Asianet Suvarna News Asianet Suvarna News

ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಅನುದಾನ, ಮಧ್ಯ ಕರ್ನಾಟಕಕ್ಕೆ ವರ: ಸಿಎಂ ಬೊಮ್ಮಾಯಿ

ರೈತರಿಗೆ ಬಹಳಷ್ಟು ಒತ್ತು ನೀಡಿ ಅನುದಾನವನ್ನೂ ಒದಗಿಸಿದ್ದಾರೆ. ಯುವಕರ ಕೈಗಳಿಗೆ ಉದ್ಯೋಗ ನೀಡಲು ಅತಿ ಹೆಚ್ಚಿನ ಉತ್ತೇಜನ ನೀಡಿ ವಿಶೇಷ ಅನುದಾನ ಮೀಸಲಿಟ್ಟಿದ್ದಾರೆ. ಕೈಗಾರಿಕಾ ಅಭಿವೃದ್ಧಿ, ಮೂಲಸೌಕರ್ಯ ಅಭಿವೃದ್ದಿಗೆ, ರೈಲ್ವೆಗೆ ಅತಿ ಹೆಚ್ಚಿನ ಅನುದಾನ ಒದಗಿಸಲಾಗಿದೆ: ಸಿಎಂ ಬೊಮ್ಮಾಯಿ

CM Basavaraj Bommai Talks Over 5300 Crore Grant to Bhadra Upper Bank Project grg
Author
First Published Feb 2, 2023, 1:00 AM IST

ವಿಜಯಪುರ(ಫೆ.02):  ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ನೀಡಿದ್ದು,  ಬರಗಾಲ ಪೀಡಿತ ಪ್ರದೇಶವಾದ ಮಧ್ಯ ಕರ್ನಾಟಕಕ್ಕೆ ದೊಡ್ಡ ಕೊಡುಗೆ ನರೇಂದ್ರ ಮೋದಿಯವರ ಸರ್ಕಾರ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮುದ್ದೇಬಿಹಾಳದಲ್ಲಿ ಅವರು ನಿನ್ನೆ(ಬುಧವಾರ) ಕೇಂದ್ರ ಬಜೆಟ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ರೈತರಿಗೆ ಬಹಳಷ್ಟು ಒತ್ತು ನೀಡಿ ಅನುದಾನವನ್ನೂ ಒದಗಿಸಿದ್ದಾರೆ. ಯುವಕರ ಕೈಗಳಿಗೆ ಉದ್ಯೋಗ ನೀಡಲು ಅತಿ ಹೆಚ್ಚಿನ ಉತ್ತೇಜನ ನೀಡಿ ವಿಶೇಷ ಅನುದಾನ ಮೀಸಲಿಟ್ಟಿದ್ದಾರೆ. ಕೈಗಾರಿಕಾ ಅಭಿವೃದ್ಧಿ, ಮೂಲಸೌಕರ್ಯ ಅಭಿವೃದ್ದಿಗೆ, ರೈಲ್ವೆಗೆ ಅತಿ ಹೆಚ್ಚಿನ ಅನುದಾನ ಒದಗಿಸಲಾಗಿದೆ ಅಂತ ತಿಳಿಸಿದ್ದಾರೆ. 

ನಾನು ಎಂಬ ಅಹಂ ಬಿಟ್ಟು ದೇವರಿಗೆ ತಲೆ ಬಾಗಬೇಕು: ಮುಖ್ಯಮಂತ್ರಿ ಬೊಮ್ಮಾಯಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ  ದೃಷ್ಟಿಯಿಂದ ಎಲ್ಲರನ್ನೂ ಒಳಗೊಂಡಿರುವ ಅಭಿವೃದ್ಧಿಯಾಗಲು ಒತ್ತು ನೀಡಲಾಗಿದೆ. ಪ್ರಧಾನಮಂತ್ರಿಗಳಿಗೆ  ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಅವರಿಗೆ ಧನ್ಯವಾದಗಳನ್ನು ಅರ್ಪಿಸಬಯಸುತ್ತೇನೆ ಎಂದರು. 

Follow Us:
Download App:
  • android
  • ios