400 ದಿನಗಳ ಉಕ್ರೇನ್-ರಷ್ಯಾ ಯುದ್ಧಕ್ಕೆ ವಿಶ್ವದ ದೊಡ್ಡಣ್ಣ ಎಂಟ್ರಿ: ಯುದ್ಧಭೂಮಿಗೆ ನುಗ್ಗುತ್ತಾ ಅಮೆರಿಕ ಸೈನ್ಯ..?

Joe Biden ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅಣ್ವಸ್ತ್ರ ಯುದ್ಧ ಪ್ರಾರಂಭಿಸುವ ಎಚ್ಚರಿಕೆ ನೀಡಿದ್ದು, ನ್ಯೂಕ್ಲಿಯರ್ ಡ್ರಿಲ್‌ ನಡೆಸಿದ್ದಾರೆ. ಈ ಹಿನ್ನೆಲೆ ಮೂರನೇ ಮಹಾಯುದ್ಧ ಭೀತಿಯೂ ಶುರು ಆಗಿದೆ.

First Published Apr 2, 2023, 2:26 PM IST | Last Updated Apr 2, 2023, 2:30 PM IST

ಉಕ್ರೇನ್ - ರಷ್ಯಾ ಯುದ್ಧ 400 ದಿನಗಳಿಂದ ನಡೆಯುತ್ತಿದ್ದು, ಈಗ ಈ ಯುದ್ಧಕ್ಕೆ ದೊಡ್ಡಣ್ಣ ಎಂಟ್ರಿ ಕೊಡಲಿದೆ ಎಂದು ಹೇಳಲಾಗುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅಣ್ವಸ್ತ್ರ ಯುದ್ಧ ಪ್ರಾರಂಭಿಸುವ ಎಚ್ಚರಿಕೆ ನೀಡಿದ್ದು, ನ್ಯೂಕ್ಲಿಯರ್ ಡ್ರಿಲ್‌ ನಡೆಸಿದ್ದಾರೆ. ಈ ಹಿನ್ನೆಲೆ ಮೂರನೇ ಮಹಾಯುದ್ಧ ಭೀತಿಯೂ ಶುರು ಆಗಿದೆ. 4 ಲಕ್ಷ ಬಾಡಿಗೆ ಸೈನಿಕರನ್ನ ನೇಮಿಸಲು ರಷ್ಯಾ ಸಜ್ಜಾಗಿದ್ದು, ಈ ಹಿನ್ನೆಲೆ ಅಮೆರಿಕನ್ನರೇ.. ರಷ್ಯಾ ಬಿಟ್ಟು ಹೊರಡಿ ಎಂದು ಶ್ವೇತ ಭವನ ಎಚ್ಚರಿಕೆ ನೀಡಿದೆ. ರಷ್ಯಾಧಿಪತಿ ಪುಟಿನ್ ವಿಶ್ವದ ಮುಂದೆ ಮತ್ತೊಂದು ಶಸ್ತ್ರಾಸ್ತ್ರವನ್ನ ಪ್ರದರ್ಶನ ಮಾಡಿ, ಶತ್ರುಗಳಿಗೆ ನಡುಕ ಹುಟ್ಟಿಸಿದ್ದರೆ, ಅಮೆರಿಕ ಮಿಸೈಲ್ ಸುನಾಮಿ ಎಬ್ಬಿಸೋಕೆ ರೆಡಿಯಾಗಿದೆ. ಈ ಡೆಡ್ಲಿ ಮಿಸೈಲ್ ಶಕ್ತಿ ಕಂಡು ಚೀನಾ, ರಷ್ಯಾ ದಂಗಾಗಿವೆ.  

Video Top Stories