Karnataka News Live 11th April: EVM ಹ್ಯಾಕ್ ಮಾಡಬಹುದು: ತುಳಸಿ ಗಬ್ಬಾರ್ಡ್, ಚು.ಆಯೋಗ ಹೇಳಿದ್ದೇನು?
ಬೆಂಗಳೂರು (ಮಾ.11): ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಚರ್ಚೆಯಲ್ಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ (ಜಾತಿಗಣತಿ ವರದಿ-2015) ವರದಿ ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದ್ದು, ವರದಿಗೆ ಬಹುತೇಕ ಅನುಮೋದನೆ ದೊರೆಯುವ ಸಾಧ್ಯತೆಗಳಿವೆ. ಇದರ ನಡುವೆ ಅಮೆರಿಕದಿಂದ ಭಾರತಕ್ಕೆ ಕರೆತಂದಿರುವ ಉಗ್ರ ತಹಾವೂರ್ ರಾಣಾನನ್ನು 20 ದಿನಗಳ ಕಾಲ ವಶಕ್ಕೆ ನೀಡುವಂತೆ ಎನ್ಐಎ ಪಟಿಯಾಲ ಕೋರ್ಟ್ ಎದುರು ಅರ್ಜಿ ಸಲ್ಲಿಕೆ ಮಾಡಿದೆ.