ಸೀಮಾ ಹೈದರ್ ಮೊನ್ನೆಯಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಅವರು ತಮ್ಮ ಮಗುವಿಗೆ ಭಾರ್ತಿ ಮೀನಾ ಎಂದು ಹೆಸರಿಟ್ಟಿದ್ದಾರೆ.
ನೋಯ್ಡಾ: ಆನ್‌ಲೈನ್‌ನಲ್ಲಿ ಪಬ್ಜಿ ಗೇಮ್ ಆಡುವ ವೇಳೆ ಪ್ರೀತಿಯಲ್ಲಿ ಬಿದ್ದು ತನ್ನ ಭಾರತೀಯ ಮೂಲದ ಪ್ರೇಮಿಗಾಗಿ ದೇಶ ಬಿಟ್ಟು ಓಡಿ ಬಂದ ಸೀಮಾ ಹೈದರ್ ಮೊನ್ನೆಯಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಅವರು ತಮ್ಮ ಮಗುವಿಗೆ ಭಾರ್ತಿ ಮೀನಾ ಎಂದು ಹೆಸರಿಟ್ಟಿದ್ದಾರೆ. ಮಾರ್ಚ್ 18 ರಂದು ಸೀಮಾ ಗ್ರೇಟರ್ ನೋಯ್ಡಾದ ಆಸ್ಪತ್ರೆಯೊಂದರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಮಗುವಿಗೆ ನಾಮಕರಣ ಸಮಾರಂಭವೂ ನಡೆದಿದ್ದು, ರಬುಪುರ ಗ್ರಾಮದಲ್ಲಿ ಹಿಂದೂ ಸಂಪ್ರದಾಯಗಳಂತೆ ಹೆಣ್ಣು ಮಗುವಿಗೆ ನಾಮಕರಣ ಸಮಾರಂಭ ಆಚರಿಸಿ ಹೆಣ್ಣು ಮಗುವಿಗೆ ಭಾರ್ತಿ ಮೀನಾ ಎಂದು ಹೆಸರಿಡಲಾಯ್ತು. ಈ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಎಪಿ ಸಿಂಗ್ ಕೂಡ ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ಸೀಮಾ ಮತ್ತು ಸಚಿನ್ ಮೀನಾ ತಮ್ಮ ಮಗಳಿಗೆ 'ಭಾರತಿ ಮೀನಾ' ಎಂದು ಹೆಸರಿಟ್ಟರು. ಶ್ರೀಕೃಷ್ಣನ ಭಕ್ತೆ ಮೀರಾ ಬಾಯಿ ಅವರಿಂದ ಪ್ರೇರಿತರಾಗಿ ತಮ್ಮ ಮಗಳಿಗೆ ಮೀರಾ ಅಥವಾ ಮೀರು ಎಂಬ ಅಡ್ಡಹೆಸರನ್ನು ಇಟ್ಟಿದ್ದೇನೆ ಎಂದು ಸೀಮಾ ಇದೇ ವೇಳೆ ಹೇಳಿಕೊಂಡಿದ್ದಾರೆ. ತನಗೆ ಹೆಣ್ಣು ಮಗುವಾದರೆ ಮಗಳಿಗೆ ಮೀರಾ ಎಂದು ಹೆಸರಿಡಬೇಕೆಂದು ಮೊದಲಿನಿಂದಲೂ ಬಯಸುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸೀಮಾ ಹೈದರ್ ಮಹತ್ವದ ನಿರ್ಧಾರ, ಕುಂಭಮೇಳಕ್ಕೆ 51 ಲೀಟರ್ ಹಾಲು ಕೊಡೋದಾಗಿ ಘೋಷಣೆ!
ಹಲವರು ಮತ್ತು ಪುರೋಹಿತರು ಸಹ ಭಾರತಿ ಎಂಬ ಹೆಸರನ್ನು ಸೂಚಿಸಿದರು. ಇದರ ಅರ್ಥ ಸುಂದರವಾದದ್ದು ಮತ್ತು ನಮ್ಮ ದೇಶಕ್ಕೆ ಸಂಬಂಧಿಸಿದ್ದು, ಲಕ್ಷ್ಮಿ ನಮ್ಮ ಮನೆಗೆ ಬಂದಿದ್ದಾಳೆ ಎಂದು ಸೀಮಾ ಹೈದರ್ ಹೇಳಿಕೊಂಡಿದ್ದಾರೆ. ಸೀಮಾ ತನ್ನ ಸಂತೋಷವನ್ನು ವ್ಯಕ್ತಪಡಿಸುತ್ತಾ, ನಮಗೆ ಮಗಳು ಮಗನಿಗೆ ಸಮಾನ. ಲಕ್ಷ್ಮಿ ದೇವಿ ನಮ್ಮ ಮನೆಗೆ ಬಂದಂತೆ ಭಾಸವಾಗುತ್ತಿದೆ ಎಂದಿದ್ದಾರೆ.. ಸೀಮಾಳಿಗೆ ಇದು ಐದನೇ ಮಗುವಾಗಿದ್ದರೆ ಸಚಿನ್ ಜೊತೆಗಿನ ಮೊದಲ ಮಗು ಇದಾಗಿದೆ. ಈ ಎಲ್ಲಾ ಭಾರತೀಯ ಸಂಪ್ರದಾಯಗಳು ತನಗೆ ಹೊಸದು ಮತ್ತು ಸುಂದರವಾಗಿವೆ. ಭಾರತದಲ್ಲಿ ಇಲ್ಲಿ ಎಲ್ಲವೂ ತುಂಬಾ ಸುಂದರವಾಗಿರುತ್ತದೆ ಎಂದು ಸೀಮಾ ಹೈದರ್ ಹೇಳಿದ್ದಾರೆ.
ಪಾಕಿಸ್ತಾನದ ಸೀಮಾ ಹೈದರ್ ಹಾಗೂ ಸಚಿನ್ ದಂಪತಿ ಹೆಸರಲ್ಲಿ ₹100 ಕೋಟಿ ವಂಚನೆ!
ಪಬ್ಟಿ ಆಡುವ ವೇಳೆ ಆನ್‌ಲೈನ್‌ನಲ್ಲಿ ಶುರುವಾದ ಪ್ರೀತಿ
ಸಚಿನ್ ಸೀಮಾ ಇಬ್ಬರು ಪಬ್ಜಿ ಗೇಮ್ ಕ್ರೇಜ್ ಹೊಂದಿದ್ದು, ಪಬ್ಜಿ ಆಡುವ ವೇಳೆ ಇವರಿಬ್ಬರಿಗೂ ಆನ್‌ಲೈನ್‌ನಲ್ಲೇ ಪ್ರೀತಿಯಾಗಿತ್ತು. ಇದಾದ ನಂತರ ಸಚಿನ್ ಮೀನಾ ಜೊತೆ ಸೇರುವ ತವಕದಿಂದ ಸೀಮಾ ಹೈದರ್ 2023ರಲ್ಲಿ ತನ್ನ ನಾಲ್ವರು ಮಕ್ಕಳೊಂದಿಗೆ ಭಾರತವನ್ನು ಅಕ್ರಮವಾಗಿ ಪ್ರವೇಶಿಸಿದ್ದಳು. ವರದಿಯ ಪ್ರಕಾರ ನೇಪಾಳ ಮೂಲಕ ಭಾರತ ಪ್ರವೇಶಿಸಿದ್ದ ಈ ಪುಟ್ಟ ಕುಟುಂಬ ಬಳಿಕ ಸಿಕ್ಕಬಿದ್ದಿತ್ತು. ಈ ವೇಳೆ ಸೀಮಾ ಹೈದರ್ ಪ್ರಿಯಕರನಿಗಾಗಿ ದೇಶ ತೊರೆದು ಮಕ್ಕಳೊಂದಿಗೆ ಬಂದಿದ್ದಾಗಿ ಹೇಳಿಕೊಂಡಿದ್ದಳು. ಹೀಗೆ ಬಂಧನಕ್ಕೊಳಗಾದ ಇವರಿಗೆ ಜಾಮೀನು ಸಿಕ್ಕ ನಂತರ ಪರಿಸ್ಥಿತಿ ಬದಲಾಗಿತ್ತು. ಇಬ್ಬರೂ ತಾವು ಈಗಾಗಲೇ ನೇಪಾಳದ ಪಶುಪತಿನಾಥ ದೇವಸ್ಥಾನದಲ್ಲಿ ಪವಿತ್ರ ಮದುವೆ ಮಾಡಿಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದರು. ಪ್ರಸ್ತುತ ದಂಪತಿ ಉತ್ತರ ಪ್ರದೇಶದ ನೋಯ್ಡಾದಲ್ಲಿ ಮಕ್ಕಳೊಂದಿಗೆ ಜೊತೆಯಾಗಿ ವಾಸ ಮಾಡುತ್ತಿದ್ದಾರೆ. ಇವರ ಪ್ರೇಮ ಕತೆ ಭಾರತ ಮಾತ್ರವಲ್ಲದೇ ಪಾಕಿಸ್ತಾನದಲ್ಲೂ ದೊಡ್ಡ ಸಂಚಲನ ಸೃಷ್ಟಿಸಿತ್ತು.
ಪಾಕಿಸ್ತಾನದ ಸೀಮಾ ಹೈದರ್ ಹಾಗೂ ಸಚಿನ್ ದಂಪತಿ ಹೆಸರಲ್ಲಿ ₹100 ಕೋಟಿ ವಂಚನೆ!
ಕೆಲ ದಿನಗಳ ಹಿಂದೆ ಸೀಮಾ ಹೈದರ್ ಮತ್ತು ಆಕೆಯನ್ನು ಮದುವೆಯಾದ ಸಚಿನ್ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು 100 ಕೋಟಿ ರೂ. ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಣಾಚಲ ಪ್ರದೇಶ ಪೊಲೀಸರು ಬಿಹಾರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.
