ಲಕ್ಷ್ಮೀ ಬಾರಮ್ಮ ಧಾರಾವಾಹಿ 600 ಕಂತುಗಳೊಂದಿಗೆ ಮುಕ್ತಾಯಗೊಂಡಿದೆ. ಕಥೆಯಲ್ಲಿ, ನಾಯಕಿ ಲಕ್ಷ್ಮಿಯನ್ನು ಕಾಪಾಡಲು ವಿಲನ್ ಕಾವೇರಿ ಕೊನೆಯಲ್ಲಿ ಸಾಯುತ್ತಾಳೆ. ಧಾರಾವಾಹಿ ತಂಡ ಬೆಟ್ಟದ ತುದಿಯಲ್ಲಿ ಸಂಭ್ರಮಿಸಿದೆ. ನಟಿ ಸುಷ್ಮಾ ನಾಣಯ್ಯ (ಕಾವೇರಿ), ತನ್ವಿ ರಾವ್ (ಕೀರ್ತಿ), ಮತ್ತು ಭೂಮಿಕಾ ರಮೇಶ್ (ಲಕ್ಷ್ಮೀ) ಸೇರಿದಂತೆ ಅನೇಕರು ಕುಣಿದು ಕುಪ್ಪಳಿಸಿದ್ದಾರೆ. ಭೂಮಿಕಾ ರಮೇಶ್ 'ಡಿಸೆಂಬರ್ 24' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.

 ಎರಡೂವರೆ ವರ್ಷಗಳ ಹಿಂದೆ ಆರಂಭವಾಗಿ 600 ಎಪಿಸೋಡ್​ಗಳನ್ನು ಮುಗಿಸುವ ಮೂಲಕ ಲಕ್ಷ್ಮೀ ಬಾರಮ್ಮ ಸೀರಿಯಲ್​ ಕೊನೆಗೂ ಅಂತ್ಯಗೊಂಡಿದೆ. ಅವಸರ ಮಾಡದೆ ಎಲ್ಲಾ ಪಾತ್ರಗಳಿಗೂ ನ್ಯಾಯ ಕೊಟ್ಟು, ಕಾವೇರಿಯ ಅಂತ್ಯ ಕಂಡಿದೆ. ಸೀರಿಯಲ್​ಗಳಲ್ಲಿ ಹೆಚ್ಚಾಗಿ ವಿಲನ್​ಗಳಿಗೆ ಕೊನೆಯಲ್ಲಿ ಒಳ್ಳೆಯ ಬುದ್ಧಿ ಬರುತ್ತದೆ. ಆದರೆ, ಲಕ್ಷ್ಮೀ ಬಾರಮ್ಮದಲ್ಲಿ ವಿಲನ್ ಕಾವೇರಿಯನ್ನು ಸಾಯಿಸಲಾಗಿದೆ. ಯಾರ ಮೇಲೂ ಆಪಾದನೆ ಬರಬಾರದು ಎನ್ನುವ ಕಾರಣಕ್ಕೆ ಸಿನಿಮಾದ ರೀತಿಯಲ್ಲಿ ಕಾಲಿಗೆ ಕಲ್ಲೊಂದು ತಾಗಿ ಬೆಟ್ಟದ ತುದಿಯಿಂದ ಬಿದ್ದು ಸತ್ತಿದ್ದಾಳೆ. ಅಷ್ಟಕ್ಕೂ ಈ ಸೀರಿಯಲ್ ಕಥೆ ಏನೆಂದರೆ, ವೈಷ್ಣವ್​ ಮೇಲೆ ಆತನ ತಾಯಿ ಕಾವೇರಿಗೆ ಎಲ್ಲಿಲ್ಲದ ಪ್ರೀತಿ. ಮಗನನ್ನು ಬಹಳ ಮುದ್ದಿನಿಂದ ಬೆಳೆಸಿದ್ದಳು. ಮಗ ತನ್ನ ಕೈತಪ್ಪಿ ಹೋಗಬಾರದು ಎನ್ನುವ ಕಾರಣಕ್ಕೆ ಮುಗ್ಧಳಾಗಿದ್ದ ಲಕ್ಷ್ಮೀಗೆ ವಿವಾಹ ಮಾಡಿಕೊಟ್ಟಿದ್ದಳು. ಆದರೆ, ಅಲ್ಲಾಗಿದ್ದೇ ಬೇರೆ. ವೈಷ್ಣವ್ ದಿನ ಕಳೆದಂತೆ ಲಕ್ಷ್ಮೀ ಪ್ರೇಮ ಪಾಶಕ್ಕೆ ಸಿಲುಕುತ್ತಾ ಹೋದನು. ಇದರಿಂದ ಕಾವೇರಿ ಸಾಕಷ್ಟು ಚಿಂತೆಗೆ ಒಳಗಾಗುತ್ತಾಳೆ. ತನ್ನ ಮಗ ನನ್ನ ಕೈಯಿಂದ ಬಿಟ್ಟು ಹೋಗಬಾರದು ಎಂಬ ಕಾರಣಕ್ಕೆ ಸೊಸೆಯ ಮೇಲೆ ಕಿಡಿ ಕಾರುತ್ತಾಳೆ. ಕೊನೆಗೆ ಆಕೆಯನ್ನು ಸಾಯಿಸಲೂ ಹೇಸುವುದಿಲ್ಲ. ಆದರೆ ಕೊನೆಯಲ್ಲಿ ತಾನೇ ಅಂತ್ಯ ಕಂಡಿದ್ದಾಳೆ. 

ಇದು ಸೀರಿಯಲ್​ ಕಥೆಯಾದರೆ, ರಿಯಲ್​ ಆಗಿ ಬೆಟ್ಟದಿಂದ ಬಿದ್ದ ಕಾವೇರಿ ಎದ್ದು ಬಂದಿದ್ದಾಳೆ! ಹಾಗೆಂದು ಇದೇನು ಲಕ್ಷ್ಮೀ ಬಾರಮ್ಮ ಪಾರ್ಟ್​-2 ಕಥೆಯಲ್ಲ.ಬದಲಿಗೆ ಸೀರಿಯಲ್​ ಮುಗಿದ ಖುಷಿಗೆ ಸೀರಿಯಲ್​ ಟೀಮ್​ ಖುಷಿಯಿಂದ ಬೆಟ್ಟದ ತುದಿಯಲ್ಲಿ ಸಂಭ್ರಮಿಸಿದೆ. ಇದರಲ್ಲಿ ಸೀರಿಯಲ್​ನ ನಾಯಕ-ನಾಯಕಿ, ವಿಲನ್​ ಕಾವೇರಿ ಎಲ್ಲರೂ ಭರ್ಜರಿ ಸ್ಟೆಪ್​ ಹಾಕಿದ್ದಾರೆ. ಲಕ್ಷ್ಮೀ ಬಾರಮ್ಮ ಬಾರಮ್ಮ ಎಂದು ಕುಣಿದಾಡಿದ್ದಾರೆ. ವಿಲನ್​ ಕಾವೇರಿ ಪಾತ್ರಧಾರಿ ಸುಷ್ಮಾ ನಾಣಯ್ಯ, ಕೀರ್ತಿ ಪಾತ್ರಧಾರಿ ನಟಿ ತನ್ವಿ ರಾವ್​, ಲಕ್ಷ್ಮೀ ಪಾತ್ರಧಾರಿ ಭೂಮಿಕಾ ರಮೇಶ್​ ಸೇರಿದಂತೆ ಬಹುತೇಕ ಎಲ್ಲ ಟೀಮ್​ನವರನ್ನು ಇದರಲ್ಲಿ ಕಾಣಬಹುದಾಗಿದೆ. ಅಂದಹಾಗೆ ಕಾವೇರಿ ಪಾತ್ರಧಾರಿ ಸುಷ್ಮಾ ನಾಣಯ್ಯ ಕುರಿತು ಹೇಳುವುದಾದರೆ, ಅವರು ಪ್ರತೀಕ್​ ಎನ್ನುವವರನ್ನು ಮದುವೆಯಾಗಿದ್ದು, ದಿವಿಯಾನಾ ಮಗಳು ಇದ್ದಾಳೆ. ಮಗಳು ಹುಟ್ಟಿದ ಬಳಿಕ ಕೆಲ ಕಾಲ ನಟನೆಯಿಂದ ದೂರ ಇದ್ದ ಸುಷ್ಮಾ ಅವರು, ಇದೀಗ ಲಕ್ಷ್ಮೀ ಬಾರಮ್ಮಾ ಮೂಲಕ ಕಮ್​ಬ್ಯಾಕ್​ ಮಾಡಿದ್ದಾರೆ. ಕುತೂಹಲದ ವಿಷಯ ಏನೆಂದರೆ, ಲಕ್ಷ್ಮೀ ಬಾರಮ್ಮಾದಲ್ಲಿ ಅತ್ತೆ ರೋಲ್​ ಮಾಡ್ತಿರೋ ಸುಷ್ಮಾ ಅವರಿಗೆ ಈಗ ವಯಸ್ಸು ಕೇವಲ 35 ಅಷ್ಟೇ, 4 ವರ್ಷದ ಮಗುವಿನ ಅಮ್ಮ. ಈ ಸೀರಿಯಲ್​ನಲ್ಲಿ ಇವರ ಮಗ ಆಗಿರೋ ವೈಷ್ಣವ್​ಗೂ, ಸುಷ್ಮಾ ಅವರಿಗೆ ಇರುವ ವಯಸ್ಸಿನ ಅಂತರ ನಾಲ್ಕೈದು ವರ್ಷಗಳಷ್ಟೇ! 

ಲಕ್ಷ್ಮೀ ಬಾರಮ್ಮ ಶೂಟಿಂಗ್​ ಸೆಟ್​ನಲ್ಲೇ ಕಣ್ಣಿನಿಂದ ರಕ್ತ ಸುರೀತು: ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ನಟಿ ಭೂಮಿಕಾ

ತನ್ವಿ ರಾವ್​, ಭರತನಾಟ್ಯ ಕಲಾವಿದೆಯಾಗಿದ್ದು, ಕಥಕ್ ಹಾಗೂ ಸೆಮಿ ಕ್ಲಾಸಿಕಲ್ ನೃತ್ಯವನ್ನೂ ಅಭ್ಯಾಸ ಮಾಡಿದ್ದಾರೆ. ಕಿರುತೆರೆಗೆ ಬರುವ ಮುನ್ನ ತನ್ವಿ ರಾವ್ ಹಿಂದಿ ಸಿನಿರಂಗದ ಜನಪ್ರಿಯ ತಾರೆಯರಾದ ಮಾಧುರಿ ದೀಕ್ಷಿತ್ ಹಾಗೂ ಜೂಹಿ ಚಾವ್ಲಾ ಅವರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಬಾಲಿವುಡ್ ಸಿನಿಮಾ 'ಗುಲಾಬಿ ಗ್ಯಾಂಗ್'ನಲ್ಲಿ ನಟಿಸಿರುವ ತನ್ವಿ, ಮುಂದೆ 'ಗನ್ಸ್ ಆಫ್ ಬನಾರಸ್' ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಜೊತೆಗೆ ಕನ್ನಡದ 'ರಂಗ್ ಬಿರಂಗಿ' ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದಾರೆ‌.

ಇನ್ನು ನಟಿ ಭೂಮಿಕಾ ಕುರಿತು ಹೇಳುವುದಾದರೆ, ಅವರು ಕನ್ನಡ ಸೀರಿಯಲ್, ತೆಲುಗು ಸೀರಿಯಲ್ ಜೊತೆಗೆ ಕನ್ನಡ ಸಿನಿಮಾದಲ್ಲೂ ಬ್ಯುಸಿ. ಇನ್ನೂ ಇಪ್ಪತ್ತೊಂದು ವರ್ಷ ವಯಸ್ಸಿನ ಈ ಪ್ರತಿಭಾವಂತ ನಟಿ ಭರತನಾಟ್ಯದಲ್ಲೂ ಎಕ್ಸ್‌ಪರ್ಟ್‌. 'ಲಕ್ಷ್ಮಿ ಬಾರಮ್ಮ' ಸೀರಿಯಲ್‌ನಲ್ಲಿ ನಾಯಕಿ ಲಕ್ಷ್ಮಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿರುವ ಈಕೆ ಸದ್ಯ ಕೈತುಂಬ ಅವಕಾಶಗಳನ್ನು ಹಿಡಿದು ನಿಂತಿದ್ದಾರೆ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಭೂಮಿಕಾ ರಮೇಶ್ ಕಳೆದ ವರ್ಷದ ಅನುಬಂಧ ಅವಾರ್ಡ್ಸ್‌ನಲ್ಲಿ ಜನ ಮೆಚ್ಚಿದ ಹೊಸ ಪರಿಚಯ ಪ್ರಶಸ್ತಿಯನ್ನು ಕೂಡಾ ಪಡೆದುಕೊಂಡಿದ್ದರು. ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲಿಯೂ ನಟಿಸಬೇಕು ಎಂಬುದು ಈಕೆಯ ಬಹುದಿನದ ಕನಸಾಗಿತ್ತು. ಆಕೆಯ ಕನಸು ಕೂಡಾ ಇದೀಗ ನನಸಾಗಿದೆ. ನಾಗರಾಜ್‌ ಎಂ. ಜಿ ಗೌಡ ನಿರ್ದೇಶನದ 'ಡಿಸೆಂಬರ್ 24' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೂ ಕಾಲಿಟ್ಟಿದ್ದಾರೆ ಭೂಮಿಕಾ ರಮೇಶ್. 

ಅಬ್ಬಾ! 'ಲಕ್ಷ್ಮೀ ಬಾರಮ್ಮ' ಕೀರ್ತಿಯ ಅದ್ಭುತ ನೃತ್ಯಕ್ಕೆ ಬೆರಗಾದ ಫ್ಯಾನ್ಸ್​: ಬಿಗ್​ಬಾಸ್​​ ಕಿಶನ್​ ಜೊತೆ ಮೋಡಿ!

View post on Instagram