Nirmala Sitharaman Union Budget 2026: ಭಾರತವು ಅಪರೂಪದ ಭೂಮಿಯ ಖನಿಜಗಳಿಂದ ಹಿಡಿದು ಸೆಮಿಕಂಡಕ್ಟರ್‌ವರೆಗೆ ಚೀನಾಕ್ಕೆ ದೊಡ್ಡ ಹೊಡೆತ ನೀಡಲು ಸಿದ್ಧತೆ ನಡೆಸುತ್ತಿದೆ. ಇದು ದೇಶೀಯ ಮಾರುಕಟ್ಟೆಗೆ ದೊಡ್ಡ ಉತ್ತೇಜನ ನೀಡಲಿದೆ.

ನವದೆಹಲಿ (ಫೆ.1): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೆಮಿಕಂಡಕ್ಟರ್‌ಗಳ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಅಪರೂಪದ ಭೂಮಿಯ ಖನಿಜಗಳು ಸೇರಿದಂತೆ ಸೆಮಿಕಂಡಕ್ಟರ್‌ಗಳಿಗೆ ದೊಡ್ಡ ಘೋಷಣೆ ಮಾಡಲಾಗಿದೆ. ಈ ವಲಯವನ್ನು ಉತ್ತೇಜಿಸಲು ದೊಡ್ಡ ಬೂಸ್ಟರ್ ಡೋಸ್ಅನ್ನು ಬಜೆಟ್‌ನಲ್ಲಿ ನೀಡಲಾಗಿದ್ದು, ಅಪರೂಪದ ಭೂಮಿಯ ವಸ್ತುಗಳಿಗಾಗಿ ಒಡಿಶಾ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ವಿಶೇಷ ಯೋಜನೆಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ಸ್ಥಳಗಳಲ್ಲಿ ಅಪರೂಪದ ಅಂಶಗಳಿಗಾಗಿ ವಿಶೇಷ ಖನಿಜ ಪಾರ್ಕ್‌ ರಚಿಸಲಾಗುತ್ತದೆ. ಇವುಗಳಿಂದಾಗಿ ಡಿಕ್ಸನ್ ಟೆಕ್, ಸಿಜಿ ಪವರ್ ಸೇರಿದಂತೆ ಚಿಪ್ ಉತ್ಪಾದನಾ ಕಂಪನಿಗಳ ಷೇರುಗಳಲ್ಲಿ ಬಿರುಗಾಳಿ ಬೀಸಬಹುದು. ಕೆಲವೊಂದು ಷೇರುಗಳು ಶೇ. 6ರಷ್ಟು ಏರಿಕೆಯಾಗಿದ್ದು, ಹೂಡಿಕೆದಾರರನ್ನು ಶ್ರೀಮಂತ ಮಾಡಬಹುದು.

ಕೇಂದ್ರ ಹಣಕಾಸು ಸಚಿವೆ ಬಜೆಟ್‌ನಲ್ಲಿ ಇದಕ್ಕಾಗಿ ವಿಶೇಷ ಘೋಷಣೆ ಮಾಡಿದ್ದಾರೆ. ಇಎಂಎಸ್ ಪಿಎಲ್‌ಐ ಅನ್ನು 40 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಮಂಡಿಸಲಾಗಿದೆ. ಇದರ ಜೊತೆಗೆ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದಲ್ಲಿ ಅಪರೂಪದ ಭೂಮಿಯ ಖನಿಜಗಳಿಗಾಗಿ ವಿಶೇಷ ಕಾರಿಡಾರ್ ಅನ್ನು ರಚಿಸಲಾಗುತ್ತದೆ. ಸೆಮಿಕಂಡಕ್ಟರ್‌ಗಳಿಗೆ 40 ಸಾವಿರ ಕೋಟಿ ರೂ.ಗಳನ್ನು ನೀಡಲಾಗುವುದು. ಇದು ಚೀನಾದ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲಿದೆ ನಿರ್ಮಲಾ ಸೀತಾರಾಮನ್ ಬಂಡವಾಳ ವೆಚ್ಚವನ್ನು ಹೆಚ್ಚಿಸಿದ್ದಾರೆ. ಇದಕ್ಕಾಗಿ, 12.20 ಲಕ್ಷ ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಎಲೆಕ್ಟ್ರಾನಿಕ್ ಉತ್ಪಾದನೆಗೆ 40 ಸಾವಿರ ಕೋಟಿ ರೂ.ಗಳನ್ನು ನೀಡಲಾಗುತ್ತದೆ.

ಭಾರತವನ್ನು ಜಾಗತಿಕ ಬಯೋಫಾರ್ಮಾ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಬಯೋಫಾರ್ಮಾ ಶಕ್ತಿ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0 ಅನ್ನು ಪ್ರಾರಂಭಿಸಲಾಗಿದೆ. ಸೆಮಿಕಂಡಕ್ಟರ್ ವಲಯದಲ್ಲಿ ಎಲೆಕ್ಟ್ರಾನಿಕ್ ಘಟಕಗಳನ್ನು ತಯಾರಿಸುವ ಯೋಜನೆಗೆ ಹಣವನ್ನು ಒದಗಿಸಲಾಗುತ್ತದೆ.

ಈ ಷೇರುಗಳಲ್ಲಿ ಭಾರೀ ಏರಿಕೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಲೆಕ್ಟ್ರಾನಿಕ್ ಘಟಕಗಳ ತಯಾರಿಕೆಗೆ 40,000 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದ ನಂತರ ಭಾನುವಾರ ವಿಶೇಷ ಅವಧಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಈ ವಲಯದ ಷೇರುಗಳು ಏರಿಕೆ ಕಂಡವು. ಎಸ್‌ಜಿಎಸ್ ಟೆಕ್ನಾಲಜಿ ಲಿಮಿಟೆಡ್, ಡಿಕ್ಸನ್ ಟೆಕ್ನಾಲಜೀಸ್ ಇಂಡಿಯಾ, ಕೆನ್ಸ್ ಟೆಕ್ನಾಲಜಿ ಇಂಡಿಯಾ, ಆಂಬರ್ ಎಂಟರ್‌ಪ್ರೈಸಸ್ ಇಂಡಿಯಾ, ಪಿಜಿ ಎಲೆಕ್ಟ್ರೋಪ್ಲಾಸ್ಟ್, ಅವಲಾನ್ ಟೆಕ್ನಾಲಜೀಸ್ ಮತ್ತು ಸೇಂಟ್ ಡಿಎಲ್‌ಎಂ ಮುಂತಾದ ಷೇರುಗಳು ಶೇಕಡಾ 7 ರಷ್ಟು ಜಿಗಿದಿವೆ.