ಸಾಲ ಕೊಟ್ಟ ಹಣವನ್ನು ವಾಪಸ್ ಪಡೆಯುವುದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಚಿಕ್ಕ ಮೊತ್ತವಾದರೆ ಬಿಡಬಹುದು, ಆದರೆ ದೊಡ್ಡ ಮೊತ್ತವಾದರೆ ವಕೀಲರ ಸಲಹೆ ಪಡೆಯಿರಿ. ಸಾಲಗಾರನಿಗೆ ಲೀಗಲ್ ನೋಟಿಸ್ ಕಳುಹಿಸಿ, ನಿಮ್ಮ ಹತ್ತಿರವಿರುವ ಹಣ ವರ್ಗಾವಣೆ ದಾಖಲೆಗಳನ್ನು ಇಟ್ಟುಕೊಳ್ಳಿ. ನೋಟಿಸ್‌ಗೆ ಪ್ರತಿಕ್ರಿಯೆ ಬರದಿದ್ದರೆ, ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ, ಸಾಲ ನೀಡಿದ ಬಗ್ಗೆ ಸಾಬೀತುಪಡಿಸಿ, ನ್ಯಾಯಾಲಯದ ಆದೇಶದಂತೆ ಹಣವನ್ನು ವಸೂಲಿ ಮಾಡಿ.

ಸಂಬಂಧಿಕರು, ಸ್ನೇಹಿತರು, ಸಹೋದ್ಯೋಗಿ, ನೆರೆಹೊರೆಯವರು ಅಥವಾ ಪರಿಚಯಸ್ಥರು ಎಂದು ಸಾಲ ಕೊಟ್ಟರೆ ವಾಪಸ್ ಕೊಡದೇ ಸತಾಯಿಸುತ್ತಾರೆಯೇ? ಅಥವಾ ಸಾಲ ವಾಪಸ್ ಕೊಡಲ್ಲ ಎಂದಿದ್ದಾರೆಯೇ? ಇಲ್ಲಿದೆ ನೋಡಿ ಸಾಲ ವಸೂಲಿ ಮಾಡುವ ಹೊಸ ವಿಧಾನ.

ನಮ್ಮ ಜೀವನದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ನಾವು ಒಬ್ಬರಿಗೆ ಆಪತ್ಕಾಲದಲ್ಲಿ ಸಹಾಯ ಮಾಡಿದರೆ, ನಮಗೆ ಆಪತ್ಕಾಲ ಬಂದಾಗ ಅವರೂ ನೆರವಾಗುತ್ತಾರೆ ಎಂಬುದು ನಮ್ಮ ನಂಬಿಕೆಯಾಗಿದೆ. ಅದೇ ರೀತಿ ಹಣಕಾಸಿನ ವಿಚಾರದಲ್ಲಿಯೂ ನಾವು ಒಬ್ಬರಿಗೆ ಹಣ (ಸಾಲ) ಕೊಡುವುದು, ಸಾಲ ಪಡೆಯುವುದು ಕೂಡ ಸಾಮಾನ್ಯ. ಆದರೆ, ಇಲ್ಲಿ ನಾವು ಕೊಟ್ಟ ಸಾಲವನ್ನು ಸರಿಯಾದ ಸಮಯಕ್ಕೆ ವಾಪಸ್ ಕೊಡುವುದೇ ಇಲ್ಲ. ನಾವು ಎಷ್ಟೇ ಕೇಳಿದರೂ ಅದನ್ನು ವಾಪಸ್ ಕೊಡದೇ ಮೊಂಡಾಟ ಮಾಡುತ್ತಿರುತ್ತಾರೆ. ಕೆಲವರು ಸರಿಯಾದ ಸಮಯಕ್ಕೆ ದುಡ್ಡು ವಾಪಸ್ ಕೊಟ್ಟರೆ, ನಂಬಿಕೆ ಉಳಿಯುತ್ತದೆ, ಜೊತೆಗೆ ಸಂಬಂಧವೂ ಗಟ್ಟಿಯಾಗಿ ಉಳಿಯುತ್ತದೆ. ಆದರೆ, ಕೆಲವರು ದುಡ್ಡು ತಗೊಂಡು ವಾಪಸ್ ಕೊಡೋಕೆ ಸತಾಯಿಸ್ತಾರೆ. ಇಲ್ಲವೆಂದರೆ ನೇರವಾಗಿ ನಿನಗೆ ಹಣ ಕೊಡಲ್ಲ, ಏನು ಮಾಡಿಕೊಳ್ತೀಯೋ ಮಾಡಿಕೋ ಎಂದು ಸಾಲ ಕೊಟ್ಟವರಿಗೆ ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. ನೀವು ಕೂಡ ಯಾರಿಗೆ ದೊಡ್ಡ ಮೊತ್ತದ ಹಣವನ್ನು ಸಾಲ ಕೊಟ್ಟು ಅವರು ವಾಪಸ್ ಕೊಡುತ್ತಿಲ್ಲವೇ? ಹಾಗಾದರೆ ನೀವು ಇಂಥವರಿಂದ ಹಣವನ್ನು ವಾಪಸ್ ಪಡೆಯುವುದು ಹೇಗೆ ಎಂಬ ಸಲಹೆಗಳು ಇಲ್ಲಿವೆ ನೋಡಿ.

ಇದನ್ನೂ ಓದಿ: ಬೆಂಗಳೂರಿನ ಮಾನ 3 ಕಾಸಿಗೆ ಹರಾಜು; ಟೆಕ್ಕಿಯ ಪೋಸ್ಟ್ ಭಾರಿ ವೈರಲ್!

ಚಿಕ್ಕ ಮೊತ್ತವಾದರೆ ಬಿಡಬಹುದು, ದೊಡ್ಡ ಮೊತ್ತವಾದರೆ ಬಿಡಬೇಡಿ: ನೀವು ಲಕ್ಷಾಂತರ ರೂಪಾಯಿ ವ್ಯವಹಾರ ಮಾಡುವವರಾಗಿದ್ದರೆ, ನೀವು ಯಾರಿಗಾದರೂ 100-5000 ರೂಪಾಯಿ ಸಾಲ ಕೊಟ್ಟು ಅವರನ್ನು ವಾಪಸ್ ಹಣ ಕೇಳಿದರೂ ಕೊಡುತ್ತಿಲ್ಲವೆಂದಾದರೆ ಬಿಟ್ಟುಬಿಡುವುದೇ ಒಳಿತು. ಒಂದಮ್ಮೆ ನಿಮ್ಮ ಆರ್ಥಿಕ ಪರಿಸ್ಥಿತಿಯೂ ಸಂಕಷ್ಟದಲ್ಲಿದ್ದರೆ ನೀವು ಹಣವನ್ನು ವಾಪಸ್ ಪಡೆಯುವುದು, ಬಿಡುವುದು ನಿಮ್ಮ ಇಷ್ಟ. ಆದರೆ, 50,000, 1 ಲಕ್ಷ ಅಥವಾ 5 ಲಕ್ಷ ರೂ.ನಷ್ಟು ದೊಡ್ಡ ಮೊತ್ತದ ಹಣವನ್ನು ಸಾಲ ಕೊಟ್ಟಿದ್ದರೆ ಅದನ್ನು ವಸೂಲಿ ಮಾಡದೇ ಬಿಡುವುದು ಸರಿಯಲ್ಲ. ದೊಡ್ಡ ಮೊತ್ತ ವಾಪಸ್ ಬರದೇ ಇದ್ದರೆ ನಿಮಗೆ ಆರ್ಥಿಕ ನಷ್ಟ ಆಗುತ್ತದೆ. ಜೊತೆಗೆ ಮುಂದೆ ಅವರು ನಿಮ್ಮಿಂದ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ಪಡೆದು ಹೀಗೆಯೇ ಕೊಡದೇ ಯಾಮಾರಿಸಬಹುದು ಎನ್ನುವ ತಪ್ಪು ಸಂದೇಶ ಇತರರಿಗೂ ಹೋಗುತ್ತದೆ.

ಇದನ್ನೂ ಓದಿ: ಭಾರತದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಸಂಬಳ? ಕಡಿಮೆ ಎಲ್ಲಿದೆ?

ಹಣ ವಸೂಲಿ ಮಾಡಲು ಏನು ಮಾಡಬೇಕು?

  • ವಕೀಲರ ಸಲಹೆ ತಗೊಳ್ಳಿ.
  • ಸಾಲದ ಹಣ ವಾಪಸ್ ಕೊಡಲ್ಲ ಅಂತ ಡೈರೆಕ್ಟ್ ಆಗಿ ಹೇಳಿದ್ದರೆ, ಫಸ್ಟ್ ಒಬ್ಬ ಎಕ್ಸ್ಪೀರಿಯೆನ್ಸ್ ಇರೋ ವಕೀಲರ ಹತ್ರ ಸಲಹೆ ತಗೊಳ್ಳಿ. ವಕೀಲರು ನಿಮ್ಮ ಪರಿಸ್ಥಿತಿ ಅರ್ಥ ಮಾಡಿಕೊಂಡು ಸರಿಯಾದ ಕಾನೂನು ದಾರಿ ತೋರಿಸುತ್ತಾರೆ
  • ವಕೀಲರ ಸಹಾಯದಿಂದ ಸಾಲಗಾರನಿಗೆ ಲೀಗಲ್ ನೋಟಿಸ್ ಕಳಿಸಿ.
  • ನೋಟಿಸ್‌​ನಲ್ಲಿ ಸಾಲದ ಮೊತ್ತ, ದಿನಾಂಕ, ದುಡ್ಡು ವಾಪಸ್ ಕೊಡದಿದ್ದರೆ ಮುಂದೆ ಆಗುವ ಪರಿಣಾಮಗಳ ಬಗ್ಗೆ ಬರೆಯಿರಿ.
  • ನಿಮ್ಮ ಹತ್ತಿರ ಟ್ರಾನ್ಸಾಕ್ಷನ್ ಪ್ರೂಫ್ ಇರಬೇಕು. ಬ್ಯಾಂಕ್ ವರ್ಗಾವಣೆ ದಾಖಲೆ, ಯುಪಿಐ ರಸೀದಿ ಅಥವಾ ಚಾಟ್ಸ್ ಮತ್ತೆ ಕಾಲ್ ರೆಕಾರ್ಡ್ಸ್ ಇರಬೇಕು.
  • ಲಾಯರ್ ನೋಟಿಸ್‌​ಗೆ ರಿಪ್ಲೈ ಬರದೇ ಇದ್ದರೆ ಅವರ ವಿರುದ್ಧ ಸಿವಿಲ್ ಕೇಸ್ ಫೈಲ್ ಮಾಡಿ.
  • ನೋಟಿಸ್ ಕೊಟ್ಟ ಮೇಲೂ ಅವರು ದುಡ್ಡು ವಾಪಸ್ ಕೊಡೋಕೆ ರೆಡಿ ಇಲ್ಲವೆಂದರೆ, ನೀವು ಕೋರ್ಟ್‌ಗೆ ಹೋಗಬಹುದು.
  • ವಕೀಲರ ಸಹಾಯದಿಂದ ಸಾರಾಂಶ ವಸೂಲಾತಿ ಮೊಕದ್ದಮೆ ಹೂಡಿ.
  • ಕೋರ್ಟ್‌​ನಲ್ಲಿ ನೀವು ಅವರಿಗೆ ಇಂತಿಂಥ ದಿನಾಂಕದಂದು ಎಷ್ಟು ಹಣ ಸಾಲ ಕೊಟ್ಟಿದ್ದೀರಿ, ಆದರೆ ಅವರು ವಾಪಸ್ ಕೊಡುತ್ತಿಲ್ಲವೆಂದು ಸಾಬೀತುಪಡಿಸಿ.
  • ಕೋರ್ಟ್ ಅದನ್ನ ನೋಡಿ ದುಡ್ಡು ವಾಪಸ್ ಕೊಡೋಕೆ ಆದೇಶ ಮಾಡುತ್ತದೆ.