ಐಟಿ ರಾಜಧಾನಿ ಎಂದೇ ಖ್ಯಾತವಾದ ಬೆಂಗಳೂರಿನಲ್ಲಿ ಕಳ್ಳರ ಹಾವಳಿ ಮಿತಿಮೀರಿದೆ. ಈ ಬಾರಿ, ಕೆ.ಆರ್. ಪುರಂನ ಅಯ್ಯಪ್ಪನಗರದಲ್ಲಿ ಬ್ರಾಂಡೆಡ್ ಶೂಗಳು ಮತ್ತು ಚಪ್ಪಲಿಗಳನ್ನು ಕದಿಯುವ ಸೈಲೆಂಟ್ ಕಳ್ಳನೊಬ್ಬ ತನ್ನ ಕೃತ್ಯವನ್ನು ತಡರಾತ್ರಿಯಲ್ಲಿ ಅಂಗವಾಗಿ ನಡೆಸಿದ್ದಾನೆ.
ಬೆಂಗಳೂರು (ಏ.11): ಐಟಿ ರಾಜಧಾನಿ ಎಂದೇ ಖ್ಯಾತವಾದ ಬೆಂಗಳೂರಿನಲ್ಲಿ ಕಳ್ಳರ ಹಾವಳಿ ಮಿತಿಮೀರಿದೆ. ಈ ಬಾರಿ, ಕೆ.ಆರ್. ಪುರಂನ ಅಯ್ಯಪ್ಪನಗರದಲ್ಲಿ ಬ್ರಾಂಡೆಡ್ ಶೂಗಳು ಮತ್ತು ಚಪ್ಪಲಿಗಳನ್ನು ಕದಿಯುವ ಸೈಲೆಂಟ್ ಕಳ್ಳನೊಬ್ಬ ತನ್ನ ಕೃತ್ಯವನ್ನು ತಡರಾತ್ರಿಯಲ್ಲಿ ಅಂಗವಾಗಿ ನಡೆಸಿದ್ದಾನೆ.
ತಡರಾತ್ರಿ 12:30ರ ಸುಮಾರಿಗೆ ನಡೆದ ಈ ಘಟನೆಯಲ್ಲಿ, ತಲೆಗೆ ಟೋಪಿ ಧರಿಸಿ ಬಂದ ಆರೋಪಿಯೊಬ್ಬ, ಪ್ರಕಾಶ್ ಮುನಿಸ್ವಾಮಿ ಎಂಬುವರಿಗೆ ಸೇರಿದ ಬಿಲ್ಡಿಂಗ್‌ಗೆ ನುಗ್ಗಿದ್ದಾನೆ. ಬಾಡಿಗೆ ಮನೆಗಳ ಮುಂದೆ ಇರಿಸಲಾಗಿದ್ದ ಬ್ರಾಂಡೆಡ್ ಶೂಗಳನ್ನು ಕದ್ದ ಆಸಾಮಿ, ಕಾಂಪೌಂಡ್ ಹಾರಿ ಪರಾರಿಯಾಗಿದ್ದಾನೆ. ಆರೋಪಿಯ ಈ ಕೃತ್ಯ ಸಂಪೂರ್ಣವಾಗಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರಿಗೆ ದೃಶ್ಯಾವಳಿಗಳು ಲಭ್ಯವಾಗಿವೆ.
ಕೆ.ಆರ್. ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ, ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ. ಕಳ್ಳನಿಗಾಗಿ ಶೋಧ ಕಾರ್ಯ ಚುರುಕುಗೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಇದನ್ನೂ ಓದಿ:ಪುತ್ತೂರು ತಲವಾರು ತೋರಿಸಿ ಶೋಕಿ, ಇಬ್ಬರು ಯುವಕರು ಅರೆಸ್ಟ್!
ಬೆಂಗಳೂರಿನಂತಹ ಮಹಾನಗರದಲ್ಲಿ ಇಂತಹ ಚಿಕ್ಕಪುಟ್ಟ ಕಳ್ಳತನಗಳು ನಿರಂತರವಾಗಿ ನಡೆಯುತ್ತಿರುವುದು, ಭದ್ರತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಸ್ಥಳೀಯರು ತಮ್ಮ ವಸ್ತುಗಳನ್ನು ಸುರಕ್ಷಿತವಾಗಿಡಲು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದು ಪೊಲೀಸರು ಸಲಹೆ ನೀಡಿದ್ದಾರೆ.
ಕೆ.ಆರ್. ಪುರಂ ಪೊಲೀಸ್ ಠಾಣೆ ಈ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಆರೋಪಿಯನ್ನು ಶೀಘ್ರವೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದೆ.
