Budget 2023: ಸೆನ್ಸೆಕ್ಸ್‌ 60 ಸಾವಿರದ ಗಡಿಗೆ, 17,750 ಅಂಕ ದಾಟಿದ ನಿಫ್ಟಿ-50!

ಕೇಂದ್ರ ಬಜೆಟ್‌ ಮಂಡನೆಗೂ ಮುನ್ನ ಭಾರತದ ಷೇರುಮಾರುಕಟ್ಟೆ ಹಸಿರು ಹಾದಿ ಹಿಡಿದಿದೆ. ಸೆನ್ಸೆಕ್ಸ್‌ 457 ಅಂಕಗಳ ಜಿಗಿತ ಕಂಡಿದ್ದರೆ, ನಿಫ್ಟಿ-50 ಪಟ್ಟಿ 17750 ಅಂಕಗಳ ಗಡಿ ದಾಟಿದೆ.

Sensex rises 457 points and Nifty 50 above 17750 ahead of Budget san


ಮುಂಬೈ (ಫೆ.1): ಭಾರತೀಯ ಷೇರು ಮಾರುಕಟ್ಟೆ ಮಾನದಂಡಗಳಾದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ 50 ಬುಧವಾರದಂದು ಉತ್ತಮ ವಹಿವಾಟಿನೊಂದಿಗೆ ಆರಂಭ ಕಂಡಿವೆ. ಹಣಕಾಸು ಮತ್ತು ಐಟಿ ಷೇರುಗಳಲ್ಲಿನ ಏರಿಕೆಗಳು ಈ ಎರಡೂ ಸೂಚ್ಯಂಕಗಳ ಪ್ರಗತಿಗೆ ಕಾರಣವಾಗಿದೆ.  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಕೇಂದ್ರ ಬಜೆಟ್ 2023-24 ಅನ್ನು ಮಂಡಿಸಲಿದ್ದಾರೆ. ಸೂಚ್ಯಂಕಗಳು 2021 ರ ಬಜೆಟ್ ದಿನದ ಯಶಸ್ಸನ್ನು ಮರುಸೃಷ್ಟಿ ಮಾಡುವ ಪ್ರಯತ್ನದಲ್ಲಿದೆ.  1997ರ ಬಳಿಕ ಹಣಕಾಸು ಮಾರುಕಟ್ಟೆಯು 2021ರ ಬಜೆಟ್ ದಿನದಂದು ಅತಿ ಹೆಚ್ಚು ಏಕ ಬಜೆಟ್ ಅಧಿವೇಶನದ ಲಾಭವನ್ನು ಕಂಡಿತ್ತು. ಒಂದೆಡೆ ನಿಫ್ಟಿ-50ಯಲ್ಲಿ ಏರಿಕೆ ಕಂಡಿದ್ದರೂ ಹಿಂಡೆನ್‌ಬರ್ಗ್‌ ವರದಿಯಿಂದ ಆಘಾತದಲ್ಲಿರುವ ಅದಾನಿ ಕಂಪನಿಗಳ ಷೇರುಗಳು ಸತತ ಐದನೇ ದಿನವೂ ಕುಸಿತದ ಹಾದಿಯಲ್ಲಿದೆ. ಅದಾನಿ ಎಂಟರ್‌ಪ್ರೈಸಸ್‌, ಅದಾನಿ ಪೋರ್ಟ್ಸ್, ಅದಾನಿ ಟೋಟಲ್‌ ಗ್ಯಾಸ್‌, ಅದಾನಿ ಗ್ರೀನ್‌ ಷೇರು ಬೆಲೆಗಳು ಇಳಿಕೆ ಕಂಡಿದ್ದರೆ, ಅದಾನಿ ವಿಲ್ಮಾರ್‌ ಷೇರುಗಳ ಬೆಲೆಗಳಲ್ಲಿ ಮಾತ್ರ ಶೇ. 0.7 ಏರಿಕೆ ಕಂಡಿದೆ.

Union Budget 2023: ಕೇಂದ್ರ ಬಜೆಟ್‌ನಲ್ಲಿ ಇದೆಯಾ ಲೋಕಸಭಾ ಚುನಾವಣಾ ಲೆಕ್ಕಾಚಾರ?

ಇನ್ನೊಂದೆಡೆ ನಿಫ್ಟಿ-50 ಕಂಪನಿಗಳ ಪಟ್ಟಿಯಲ್ಲಿ ಸನ್‌ ಫಾರ್ಮಾ ಗರಿಷ್ಠ ನಷ್ಟ ಕಂಡ ಕಂಪನಿ ಎನಿಸಿದೆ. ದಿನದ ಆರಂಭಿಕ ವಹಿವಾಟಿನಲ್ಲಿ ಸನ್‌ ಫಾರ್ಮಾ ಕಂಪನಿಯ ಷೇರುಗಳು ಶೇ. 2.5ರಷ್ಟು ಇಳಿಕೆ ಕಂಡಿದೆ. ಬಿಎಸ್‌ಇ ಸೆನ್ಸೆಕ್ಸ್‌ 457 ಅಂಕಗಳ ಜಿಗಿತ ಕಾಣುವ ಮೂಲಕ 60,007 ಗಡಿ ಮುಟ್ಟಿದ್ದರೆ, ಎನ್‌ಎಸ್‌ಇ ನಿಫ್ಟಿ 130 ಅಂಕಗಳ ಏರಿಕೆಯೊಂದಿಗೆ 17, 792ರ ಗಡಿ ಮುಟ್ಟಿತ್ತು.

Budget 2023: ಕೈಮಗ್ಗ ಸೀರೆ ಪ್ರೀತಿ ಸಾಬೀತುಪಡಿಸಿದ ಸಚಿವೆ, ಗಾಢ ಕೆಂಪು ಬಣ್ಣದ ಸೀರೆಯಲ್ಲಿ ನಿರ್ಮಲಾ ಸೀತಾರಾಮನ್‌

ಇನ್ನೊಂದೆಡೆ ಬಜೆಟ್‌ ಮುನ್ನ ನಿಫ್ಟಿ ಆಯಿಲ್‌ ಮತ್ತು ಗ್ಯಾಸ್‌ ಇಂಡೆಕ್ಸ್‌ ಇಳಿಕೆ ಕಂಡಿದೆ. ಈ ಇಂಡೆಕ್ಸ್‌ ಶೇ. 0.9 ಇಳಿಕೆ ಕಂಡಿದೆ. ಎಟಿಜಿಎಲ್‌, ಏಜಿಸ್‌ ಕೆಮಿಕಲ್‌, ಜಿಎಸ್‌ಪಿಎಲ್‌, ಹಿಂದುಸ್ತಾನ್‌ ಪೆಟ್ರೋಲಿಯಂ ನಷ್ಟ ಕಂಡ ದೊಡ್ಡ ಕಂಪನಿಗಳಾಗಿವೆ. ಈ ಕಂಪನಿಯ ಷೇರುಗಳು ಕ್ರಮವಾಗಿ 0.6 ರಿಂದ ಶೇ.10ರಷ್ಟು ಇಳಿಕೆ ಕಂಡಿದೆ.

Latest Videos
Follow Us:
Download App:
  • android
  • ios