ಟಿಸಿಎಸ್ 2025ರ ವೇತನ ಏರಿಕೆಯನ್ನು ಸದ್ಯಕ್ಕೆ ತಡೆಹಿಡಿದಿದೆ, ಆರ್ಥಿಕ ಅಸ್ಥಿರತೆಯಿಂದಾಗಿ. ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ ₹12,224 ಕೋಟಿಗೆ ಇಳಿದಿದೆ, ಆದಾಯ ₹64,479 ಕೋಟಿ ತಲುಪಿದೆ. ಪ್ರತಿ ಷೇರಿಗೆ ₹30 ಲಾಭಾಂಶವನ್ನು ಘೋಷಿಸಲಾಗಿದೆ. 2025ರಲ್ಲಿ 6,07,979 ಉದ್ಯೋಗಿಗಳಿದ್ದು, 6,433 ಹೊಸ ನೇಮಕಾತಿ ಮಾಡಲಾಗಿದೆ. ಮಾರುಕಟ್ಟೆ ಏರಿಳಿತದಿಂದ ಐಟಿ ವಲಯದಲ್ಲಿ ಎಚ್ಚರಿಕೆ ವಹಿಸಲಾಗಿದೆ.

ಟಾಟಾ ಗ್ರೂಪ್‌ನ ಐಟಿ ದೈತ್ಯ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ವ್ಯವಹಾರದ ಅಸ್ಥಿರ ವಾತಾವರಣವನ್ನು ಉಲ್ಲೇಖಿಸಿ 2025 ಕ್ಕೆ ನೌಕರರ ವೇತನ ಏರಿಕೆಯ ಪ್ರಕ್ರಿಯೆಯನ್ನು ಸದ್ಯಕ್ಕೆ ತಡೆಹಿಡಿದಿದೆ. ಏಪ್ರಿಲ್ 10 ರಂದು ಮುಂಬೈನಲ್ಲಿ ಕಂಪನಿಯ 4 ನೇ ತ್ರೈಮಾಸಿಕದ ಆದಾಯ ಬಗ್ಗೆ ಘೋಷಿಸಿದಾಗ ವೇತನ ಏರಿಕೆ ಪ್ರಕ್ರಿಯೆಯನ್ನು ಮುಂದೂಡಲಾಗುತ್ತಿದೆ ಎಂದು ಹೇಳಿತು. ಟಿಸಿಎಸ್ ತನ್ನ 2025ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕ ಮತ್ತು 2025ರ ಪೂರ್ಣ ಹಣಕಾಸು ವರ್ಷದ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಿದ್ದು ಇದರ ಜೊತೆಗೆ ಟಿಸಿಎಸ್ ತನ್ನ ನಾಲ್ಕನೇ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿದ ನಂತರ ಷೇರು ಬೆಲೆ ಕೂಡ ಏರಿಕೆಯಾಗಿದೆ. 

ಕರ್ನಾಟಕದಲ್ಲಿ ಐಟಿ ಉದ್ಯಮ ಮಹಾಕುಸಿತ, 2025 ಅಲ್ಲಿ ಕೇವಲ 212 ಕಂಪನಿ ಸ್ಟಾರ್ಟ್‌, 440 ಕಂಪನಿ ಕ್ಲೋಸ್‌!

ಟಿಸಿಎಸ್‌ ಮಾರ್ಚ್ ತ್ರೈಮಾಸಿಕದಲ್ಲಿ ₹ 12,224 ಕೋಟಿ ನಿವ್ವಳ ಲಾಭ ಗಳಿಸಿದೆ. ಆದರೆ ಇದು ಹಿಂದಿನ ತ್ರೈಮಾಸಿಕದಲ್ಲಿ ₹ 12,380 ಕೋಟಿಗಳಿಂದ ಶೇ 1.3 ರಷ್ಟು ಕುಸಿತ ದಾಖಲಿಸಿದೆ. 2025ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ಶೇ.0.8 ರಷ್ಟು ಏರಿಕೆಯಾಗಿ ₹ 64,479 ಕೋಟಿಗಳಿಗೆ ತಲುಪಿದ್ದು , ಇದು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ (QoQ) ಹೋಲಿಸಿದರೆ ₹ 63,973 ಕೋಟಿಗಳಷ್ಟಿತ್ತು. USD ಪರಿಭಾಷೆಯಲ್ಲಿ ಆದಾಯವು ಅನುಕ್ರಮವಾಗಿ ಶೇ.1 ರಷ್ಟು ಇಳಿದು $7,465 ಮಿಲಿಯನ್‌ಗೆ ತಲುಪಿದೆ. ಕಾರ್ಯಾಚರಣೆಯ ಮಟ್ಟದಲ್ಲಿ, ತ್ರೈಮಾಸಿಕದಲ್ಲಿ EBIT ಶೇ. 0.6 ರಷ್ಟು ಇಳಿದು ₹ 15,601 ಕ್ಕೆ ತಲುಪಿದೆ, ಆದರೆ EBIT ಅಂಚು QoQ ನಲ್ಲಿ 24.5% ರಿಂದ 24.2% ಕ್ಕೆ ಇಳಿಕೆ ಕಂಡಿದೆ. 

TCS ಮತ್ತು ಏರ್ ನ್ಯೂಜಿಲೆಂಡ್‌ ಡಿಜಿಟಲ್ ಪಾಲುದಾರಿಕೆ, 5 ವರ್ಷಗಳ ಒಪ್ಪಂದ!

ಅಮೆರಿಕ ಮತ್ತು ಇತರ ದೇಶಗಳ ನಡುವೆ ನಡೆಯುತ್ತಿರುವ ಸುಂಕ ವಾರ್‌ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಸ್ಥೂಲ ಆರ್ಥಿಕ ಅನಿಶ್ಚಿತತೆಯ ಮಧ್ಯೆ, ಭಾರತದ ಅತಿದೊಡ್ಡ ಐಟಿ ಸೇವೆಗಳ ಕಂಪನಿಯಾದ ಟಿಸಿಎಸ್, ಏಪ್ರಿಲ್‌ನಿಂದ ಉದ್ಯೋಗಿಗಳಿಗೆ ವೇತನ ಹೆಚ್ಚಳವನ್ನು ಮುಂದೂಡುಲಾಗಿತ್ತಿದೆ ಎಂದು ಕಾರಣ ನೀಡಿದೆ. ಈ ಮಾರುಕಟ್ಟೆ ಯುದ್ಧವು ಭವಿಷ್ಯದಲ್ಲಿ ಸುಧಾರಿಸಿದ ನಂತರ, ಹಣಕಾಸು ವರ್ಷದ ವೇತನವನ್ನು ಜಾರಿಗೆ ತರಲಾಗುವುದು. ವೇತನ ಹೆಚ್ಚಳವನ್ನು ಸಂಪೂರ್ಣವಾಗಿ ತಳ್ಳಿಹಾಕದಿದ್ದರೂ, ಹಣಕಾಸು ವರ್ಷ ಮುಂದುವರೆದಂತೆ ಹೆಚ್ಚಳದ ಸಮಯ ಮತ್ತು ಪ್ರಮಾಣವನ್ನು ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಟಿಸಿಎಸ್ ಕಾರ್ಯನಿರ್ವಾಹಕರು ಮಾಹಿತಿ ನೀಡಿದ್ದಾರೆ.

ಟಾಟಾ ಗ್ರೂಪ್ ಕಂಪನಿಯು 2025 ರ ಆರ್ಥಿಕ ವರ್ಷಕ್ಕೆ ಅಂತಿಮ ಲಾಭಾಂಶವನ್ನು ಘೋಷಿಸಿ, ತನ್ನ ಮಂಡಳಿಯ ಷೇರುದಾರರಿಗೆ ಪ್ರತಿ ಷೇರಿಗೆ ₹ 30 ಲಾಭಾಂಶವನ್ನು ಘೋಷಿಸಿತು . ಟಿಸಿಎಸ್ 2025 ರ ಹಣಕಾಸು ವರ್ಷದಲ್ಲಿ 6,07,979 ಉದ್ಯೋಗಿಗಳನ್ನು ಹೊಂದಿದೆ. ಮತ್ತು ಈ ಹಣಕಾಸು ವರ್ಷದಲ್ಲಿ 6,433 ಉದ್ಯೋಗಿಗಳನ್ನು ಕಂಪೆನಿಗೆ ಸೇರಿಸಿಕೊಂಡಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಮಾತ್ರ, 625 ಹೊಸ ಉದ್ಯೋಗಿಗಳನ್ನು ಸೇರಿಸಲಾಗಿದೆ. 2025ನೇ ಹಣಕಾಸು ವರ್ಷದಲ್ಲಿ ತರಬೇತಿ ಪಡೆಯುವವರ ಸಂಖ್ಯೆ 42,000 ಆಗಿದ್ದು, ಮುಂದಿನ ಹಣಕಾಸು ವರ್ಷದಲ್ಲಿ ಹೊಸಬರ ನೇಮಕಾತಿ ಸ್ಥಿರವಾಗಿ ಉಳಿಯುವ ಅಥವಾ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕಂಪೆನಿ ಹೇಳಿದೆ.

ಪ್ರಮುಖ ಮಾರುಕಟ್ಟೆಗಳಲ್ಲಿ, ವಿಶೇಷವಾಗಿ ಉತ್ತರ ಅಮೆರಿಕಾದಲ್ಲಿ ಕಂಪನಿಗಳು ನಿಧಾನಗತಿಯಲ್ಲಿ ಮೇಲೇರುತ್ತಿದ್ದು, ಇದು ಭಾರತೀಯ ಐಟಿ ವಲಯದಲ್ಲಿ ಎಚ್ಚರಿಕೆ ವಹಿಸುವ ಕರೆಗಂಟೆಯಾಗಿದೆ. ಇದರ ಜೊತೆಗೆ ಷೇರುಮಾರುಕಟ್ಟೆಯಲ್ಲಿ ಏರಿಳಿತದ ಆಟವೂ ಮುಂದುವರೆದಿದೆ. ಪ್ರಮುಖ ಕಂಪೆನಿಗಳು ಕಳೆದವಾರ ನಷ್ಟಗೊಳಗಾಗಿದ್ದು, ಹಲವಾರು ಕಂಪೆನಿಗಳು ಕೋಟಿಗಟ್ಟಲೆ ಕಳೆದುಕೊಂಡವು. ಇದಕ್ಕೆ ಕಾರಣ ಟ್ರಂಪ್ ಆಡಳಿತದ ಹೊಸ ಸುಂಕ ನೀತಿಗಳಾಗಿವೆ.