ಉದ್ಯೋಗಿಗಳಿಗೆ ಭರ್ಜರಿ ಬೋನಸ್, ದಂಪತಿಗೆ ವಿಮಾನಯಾನ ಬ್ಯಾನ್..!

ಕೆನಡಾದ ವಾಲ್‌ಮಾರ್ಟ್ ತನ್ನ ಎಂಬತ್ತೈದು ಸಾವಿರ ಉದ್ಯೋಗಿಗಳಿಗೆ ಕೋವಿಡ್ ಬೋನಸ್ ಕೊಡುತ್ತಿದೆಯಂತೆ. ಸೋಂಕಿನ ಭೀತಿ ನಡುವೆಯೂ ಕಷ್ಟಪಟ್ಟು ದುಡಿದವರಿಗೆ ಉಡುಗೊರೆಯಾಗಿ ಕಂಪನಿ ಬೋನಸ್ ನೀಡಲಿದೆ. 
 

First Published Dec 5, 2020, 12:17 PM IST | Last Updated Dec 5, 2020, 2:44 PM IST

ವಾಷಿಂಗ್‌ಟನ್ (ಡಿ. 05): ಕೆನಡಾದ ವಾಲ್‌ಮಾರ್ಟ್ ತನ್ನ ಎಂಬತ್ತೈದು ಸಾವಿರ ಉದ್ಯೋಗಿಗಳಿಗೆ ಕೋವಿಡ್ ಬೋನಸ್ ಕೊಡುತ್ತಿದೆಯಂತೆ. ಸೋಂಕಿನ ಭೀತಿ ನಡುವೆಯೂ ಕಷ್ಟಪಟ್ಟು ದುಡಿದವರಿಗೆ ಉಡುಗೊರೆಯಾಗಿ ಕಂಪನಿ ಬೋನಸ್ ನೀಡಲಿದೆ. 

ಕೋವಿಡ್ ಪಾಸಿಟಿವ್ ರಿಪೋರ್ಟ್ ಇದ್ದರೂ ವಿಮಾನಯಾನ ಮಾಡಿದ್ದ ದಂಪತಿಗೆ ಸಾವಿರ ಡಾಲರ್ ದಂಡವನ್ನೂ ವಿಧಿಸಲಾಗಿದೆ. ಜೊತೆಗೆ ಯುನೈಟೆಡ್ ಏರ್‌ಲೈನ್ಸ್ ವಿಮಾನದಲ್ಲಿ ಪಯಣಿಸುವುದನ್ನೇ ಕಂಪನಿ ನಿಷೇಧಿಸಿದೆ.  ಕ್ಯಾಲಿಫೋರ್ನಿಯಾದ 6ನೇ ತರಗತಿಯ ಹುಡುಗ ಆನ್‌ಲೈನ್ ಪಾಠ ಕೇಳುತ್ತಿರುವಾಗಲೇ ಶೂಟ್ ಮಾಡಿಕೊಂಡಿದ್ದಾನೆ. ಝೂಮ್ ಕಾಲ್‌ನಲ್ಲಿದ್ದ ಈ ಹುಡುಗ ಆಡಿಯೋ ಹಾಗೂ ವೀಡಿಯೋ  ಮ್ಯೂಟ್ ಮಾಡಿಕೊಂಡಿದ್ದ.

ಜೇನುತುಪ್ಪವನ್ನು ಬಳಸುವ ಮುನ್ನ ಎಚ್ಚರ; ಸಂಸೋಧನೆ ಹೇಳ್ತಿದೆ ಭಯಂಕರ ವಿಚಾರ!

ಅಮೆರಿಕದ ಕೊರೋನಾ ವೈರಸ್ ಸಲಹಾ ಸಮಿತಿಗೆ ನಮ್ಮ ಮಂಡ್ಯ ಮೂಲಕ ಡಾ.ವಿವೇಕ್ ಮೂರ್ತಿ ಹಲ್ಲೆಗೆರೆ ಈಗಾಗಲೇ ನೇಮಕವಾಗಿದ್ದಾರೆ. ನಿಯೋಜಿತ ಅಧ್ಯಕ್ಷ ಜೋ ಬೈಡನ್ ಡಾ.ಮೂರ್ತಿಗೆ ಇನ್ನೂ ಉನ್ನತ ಹುದ್ದೆ ನೀಡುವ ಸಾಧ್ಯತೆ ಇದೆ. ಇನ್ನಷ್ಟು ಸುದ್ದಿಗಳು ಇಂದಿನ ಟ್ರೆಂಡಿಂಗ್‌ ನ್ಯೂಸ್‌ನಲ್ಲಿ..!