ಟ್ರಂಪ್ ನೀತಿಯಿಂದ ಐಫೋನ್ ಖರೀದಿ ಇನ್ನು ಸುಲಭವಲ್ಲ, ಬಲು ದುಬಾರಿ
ಅಮೆರಿಕದ ಅಧ್ಯಕ್ಷ ಟ್ರಂಪ್ ತೆರಿಗೆ ನೀತಿ ಹಲವು ದೇಶಗಳಲ್ಲಿ ಕೋಲಾಹಲ ಸೃಷ್ಟಿಸಿದೆ, ಷೇರು ಮಾರುಕಟ್ಟೆ ಕುಸಿದಿದೆ. ಇದರ ಜೊತೆಗೆ ಇದೀಗ ಜನಸಾಮಾನ್ಯರ ಮೇಲೂ ಹೊಡೆತ ನೀಡುತ್ತಿದೆ. ಪರಿಣಾಮ ಐಫೋನ್ ಖರೀದಿ ಇನ್ನು ಬಲು ದುಬಾರಿಯಾಗುತ್ತಿದೆ.

ಆ್ಯಪಲ್ ಐಫೋನ್ ಬೆಲೆ ಏರಿಕೆ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ, ಚೀನಾ, ಯುರೋಪ್ ದೇಶಗಳ ಮೇಲೆ ತೆರಿಗೆ ವಿಧಿಸಿದ್ದಾರೆ. ಆಯಾ ದೇಶಗಳು ಅಮೆರಿಕದ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದರೆ, ಅಮೆರಿಕ ಪ್ರತಿಯಾಗಿ ಅಷ್ಟೇ ತೆರಿಗೆ ವಿಧಿಸುವ ನೀತಿಯನ್ನು ಟ್ರಂಪ್ ತಂದಿದ್ದಾರೆ. ಇದರಿಂದ ಕೋಲಾಹಲ ಸೃಷ್ಟಿಸಿದೆ. ಟ್ರಂಪ್ ನೀತಿಯಿಂದ ಇದೀಗ ಹಲವು ಉತ್ಪನ್ನಗಳ ಬೆಲೆ ಬಲು ದುಬಾರಿಯಾಗುತ್ತಿದೆ.
ವಿಶೇಷವಾಗಿ ಭಾರತದ ಮೇಲೆ 26% ತೆರಿಗೆ, ಚೀನಾದ ಮೇಲೆ 34% ತೆರಿಗೆ ವಿಧಿಸಲಾಗಿದೆ. ಇದರಿಂದ ಐಫೋನ್ ಬೆಲೆ ಹೆಚ್ಚಾಗಬಹುದು. ಹೆಚ್ಚಿನ ತೆರಿಗೆ ಆ್ಯಪಲ್ ಐಫೋನ್ ಉತ್ಪಾದನೆ ಮೇಲೆ ಹೊರೆ ನೀಡಲಿದೆ. ಇದರಿಂದ ಅನಿವಾರ್ಯವಾಗಿ ಉತ್ಪನ್ನದ ಬೆಲೆ ಏರಿಕೆಯಾಗಲಿದೆ. ಆ್ಯಪಲ್ ಐಫೋನ್ ಸೇರಿದಂತೆ ಎಲ್ಲಾ ಉತ್ಪನ್ನಗಳ ಬೆಲೆ ಏರಿಕೆಯಾಗಲಿದೆ.
ಆಪಲ್ ಐಫೋನ್ ಉತ್ಪಾದನೆಯ ಮುಖ್ಯ ಕೇಂದ್ರ ಚೀನಾ. ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಅಮೆರಿಕ 20% ತೆರಿಗೆ ವಿಧಿಸಿದೆ. ಇನ್ನು ಭಾರತದ ಮೇಲೂ ತೆರಿಗೆ ವಿಧಿಸಿದೆ. ಇಧರಿಂದ ಚೀನಾ ಹಾಗೂ ಭಾರತದಲ್ಲಿ ಆ್ಯಪಲ್ ಐಫೋನ್ ಉತ್ಪಾದಕ ಬೆಲೆ ಹೆಚ್ಚಾಗಲಿದೆ.
ಇತ್ತೀಚೆಗೆ ಅಮೆರಿಕ 34% ಹೆಚ್ಚುವರಿ ತೆರಿಗೆ ವಿಧಿಸಿದೆ. ಇದರಿಂದ ಐಫೋನ್ ಬೆಲೆಗಳು ಹೆಚ್ಚಾಗಬಹುದು. ತೆರಿಗೆ ಮುಂದುವರೆದರೆ, ಐಫೋನ್ ಮತ್ತಷ್ಟು ದುಬಾರಿಯಾಗಲಿದೆ. ಸದ್ಯ ಜನಸಾಮಾನ್ಯರು ಇಎಂಐ ಮೂಲಕ ಐಫೋನ್ ಖರೀದಿಸಲು ಸಾಧ್ಯವಾಗುತಿತ್ತು. ಮುಂದೆ ಇಎಂಐ ಕೂಡ ತಿಂಗಳಿಗೆ ತೀವ್ರ ಹೊರೆಯಾಗಲಿದೆ.
ವರದಿ ಪ್ರಕಾರ, ಐಫೋನ್ 16 ಬೇಸಿಕ್ ಮಾಡೆಲ್ ಬೆಲೆ ಅಮೆರಿಕದಲ್ಲಿ 799 ಡಾಲರ್. ಇದು 43% ಹೆಚ್ಚಾಗಿ 1,142 ಡಾಲರ್ ಆಗಬಹುದು. ಡೊನಾಲ್ಡ್ ಟ್ರಂಪ್ ಹಿಂದಿನ ಅವಧಿಯಲ್ಲಿ ಚೀನಾ ಮೇಲೆ ತೆರಿಗೆ ವಿಧಿಸಿದ್ದರು. ಆದರೆ ಆಪಲ್ ಐಫೋನ್ಗೆ ಸ್ವಲ್ಪ ರಿಯಾಯಿತಿ ನೀಡಲಾಗಿತ್ತು.ಆದರೆ ಈ ಬಾರಿ ತೆರಿಗೆಯಲ್ಲಿ ಐಫೋನ್ಗೆ ಯಾವುದೇ ರಿಯಾಯಿತಿ ಇಲ್ಲ. ಹೊಸ ತೆರಿಗೆಯಿಂದ ಆಪಲ್ ಕಂಪನಿ ಐಫೋನ್ ಬೆಲೆ ಹೆಚ್ಚಿಸಬಹುದು.
ಆಪಲ್ ಚೀನಾದಲ್ಲಿ ಮಾತ್ರವಲ್ಲ, ಭಾರತದಲ್ಲೂ ಐಫೋನ್ ತಯಾರಿಸುತ್ತದೆ. ಹೊಸ ತೆರಿಗೆಯಿಂದ ಅಮೆರಿಕದಲ್ಲಿ ಐಫೋನ್ ಬೆಲೆ ಹೆಚ್ಚಾಗಬಹುದು. ಟ್ರಂಪ್ ತೆರಿಗೆ ಘೋಷಿಸುವ ಮೊದಲು, ಆಪಲ್ ಚೀನಾ, ಭಾರತ ಸೇರಿದಂತೆ ವಿವಿಧ ದೇಶಗಳಿಂದ ಐಫೋನ್ ಸಂಗ್ರಹಿಸಿದೆ.