ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?

ಸ್ಪೇಸ್‌ಎಕ್ಸ್ ಕಂಪನಿಯ ಶೇರು ಮಾರುಕಟ್ಟೆ ಪ್ರವೇಶದಿಂದ ಎಲಾನ್ ಮಸ್ಕ್ ವಿಶ್ವದ ಮೊದಲ ಟ್ರಿಲಿಯನೇರ್ ಆಗಿದ್ದಾರೆ. ಅವರ ಸಂಪತ್ತು 95 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದ್ದು, ಈ ಬೃಹತ್ ಸಾಮ್ರಾಜ್ಯವನ್ನು ಅವರು ಹೇಗೆ ನಿರ್ಮಿಸಿದರು? ಅವರ ಯಶಸ್ಸಿನ ಗುಟ್ಟೇನು ಎಂಬುದನ್ನು ನೋಡೋಣ ಬನ್ನಿ

Share this Video
  • FB
  • Linkdin
  • Whatsapp

SpaceX ಮಾಲೀಕ ಎಲಾನ್ ಮಸ್ಕ್ ಈಗ ವಿಶ್ವದ ಮೊದಲ ಟ್ರಿಲಿಯನೇರ್. ಸ್ಪೇಸ್‌ಎಕ್ಸ್ ಕಂಪನಿಯ ಶೇರು ಮಾರ್ಕೆಟ್‌ಗೆ ಲಗ್ಗೆ ಇಡ್ತಿದ್ದ ಹಾಗೆ ಮಸ್ಕ್ ಸಂಪತ್ತು ಬರೋಬ್ಬರಿ 95 ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟಿದೆ! ಸರಳವಾಗಿ ಹೇಳ್ಬೇಕಾ? ಮಸ್ಕ್ ಪ್ರತಿ ಗಂಟೆಗೆ 10 ಕೋಟಿ ರೂಪಾಯಿ ಖರ್ಚು ಮಾಡಿದ್ರೂ, ಅವರ ಆಸ್ತಿ ಕರಗೋದಕ್ಕೆ ಬರೋಬ್ಬರಿ 114 ವರ್ಷ ಬೇಕು! ಸದ್ಯ ವಿಶ್ವದ ಮಹಾ ಕುಬೇರ. ಏಕೈಕ ಟ್ರಿಲಿಯನೇರ್ ಎಲಾನ್ ಮಸ್ಕ್. ಇಷ್ಟೊಂದು ದೊಡ್ಡ ಸಾಮ್ರಾಜ್ಯವನ್ನ ಮಸ್ಕ್ ಕಟ್ಟಿದ್ದು ಹೇಗೆ? ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಮಸ್ಕ್ ಮಾಡಿದ ಆ ಮ್ಯಾಜಿಕ್ ಆದ್ರೂ ಏನು? ನೋಡೋಣ ಬನ್ನಿ.

ಎಲಾನ್ ಮಸ್ಕ್ ಶೇರು ಮಾರುಕಟ್ಟೆಗೆ ಲಗ್ಗೆ ಇಟ್ಟು ವಿಶ್ವದ ಮೊದಲ ಟ್ರಿಲಿಯನೇರ್ ಆಗಿರೋ ಸುದ್ದಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಆದರೆ, ಈ 'ಟ್ರಿಲಿಯನ್ ಡಾಲರ್' ಅಂದ್ರೆ ಎಷ್ಟು ದೊಡ್ಡ ಸಂಪತ್ತು ಗೊತ್ತಾ? ಅದನ್ನಿಟ್ಟುಕೊಂಡು ಅವರು ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..? ಬನ್ನಿ ಮಸ್ಕ್ ಸಾಮ್ರಾಜ್ಯದ ಅಸಲಿ ತಾಕತ್ತನ್ನ ಸರಳವಾಗಿ ಬಿಡಿಸಿಡ್ತೀವಿ.

Related Video