ಕಿಚ್ಚ ಸುದೀಪ್ ಸದ್ಯಕ್ಕೆ 'ಬಿಲ್ಲಾ ರಂಗ ಭಾಷಾ' ಚಿತ್ರದಲ್ಲಿ ನಿರತರಾಗಿದ್ದಾರೆ, ಅನೂಪ್ ಭಂಡಾರಿ ನಿರ್ದೇಶನವಿದೆ. ಬಿಗ್‌ಬಾಸ್‌ನಿಂದ ಹೊರಬಂದ ನಂತರ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಂದರ್ಶನದಲ್ಲಿ, ನಟಿಯರೊಂದಿಗೆ ರೊಮಾನ್ಸ್ ಮಾಡುವಾಗ ಆಗುವ ತೊಂದರೆಗಳ ಬಗ್ಗೆ ಮಾತನಾಡಿದ್ದಾರೆ. ಡಾನ್ಸ್ ಕಷ್ಟವೆಂದೂ ಹೇಳಿಕೊಂಡಿದ್ದಾರೆ. ಬಿಗ್‌ಬಾಸ್ ಬಿಡಲು ಕಾರಣವನ್ನೂ ತಿಳಿಸಿದ್ದಾರೆ, ಎಲ್ಲರನ್ನೂ ಸರಿಪಡಿಸಲು ಸಾಧ್ಯವಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸದ್ಯ ಕಿಚ್ಚ ಸುದೀಪ್ ಬಿಲ್ಲಾ ರಂಗ ಭಾಷಾ’ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ಇದೇ 16ರಂದು ಚಿತ್ರ ಸೆಟ್ಟೇಲರಿದೆ ಎಂದು ನಿನ್ನೆಯಷ್ಟೇ ಅಪ್‌ಡೇಟ್ ಕೊಟ್ಟಿದ್ದರು. ‘ವಿಕ್ರಾಂತ್ ರೋಣ’ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆ. ಬಿಗ್‌ಬಾಸ್‌ಗೆ ಗುಡ್‌ಬೈ ಹೇಳಿದ ಬಳಿಕ ಸುದೀಪ್, ಸಿನಿಮಾದಲ್ಲಿ ಬಿಜಿಯಾಗಿದ್ದು, ಈ ಚಿತ್ರಕ್ಕಾಗಿ ದೇಹವನ್ನು ಅದ್ಭುತವಾಗಿ ಹುರಿಗಟ್ಟಿಸಿಕೊಂಡಿದ್ದಾರೆ.‘ಪೈಲ್ವಾನ’ ಸಿನಿಮಾಕ್ಕೆ ರೆಡಿಯಾದ ರೀತಿಯಲ್ಲಿ ಜಿಮ್ ಟ್ರೈನಿಂಗ್ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇವರ ಈ ಚಿತ್ರದ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ.
ಈ ಸಂದರ್ಭದಲ್ಲಿ ಚಿತ್ರಗಳಲ್ಲಿ ರೊಮಾನ್ಸ್ ಮಾಡುವುದು, ನಟಿಯರ ಜೊತೆ ಕಿಸ್ ಸೀನ್‌ನಲ್ಲಿ ಭಾಗವಹಿಸುವುದು ನಟರಾದವರಿಗೆ ಎಷ್ಟು ಸಮಸ್ಯೆ ಎನ್ನುವ ಕುರಿತೂ ಸುದೀಪ್ ಮಾತನಾಡಿದ್ದಾರೆ. ಆ್ಯಂಕರ್ ಅನುಶ್ರೀ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿರೋ ಸಂದರ್ಶನ ಇದಾಗಿದೆ. ಅದರಲ್ಲಿ ಅನುಶ್ರೀ ಅವರು, ಅವರು ಸರ್ ನಿಮಗೆ ತುಂಬಾ ಕಷ್ಟ ಎನ್ನಿಸುವುದು ಯಾವುದು? ಆ್ಯಕ್ಷನ್ನಾ, ರೊಮಾನ್ಸಾ ಅಥ್ವಾ ಡಾನ್ಸಾ ಎಂದು ಪ್ರಶ್ನಿಸಿದ್ದಾರೆ. ಆಗ ಸುದೀಪ್ ರೊಮಾನ್ಸ್ ಎಂದಿದ್ದಾರೆ. ಅದ್ಯಾಕೆ ಎಂದು ಸ್ಪಷ್ಟೀಕರಣ ನೀಡಿರೋ ನಟ, ನಟಿಯರ ಜೊತೆ ರೊಮಾನ್ಸ್ ಮಾಡುವಾಗ ತಮಗೆ ಏನಾಲ್ಲಾ ಕಷ್ಟ ಆಗುತ್ತದೆ ಎನ್ನುವುದನ್ನು ಹೇಳಿದ್ದಾರೆ.
ಆ ನಟ ನನ್ನ ಕ್ರಷ್, ಅವ್ರ ಮದ್ವೆಯಾದಾಗ ಹಾರ್ಟ್ ಬ್ರೇಕ್ ಆಗೋಯ್ತು- ಬಿಕ್ಕಿ ಬಿಕ್ಕಿ ಅತ್ತೆ ಎಂದ ಸಾನ್ವಿ ಸುದೀಪ್
ರೊಮಾನ್ಸ್ ಅನ್ನೋದು ಎದುರಿಗಿರುವ ಕಾಸ್ಟಿಂಗ್ ಅಂದರೆ ನಟಿಯರ ಮೇಲೆ ಹೋಗತ್ತೆ. ಕೆಲವೊಮ್ಮೆ ನಟಿಯರು ಫ್ರೆಂಡ್ಸ್ ಆಗಿರ್ತಾರೆ, ಈಸಿಯಾಗಿ ನಡೆದು ಹೋಗುತ್ತೆ. ಆದರೆ ಕೆಲವರು ಮೇಕಪ್ ಮೇಲೆ ಸಿಕ್ಕಾಪಟ್ಟೆ ಕಾನ್ಶಿಯಸ್ ಆಗ್ತಿರ್ತಾರೆ. ಅದೇನೂ ತಪ್ಪು ಅನ್ನೋಕೆ ಆಗಲ್ಲ. ಆದರೆ ಆಗ ಸ್ವಲ್ಪ ಕಷ್ಟ ಆಗುತ್ತೆ ಎನ್ನುತ್ತಲೇ ಅವರು ರೊಮಾನ್ಸ್ ಮಾಡಲು ಹೋಗುವಾಗ ಮೇಕಪ್ ಹಾಳಾಗತ್ತೆ, ಕೂದಲು ಹಾಳಾಗತ್ತೆ ಎಂದು ಇಲ್ಲಿ ಮುಟ್ಟಿ, ಅಲ್ಲಿ ಮುಟ್ಟಬೇಡಿ ಎಂದೆಲ್ಲಾ ಹೇಳ್ತಾರೆ, ಆಗ ತುಂಬಾ ಕಷ್ಟವಾಗಿ ಬಿಡುತ್ತೆ ಎಂದಿದ್ದಾರೆ.
ಡಾನ್ಸ್ ಎಂದರೆ ತಮಗೆ ಕಷ್ಟ ಎಂದೂ ಒಪ್ಪಿಕೊಂಡಿದ್ದಾರೆ ಸುದೀಪ್. ಆದ್ದರಿಂದ ಡಾನ್ಸ್ ಸೀನ್ ಬಂದಾಗಲೆಲ್ಲಾ ಮೂಡ್ ಡಿಫರೆಂಟ್ ಆಗಿರುತ್ತೆ. ಒಂದು ವೇಳೆ ಯಾವುದಾದರೂ ಸಿನಿಮಾದಲ್ಲಿ ಒಳ್ಳೆಯ ಡಾನ್ಸ್ ಮಾಡಿದ್ದೆ ಅಂದ್ರೆ, ಆಗ ಯಾರೋ ಒಬ್ಬ ಡಾನ್ಸ್ ಬರದ ನಟನ ವಿಡಿಯೋ ತೋರಿಸಿ ಡಾನ್ಸ್ ಮಾಡಿಸಿದ್ದಾರೆ ಎಂದೇ ಅರ್ಥ ಎಂದಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಸುದೀಪ್ ಅವರು ತಾವು ಬಿಗ್‌ಬಾಸ್ ಬಿಟ್ಟ ಕಾರಣವನ್ನು ನೀಡಿದ್ದರು. 'ಎಲ್ಲರನ್ನೂ ರಿಪೇರಿ ಮಾಡ್ತಾ ಕುಳಿತುಕೊಳ್ಳಲು ನಾನು ಬಂದಿಲ್ಲ, ಎಷ್ಟು ಅಂತ ಮಾಡೋದು, ಸಾಕಾಗಿದೆ ಇಷ್ಟು ವರ್ಷ ಮಾಡಿದ್ದು ಸಾಕು. ಬಿಗ್‌ಬಾಸ್ ಎಂದರೆ ಸುಮ್ಮನೇ ಅಲ್ಲ, ಸಿಕ್ಕಾಪಟ್ಟೆ ಎಫರ್ಟ್ ಹಾಕಬೇಕು. ಈ ಎಫರ್ಟ್ ಯಾರಿಗೂ ಅರ್ಥ ಆಗಲ್ಲ ಎಂದು ತುಂಬಾ ಬೇಸರ ವ್ಯಕ್ತಪಡಿಸಿದ್ದರು.
ಚಿಕ್ಕವಳಿದ್ದಾಗ ಸಲ್ಮಾನ್ ಖಾನ್ ಮನೆಗೆ ಹೋದಾಗ ನಡೆದ ಘಟನೆಯನ್ನು ನೆನಪಿಸಿಕೊಂಡ ಸಾನ್ವಿ ಸುದೀಪ್

