Min read

ಯಾವ ದೇವಸ್ಥಾನದ ಪೂಜಾರಿಗೆ ಸಿಗುತ್ತೆ ಹೆಚ್ಚು ಸಂಬಳ?

Which temple priests get the highest salary?
temple priests

Synopsis

ಭಾರತದಲ್ಲಿ ಸಾಕಷ್ಟು ಪ್ರಸಿದ್ಧ ದೇವಸ್ಥಾನಗಳಿವೆ. ಅದ್ರಲ್ಲಿ ಕಾಶಿ ವಿಶ್ವನಾಥ, ಅಯೋಧ್ಯೆ ಹಾಗೂ ತಿರುಪತಿ ದೇವಸ್ಥಾನದ ಅರ್ಚಕರಿಗೆ ಎಷ್ಟು ಸಂಬಳ ಎಂಬ ಮಾಹಿತಿ ಇಲ್ಲಿದೆ. 
 

ಭಾರತದ ದೇವಸ್ಥಾನ (temple) ಗಳ ದೇಶ. ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಎಲ್ಲ ಕಡೆ ಪ್ರಸಿದ್ಧ ದೇವಸ್ಥಾನಗಳ ಸಂಖ್ಯೆ ಸಾಕಷ್ಟಿದೆ. ಪ್ರತಿ ದಿನ ದೂರದೂರುಗಳಿಂದ ದೇವಸ್ಥಾನಕ್ಕೆ ಬರುವ ಭಕ್ತರು, ತಮ್ಮ ಕೈಲಾದಷ್ಟು ಕಾಣಿಕೆಯನ್ನು ದೇವರ ಹುಂಡಿಗೆ ಹಾಕ್ತಾರೆ. ದೇವರ ಪೂಜೆ, ದೇವಸ್ಥಾನದ ಧಾರ್ಮಿಕ ಆಚರಣೆಗಳ ಹೊಣೆ ಅರ್ಚಕರ ಮೇಲಿರುತ್ತದೆ. ಪ್ರತಿ ದಿನ ನಿಯಮ ತಪ್ಪದೆ, ದೇವರಿಗೆ ಪೂಜೆ, ಅಭಿಷೇಕ, ನೈವೇದ್ಯ ಮಾಡ್ಬೇಕು. ಜೊತೆಗೆ ಹಬ್ಬಗಳಲ್ಲಿ ವಿಶೇಷ ಪೂಜೆ, ವಿಶೇಷ ಹೋಮ, ಹವನಗಳನ್ನು ವಿಧಿವತ್ತಾಗಿ ಮಾಡ್ಬೇಕು. ದೇವಸ್ಥಾನದಲ್ಲಿ ಕೆಲಸ ಮಾಡುವ ಅರ್ಚಕರಿಗೆ ತಿಂಗಳ ಸಂಬಳ ನೀಡಲಾಗುತ್ತದೆ. 

ಅಯೋಧ್ಯೆ ರಾಮ ಮಂದಿರ (Ayodhya Ram Mandir) : ಅಯೋಧ್ಯೆ ರಾಮಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಮರಣದ ನಂತರ ಪಂಡಿತ್ ಮೋಹಿತ್ ಪಾಂಡೆಯವರನ್ನು ಮುಖ್ಯ ಅರ್ಚಕರನ್ನಾಗಿ ನೇಮಕ ಮಾಡಲಾಗಿದೆ.  ದೇವಾಲಯದಲ್ಲಿ ರಾಮಲಾಲನ ದೈನಂದಿನ ಪೂಜೆ ಮತ್ತು ಧಾರ್ಮಿಕ ಆಚರಣೆಗಳ ಜವಾಬ್ದಾರಿ ಈಗ  ಮೋಹಿತ್ ಪಾಂಡೆ ಮೇಲಿದೆ. ಅವರಿಗೆ ಸಹಚರರಿದ್ದು, ದೇವರ ಕೆಲಸದಲ್ಲಿ ಅವರ ನೆರವು ಸಿಗಲಿದೆ.  ಮಾಧ್ಯಮ ವರದಿಗಳ ಪ್ರಕಾರ, ಅಯೋಧ್ಯೆ ರಾಮ ಮಂದಿರದಲ್ಲಿರುವ ಪ್ರಧಾನ ಅರ್ಚಕ ಪಂಡಿತ್ ಮೋಹಿತ್ ಪಾಂಡೆ ಅವರಿಗೆ 32,900 ರೂಪಾಯಿ ಸಂಬಳ ಸಿಗುತ್ತದೆ.  ಸಹಾಯಕ ಅರ್ಚಕರಿಗೆ 31 ಸಾವಿರ ರೂಪಾಯಿ ಸಂಬಳ ನೀಡಲಾಗುತ್ತದೆ.  ಈ ಹಿಂದೆ ಪ್ರಧಾನ ಅರ್ಚಕರ ವೇತನ 25,000 ರೂಪಾಯಿ ಮತ್ತು ಸಹಾಯಕ ಅರ್ಚಕರ ವೇತನ 20 ಸಾವಿರ ರೂಪಾಯಿ ಇತ್ತು. ಅರ್ಚಕರಿಗೆ ಸಂಬಳದ ಜೊತೆ  ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ವ್ಯವಸ್ಥೆ, ವಸತಿ, ಪ್ರಯಾಣ ಸೌಲಭ್ಯಗಳು ಮತ್ತು ವಿಶೇಷ ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಅಗತ್ಯ ಸೌಲಭ್ಯಗಳನ್ನು ಟ್ರಸ್ಟ್ ಒದಗಿಸುತ್ತದೆ.

ವರ್ಷಗಟ್ಟಲೆ ರಜೆ ಕೊಟ್ಟು ಉದ್ಯೋಗಿಗಳಿಗೆ ಲಕ್ಷ ಲಕ್ಷ ಸಂಬಳ ಕೊಡ್ತಿದೆ ಗೂಗಲ್​: ಕಾರಣ ಮಾತ್ರ ವಿಚಿತ್ರ!

ತಿರುಪತಿ ತಿರುಮಲ ದೇವಸ್ಥಾನ (Tirupati Tirumala Temple) : ಭಾರತದ ಅತ್ಯಂತ ಪ್ರಸಿದ್ಧ ಮತ್ತು ಶ್ರೀಮಂತ ದೇವಾಲಯಗಳಲ್ಲಿ ತಿರುಪತಿ ಬಾಲಾಜಿ ದೇವಾಲಯ ಸೇರಿದೆ.  ಭಕ್ತಿ ಮತ್ತು ನಂಬಿಕೆಯ ಕೇಂದ್ರ ಮಾತ್ರವಲ್ಲ, ಇಲ್ಲಿನ ಅರ್ಚಕರ ಸಂಬಳವೂ ದೇಶಾದ್ಯಂತ ಚರ್ಚೆಯ ವಿಷಯವಾಗಿ ಉಳಿದಿದೆ.  ವರದಿಗಳ ಪ್ರಕಾರ, ಇಲ್ಲಿನ ಪ್ರಧಾನ ಅರ್ಚಕರಿಗೆ ಪ್ರತಿ ತಿಂಗಳು ಸುಮಾರು 82,000 ರೂಪಾಯಿ ಸಂಬಳ ಸಿಗುತ್ತದೆ. ಹಿರಿಯ ಅರ್ಚಕರಿಗೆ 52,000 ರೂಪಾಯಿಗಳವರೆಗೆ ವೇತನವಿದೆ.  ಕಿರಿಯ ಅರ್ಚಕರಿಗೆ 30,000 ರೂಪಾಯಿಂದ 60,000 ರೂಪಾಯಿಗಳವರೆಗೆ ಸಂಬಳ ನೀಡಲಾಗುತ್ತದೆ.

ಕಾಶಿ ವಿಶ್ವನಾಥ ದೇವಸ್ಥಾನ (Kashi Vishwanath Temple) : ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಪ್ರತಿ ವರ್ಷ ಕೋಟ್ಯಂತರ ಭಕ್ತರು ಭೇಟಿ  ನೀಡ್ತಾರೆ.  ಸದ್ಯ ಕಾಶಿ ವಿಶ್ವನಾಥ ಪುರೋಹಿತರ ಸಂಬಳ ಹೆಚ್ಚಾಗಿದೆ. ಈಗ ಕಾಶಿ ವಿಶ್ವನಾಥ ದೇವಾಲಯದ ಪ್ರಧಾನ ಅರ್ಚಕರಿಗೆ ತಿಂಗಳಿಗೆ 90,000 ರೂಪಾಯಿ ಸಂಬಳ ನೀಡಲಾಗುತ್ತದೆ. ಕಿರಿಯ ಅರ್ಚಕರಿಗೆ ತಿಂಗಳಿಗೆ 80,000 ರೂಪಾಯಿ ವೇತನ ಸಿಗುತ್ತದೆ. ಇನ್ನು ಸಹಾಯಕ ಅರ್ಚಕರಿಗೆ 65,000 ರೂಪಾಯಿ ಸಂಬಳ ನೀಡಲಾಗುತ್ತದೆ.

AAI ನೇಮಕಾತಿ 2025: ಬೆಂಗಳೂರು ಏರ್ಪೋರ್ಟ್‌ನಲ್ಲಿ 309 ಜೂ.

ಅರ್ಚಕರ ನೇಮಕ ಹೇಗೆ? : ಪ್ರತಿಯೊಂದು ದೇವಸ್ಥಾನದ ಟ್ರಸ್ಟ್, ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ತನ್ನದೆ ನಿಯಮ ಹೊಂದಿದೆ. ಆದ್ರೆ ಕೆಲವೊಂದು ಸಾಮಾನ್ಯ ನಿಯಮಗಳನ್ನು ಪಾಲನೆ ಮಾಡಲಾಗುತ್ತದೆ. ಅರ್ಚಕರ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು. ಕನಿಷ್ಠ 8 ನೇ ತರಗತಿಯವರೆಗೆ ಶಿಕ್ಷಣ ಪಡೆದಿರಬೇಕು. ಶುದ್ಧ ಸಸ್ಯಾಹಾರಿ, ಮದ್ಯಪಾನ ಮಾಡದ ಮತ್ತು ಕ್ರಿಮಿನಲ್ ಹಿನ್ನಲೆ ಹೊಂದಿರದ ವ್ಯಕ್ತಿಯನ್ನು ಈ ಹುದ್ದೆಗೆ ನೇಮಿಸಲಾಗುತ್ತದೆ. ಅಯೋಧ್ಯೆ ರಾಮ ದೇವಾಲಯದ ಪ್ರಧಾನ ಅರ್ಚಕ ಮೋಹಿತ್ ಪಾಂಡೆ, ಅರ್ಚಕ ಹುದ್ದೆಗೆ ಅಗತ್ಯವಾದ ವೈದಿಕ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಸಾಮವೇದದಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಅವರು ವೆಂಕಟೇಶ್ವರ ವೇದ ವಿಶ್ವವಿದ್ಯಾಲಯದಿಂದ ಆಚಾರ್ಯ ಪದವಿಯನ್ನು ಪಡೆದಿದ್ದಾರೆ. 

Latest Videos