕ್ಕೆ ಪಡೆದುಕೊಂಡಿತ್ತು. ಖಾಸಗಿ ಪಾಲುದಾರಿಕೆ ಅಡಿಯಲ್ಲಿ ಮಂಗಳೂರು ವಿಮಾನ ನಿಲ್ದಾಣ ನಿರ್ವಹಣೆಯನ್ನು ಮುಂದಿನ 50 ವರ್ಷಗಳ ಕಾಲ ಅದಾನಿ ಗ್ರೂಪ್ ನಿರ್ವಹಿಸಲಿದೆ.

Economic Survey: 2022-23ರಲ್ಲಿ ದೇಶದ ಜಿಡಿಪಿ ಶೇ. 7ರಷ್ಟು ಬೆಳವಣಿಗೆ ಎಂದ ಆರ್ಥಿಕ ಸಮೀಕ್ಷೆ!

ಒಂದು ಸರ್ಕಾರಿ ಸ್ವಾಮ್ಯದ ಒಂದೊಂದೇ ಸಂಸ್ಥೆಯನ್ನು ಖಾಸಗೀಕರಣಗೊಳಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಬಿಎಸ್‌ಎನ್‌ಎಲ್‌, ರೈಲ್ವೆ ಹೀಗೆ ಖಾಸಗೀಕರಣ ಗೊಳಿಸುತ್ತಿರುವುದು ಖಂಡನೀಯ. ಕೂಡಲೇ ಇಂಥ ಪ್ರಯತ್ನಗಳನ್ನು ಕೈಬಿಡಬೇಕು ಈಗಾಗಲೇ ಹಲವರು ಆಕ್ರೋಶ ವ್ಯಕ್ತಪಡಿಸಿ್ದ್ದರು.  ಕೇಂದ್ರ ಬಜೆಟ್‌ನಲ್ಲಿ ಘೋಷಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ ಈ ಲಿಸ್ಟ್‌ನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣ ಹಾಗೂ ಕರ್ನಾಟಕದ ಮತ್ತೊಂದು ವಿಮಾನ ನಿಲ್ದಾಣದ ಹೆಸರು ಇವೆ ಅನ್ನೋ ಮಾತುಗಳ ಕೇಳಿಬಂದಿದೆ.  

ಕೇಂದ್ರ ಮಂಡಿಸಲಿರುವ ಬಜೆಟ್ ಕುರಿತು ಇದೀಗ ಭಾರಿ ನಿರೀಕ್ಷೆ ಇದೆ. ಇದರ ನಡುವೆ ಖಾಸಗೀಕರಣ ಸೇರಿದಂತೆ ಹೊಸ ಹೊಸ ನೀತಿಗಳು ಯೋಜನೆಗಳ ಕುರಿತು ಆತಂಕವೂ ಹೆಚ್ಚಾಗಿದೆ.

Follow Us:
Download App:
  • android
  • ios