
ಇರಾನ್ ಅಸ್ತ್ರ ಪ್ರಯೋಗಿಸಿದ ಬೆನ್ನಲ್ಲೇ ಜಗತ್ತೆ ಅಲ್ಲೋಲಕಲ್ಲೋಲ, ತೈಲ ಬೆಲೆ ಏರಿಕೆ, ಷೇರುಮಾರುಕಟ್ಟೆ ಕುಸಿತ
ಬತ್ತಳಿಕೆಯಲ್ಲಿರೋ ಅತ್ಯಂತ ಬಲಿಷ್ಠ ಹಾಗೂ ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು ಒಂದೊಂದಾಗಿಯೇ ತಡವಾಗಿ ಯುದ್ಧರಂಗಕ್ಕೆ ಇಳಿಸುತ್ತಿದೆ.ಹೀಗಾಗಿ ಇರಾನ್ ಜಾಗತಿಕ ಮಟ್ಟದಲ್ಲಿ ದೊಡ್ಡ ತಲ್ಲಣ ಸೃಷ್ಟಿಸಿದೆ.
ಇರಾನ್ ಯುದ್ಧದಲ್ಲಿ ಹಿನ್ನಡೆ ಅನುಭವಿಸಿದೆ.. ಆದ್ರೆ, ಸೋತಿಲ್ಲ.. ಹೌದು, ಇರಾನ್ ರಣನೀತಿಯೇ ಅದಾಗಿದೆ.. ಸೋತು ಅಸ್ತಿತ್ವವನ್ನು ಕಳೆದುಕೊಳ್ಳುವುದಕ್ಕಿಂತಲೂ ದೀರ್ಘಾವಧಿಯಲ್ಲಿ ಹೋರಾಡಿ ದೇಶವನ್ನು ಕಾಪಾಡಿಕೊಳ್ಳುವ ಉದ್ದೇಶವನ್ನು ಹೊಂದಿದೆ.. ಅದಕ್ಕಾಗಿಯೇ ತನ್ನ ಖಜಾನೆಯಲ್ಲಿರೋ ದಿವ್ಯಾಸ್ತ್ರಗಳನ್ನು ಇರಾನ್ ಇನ್ನು ಬಳಕೆಯೇ ಮಾಡಿಲ್ಲ.. ಬತ್ತಳಿಕೆಯಿಂದ ನಿಧಾನವಾಗಿ ಒಂದೊಂದೆ ಅಸ್ತ್ರಗಳನ್ನು ಪ್ರಯೋಗ ಮಾಡುತ್ತಿದೆ. ಪರಿಣಾಮ ಒಂದೇ ದಿನ ತೈಲ ಬೆಲೆ ಏರಿಕೆ, ಗ್ಯಾಸ್ ಪೂರೈಕೆ ಸ್ಥಗಿತ, ಷೇರುಮಾರುಕಟ್ಟೆ ಲಕ್ಷ ಲಕ್ಷ ಕೋಟಿ ನಷ್ಟ ಸೇರಿ ಜಗತ್ತೆ ತಲ್ಲಣಗೊಂಡಿದೆ.