04:46 PM (IST) Jan 31

union budget 2026 liveUnion Budget 2026 - ಆದಾಯ ತೆರಿಗೆಯಲ್ಲಿ ನೌಕರರಿಗೆ ಈ ಬಾರಿಯೂ ಬಂಪರ್​? ಬಜೆಟ್​ ಸಾಧ್ಯತೆ ಏನು?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026ರ ಕೇಂದ್ರ ಬಜೆಟ್ ಮಂಡಿಸಲಿದ್ದು, ಮಧ್ಯಮ ವರ್ಗದವರು ಆದಾಯ ತೆರಿಗೆಯಲ್ಲಿ ಹೆಚ್ಚಿನ ಕಡಿತವನ್ನು ನಿರೀಕ್ಷಿಸುತ್ತಿದ್ದಾರೆ. ಕಳೆದ ವರ್ಷದಂತೆ ಈ ಬಾರಿಯೂ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ಸಾಧ್ಯತೆಗಳಿವೆ.

Read Full Story
04:32 PM (IST) Jan 31

union budget 2026 liveUnion Budget 2026 - ಈ 3 ಘೋಷಣೆ ಮಾಡಿದರೆ ಸಾಕು, ಷೇರು ಮಾರುಕಟ್ಟೆ ಗಗನಕ್ಕೇರುತ್ತೆ

Budget announcements: ಈ ಬಜೆಟ್‌ನಲ್ಲಿ ಸರ್ಕಾರ ಮೂರು ಪ್ರಮುಖ ಘೋಷಣೆಗಳನ್ನು ಮಾಡಿದರೆ, ಷೇರು ಮಾರುಕಟ್ಟೆ ಗಗನಕ್ಕೇರುತ್ತದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೆರೋಧಾ ಸಿಇಒ ನಿತಿನ್ ಕಾಮತ್ ಕೂಡ ಈ ಬೇಡಿಕೆಗಳನ್ನು ಬೆಂಬಲಿಸಿದ್ದಾರೆ ಎಂಬುದು ಗಮನಾರ್ಹ.

Read Full Story
03:17 PM (IST) Jan 31

union budget 2026 liveUnion Budget 2026 expectations live updates: MSME ಗಳಿಗೆ ಬಲವಾದ ಬೆಂಬಲ ಸಿಗುವ ನಿರೀಕ್ಷೇ: UCCI ಮುಖ್ಯಸ್ಥ

ಉತ್ಕಲ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷ ಪ್ರಬೋಧ್ ಮೊಹಂತಿ, ಕೇಂದ್ರ ಬಜೆಟ್ MSME ವಲಯಕ್ಕೆ, ವಿಶೇಷ ಸಾಲ , ಆಧುನೀಕರಣ ಮತ್ತು ನಿಯಂತ್ರಕ ಸರಾಗತೆ ಮುಂತಾದ ಕ್ಷೇತ್ರಗಳಲ್ಲಿ ಬಲವಾದ ಬೆಂಬಲವನ್ನು ತರುತ್ತದೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

ANI ಜೊತೆ ಮಾತನಾಡಿದ ಮೊಹಂತಿ, MSME ಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಬೆಳೆಯಲು, ಆಧುನೀಕರಿಸಲು ಮತ್ತು ಸ್ಪರ್ಧಾತ್ಮಕವಾಗಿ ಉಳಿಯಲು ಸಹಾಯ ಮಾಡಲು ಸರ್ಕಾರವು ಸುಧಾರಿತ ಸೌಲಭ್ಯಗಳು ಮತ್ತು ಹೊಸ ಯೋಜನೆಗಳನ್ನು ಪರಿಚಯಿಸುತ್ತದೆ ಎಂದು ನಿರೀಕ್ಷಿಸುವುದಾಗಿ ಹೇಳಿದರು. ಸಣ್ಣ ವ್ಯವಹಾರಗಳಿಗೆ ಪ್ರಮುಖ ಆದ್ಯತೆಯಾಗಿ ಮೇಲಾಧಾರವಿಲ್ಲದೆ ಸಾಲವನ್ನು ಸುಲಭವಾಗಿ ಪಡೆಯುವುದು ಮುಖ್ಯ ಎಂದು ಅವರು ಹೇಳಿದರು.

03:15 PM (IST) Jan 31

union budget 2026 live Union Budget 2026 expectations live: 2026 ರ ಕೇಂದ್ರ ಬಜೆಟ್‌ನಲ್ಲಿ ಉದ್ಯೋಗ, ಕೃಷಿ, ಎಂಎಸ್‌ಎಂಇಗಳ ಮೇಲೆ ಕೇಂದ್ರ ಗಮನ ಹರಿಸುವ ಸಾಧ್ಯತೆ

ಉಸ್ಮಾನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸತೀಶ್ ರಾಯ್ಕಿಂಡಿ ಅವರು ಸರ್ಕಾರವು ಉದ್ಯೋಗ ಸೃಷ್ಟಿ, ಕೃಷಿ ಅಭಿವೃದ್ಧಿ, ಅಂತರ್ಗತ ಉತ್ಪಾದನೆ, ಡಿಜಿಟಲ್ ರೂಪಾಂತರ ಮತ್ತು ಗ್ರಾಮೀಣ-ನಗರ ಏಕೀಕರಣದತ್ತ ಗಮನ ಹರಿಸುವ ಸಾಧ್ಯತೆಯಿದೆ ಎಂದು ಹೇಳಿದರು. ರಕ್ಷಣೆ, ರೈಲ್ವೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ, ಎಂಎಸ್‌ಎಂಇಗಳು, ಗ್ರಾಮೀಣಾಭಿವೃದ್ಧಿ ಮತ್ತು ಹಸಿರು ಆರ್ಥಿಕತೆಯಂತಹ ಪ್ರಮುಖ ಕ್ಷೇತ್ರಗಳು ಗಮನಾರ್ಹ ಗಮನ ಮತ್ತು ಹೂಡಿಕೆಯನ್ನು ಪಡೆಯುವ ನಿರೀಕ್ಷೆಯಿದೆ.

"ಪ್ರಸ್ತುತ ಭಾರತೀಯ ಆರ್ಥಿಕತೆಯು ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಸುಸ್ಥಿರ ಬೆಳವಣಿಗೆಗೆ, ನಾವು ಆಶಾವಾದದಿಂದ ಎದುರುನೋಡಬಹುದು. ಉದ್ಯೋಗ ಸೃಷ್ಟಿ, ಕೃಷಿ ಅಭಿವೃದ್ಧಿ, ಅಂತರ್ಗತ ಉತ್ಪಾದನೆ, ಡಿಜಿಟಲ್ ಪರಿವರ್ತನೆ, ಗ್ರಾಮೀಣ-ನಗರ ಏಕೀಕರಣ ಮತ್ತು ಹಸಿರು ಆರ್ಥಿಕತೆಯಂತಹ ಕ್ಷೇತ್ರಗಳಿಗೆ ಭಾರತ ಸರ್ಕಾರ ಆದ್ಯತೆ ನೀಡುತ್ತಿದೆ. ಈ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ ಮೂಲಕ, ಭಾರತವು ರಾಷ್ಟ್ರವ್ಯಾಪಿ ಸುಸ್ಥಿರ ಬೆಳವಣಿಗೆಯನ್ನು ಸಾಧಿಸಬಹುದು. ಪ್ರತಿಯೊಬ್ಬ ಸಾಮಾನ್ಯ ಮನುಷ್ಯನೂ ತೆರಿಗೆ ಸ್ಲ್ಯಾಬ್‌ಗಳು, ಕೈಗೆಟುಕುವ ವಸತಿ, ಆರೋಗ್ಯ ರಕ್ಷಣೆ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಪರಿಹಾರವನ್ನು ಎದುರು ನೋಡುತ್ತಿದ್ದಾನೆ" ಎಂದು ಅವರು ಹೇಳಿದರು.

03:12 PM (IST) Jan 31

union budget 2026 liveಆರ್ಥಿಕ ಸಮೀಕ್ಷೆ ಹಾಗೂ ಬಜೆಟ್‌ ನಡುವಿನ ವ್ಯತ್ಯಾಸ

ಆರ್ಥಿಕ ಸಮೀಕ್ಷೆ ಹಾಗೂ ಬಜೆಟ್‌ ನಡುವಿನ ವ್ಯತ್ಯಾಸವೇನು?

Scroll to load tweet…

03:11 PM (IST) Jan 31

union budget 2026 liveUnion Budget: ಫೆಬ್ರವರಿ 1 ಭಾನುವಾರವೇ ಮಂಡನೆಯಾಗುತ್ತಾ ಕೇಂದ್ರ ಬಜೆಟ್? ಜನಸಾಮಾನ್ಯರಿಗಿದೆ ಬೆಟ್ಟದಷ್ಟು ನಿರೀಕ್ಷೆ

Central Government, Union Budget : ಪ್ರತಿ ವರ್ಷ ಫೆಬ್ರವರಿ 1 ರಂದು ಕೇಂದ್ರದ ಸಾಮಾನ್ಯ ಬಜೆಟ್ ಮಂಡನೆಯಾಗುತ್ತೆ. ಈ ಬಾರಿ ಫೆಬ್ರವರಿ ಒಂದು ಭಾನುವಾರ ಬಂದಿದ್ದು, ಅಂದೇ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡುತ್ತಾ?

Read Full Story
03:10 PM (IST) Jan 31

union budget 2026 liveBudget 2026: ಇತಿಹಾಸದಲ್ಲೇ ಮೊದಲು! ಫೆ.1ರ ಭಾನುವಾರದಂದೇ ಬಜೆಟ್ ಮಂಡನೆ, ಕಾರಣವೇನು ಗೊತ್ತಾ?

Union Budget 2026: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ (CCPA) ಸಭೆಯಲ್ಲಿ, ಜನವರಿ 7ರ ಬುಧವಾರದಂದು ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನದ ಪ್ರಮುಖ ದಿನಾಂಕಗಳಿಗೆ ಅನುಮೋದನೆ ನೀಡಲಾಗಿದೆ

Read Full Story
03:10 PM (IST) Jan 31

union budget 2026 liveಕೇಂದ್ರ ಬಜೆಟ್ 2026, ಗಂಡ ಹೆಂಡತಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾದ ನಿರ್ಮಲಾ ಸೀತಾರಾಮನ್

ಕೇಂದ್ರ ಬಜೆಟ್ 2026, ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಕೇಂದ್ರ ಬಜೆಟ್‌ನಲ್ಲಿ ಮದುವೆಯಾದ ಜೋಡಿಗಳಿಗೆ ಭರ್ಜರಿ ಗಿಫ್ಟ್ ನೀಡುವ ಸಾಧ್ಯತೆ ಇದೆ. ಜೋಡಿಗಳ ಟ್ಯಾಕ್ಸ್ ಉಳಿತಾಯಕ್ಕೆ ಮಹತ್ವದ ಯೋಜನೆ ಘೋಷಣೆಯಾಗುವ ಸಾಧ್ಯತೆ ಇದೆ.

Read Full Story
03:10 PM (IST) Jan 31

union budget 2026 liveಕೇಂದ್ರ ಬಜೆಟ್‌ ಕುರಿತಾಗಿ 10 ಸ್ವಾರಸ್ಯದ ಸಂಗತಿಗಳು, 100ರಲ್ಲಿ 99 ಮಂದಿಗೆ ಇದು ತಿಳಿದಿಲ್ಲ..

Budget History: ಫೆಬ್ರವರಿ 1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ ಕುರಿತಾದ ಆಸಕ್ತಿದಾಯಕ ಮತ್ತು ಅಪರೂಪದ ಸಂಗತಿಗಳ ವಿವರ ಇಲ್ಲಿದೆ. ಈ ಬಾರಿಯ ಕೇಂದ್ರ ಬಜೆಟ್‌ ಫೆಬ್ರವರಿ 1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಲಿದ್ದಾರೆ.

Read Full Story
03:09 PM (IST) Jan 31

union budget 2026 liveಜಾಗತಿಕ ಅವ್ಯವಸ್ಥೆ ನಡುವೆ ಭಾರತದ ಬಜೆಟ್‌ ನಿರೀಕ್ಷೆ-ಹೇಗೆ ನಿಭಾಯಿಸುತ್ತಾರೆ ಹಣಕಾಸು ಸಚಿವೆ

ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಇನ್ನೂ ಹೆಚ್ಚಾಗಿದ್ದು, ಹೊಸ ವ್ಯಾಪಾರ ಪೈಪೋಟಿಗಳು ಮತ್ತು ಅಮೆರಿಕದಲ್ಲಿ ಆಕ್ರಮಣಕಾರಿ ಸುಂಕ ರಾಜಕೀಯದ ಮರಳುವಿಕೆಯಿಂದಾಗಿ ಮತ್ತೊಂದು ಸುತ್ತಿನ ವ್ಯಾಪಾರ ಯುದ್ಧಗಳ ಭಯ ಮತ್ತೆ ಹುಟ್ಟಿಕೊಂಡಿದೆ.

Read Full Story
03:09 PM (IST) Jan 31

union budget 2026 liveಜಾಗತಿಕ ಸವಾಲುಗಳ ನಡುವೆ ಅಭಿವೃದ್ಧಿ ಬಜೆಟ್‌ ನಿರೀಕ್ಷೆ

ಭಾನುವಾರವಾದರೂ ಈ ಸಲ ಬಜೆಟ್‌ ಫೆ.1ರಂದು ಮಂಡನೆ ಆಗುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಯುದ್ಧದ ಕಾರ್ಮೋಡ, ಟ್ರಂಪ್‌ ಉಪಟಳದ ನಡುವೆ ಬಜೆಟ್‌ಗೆ ದೇಶ ಸಾಕ್ಷಿಯಾಗುತ್ತಿದೆ. ಜನರ ಚಿತ್ತ ಆಯವ್ಯಯ ಮಂಡನೆಯತ್ತ ನೆಟ್ಟಿದೆ

Read Full Story
03:08 PM (IST) Jan 31

union budget 2026 liveUnion Budget 2026: ಬಜೆಟ್‌ನಲ್ಲಿ ಯಾವ ರಾಜ್ಯಕ್ಕೆ ದಂಡಿಯಾಗಿ ಸಿಗಲಿದೆ ದುಡ್ಡು?

ಈ ವರ್ಷದ ಕೊನೆಯಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿ ಮತ್ತು ಅಸ್ಸಾಂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಈ ರಾಜ್ಯಗಳ ವಲಯವಾರು ಹಂಚಿಕೆ ಮತ್ತು ಅಭಿವೃದ್ಧಿ ಕೇಂದ್ರಿತ ಘೋಷಣೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

Read Full Story
03:08 PM (IST) Jan 31

union budget 2026 liveಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ನೀಗಲು ಪಾರ್ಕಿಂಗ್‌ ಶುಲ್ಕ ಹೆಚ್ಚಳಕ್ಕೆ ಆರ್ಥಿಕ ಸಮೀಕ್ಷೆ ಪ್ರಸ್ತಾಪ!

ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆಯು ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಪಾರ್ಕಿಂಗ್ ಶುಲ್ಕವನ್ನು ಹೆಚ್ಚಿಸಲು ಪ್ರಸ್ತಾಪಿಸಿದೆ. ಈ ಕ್ರಮವು ನಗರದಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಿ, ವಾಹನ ಸಂಚಾರದ ವೇಗವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

Read Full Story
03:08 PM (IST) Jan 31

union budget 2026 liveಇಂದಿನಿಂದ ಬಜೆಟ್ ಅಧಿವೇಶನ

ಬಜೆಟ್‌ ಅಧಿವೇಶನ ಬುಧವಾರದಿಂದ ಆರಂಭವಾಗಲಿದೆ. ಏಪ್ರಿಲ್ 2ಕ್ಕೆ ಅಂತ್ಯಗೊಳ್ಳಲಿದೆ. ಬಜೆಟ್‌ ಮಂಡನೆಯ ಕುತೂಹಲ ಒಂದೆಡೆಯಾದರೆ. ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಕಾಯ್ದೆ ರದ್ದು ಮಾಡಿ ಜಾರಿಗೆ ತಂದಿರುವ ಜಿ ರಾಮ್‌ ಜಿ ಕಾಯ್ದೆಯ ವಿರುದ್ಧ ಪ್ರತಿಪಕ್ಷಗಳು ಕೋಲಾಹಲ ಎಬ್ಬಿಸುವುದು ನಿಶ್ಚಿತ

Read Full Story