ಉಕ್ರೇನ್ ಆರ್ಭಟಕ್ಕೆ ರಷ್ಯಾ ರೋಷಾಗ್ನಿ, ಉಕ್ರೇನ್ ದಾಳಿಗೆ ರಷ್ಯಾದ ಮಹಾಪ್ರತೀಕಾರ!

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಮಾತುಕತೆ ವಿಫಲವಾದ ಬಗ್ಗೆ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರ ನಿರ್ಧಾರದ ಪರಿಣಾಮಗಳ ಬಗ್ಗೆ ಈ ಲೇಖನ ಚರ್ಚಿಸುತ್ತದೆ. ಉಕ್ರೇನ್ ನಡೆಸಿದ ಕಾರ್ಯಾಚರಣೆ ಮತ್ತು ಅಮೆರಿಕದ ಪಾತ್ರದ ಬಗ್ಗೆಯೂ ಇದು ವಿವರಿಸುತ್ತದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜೂ.9): ಅವತ್ತು ಮಾತುಕತೆ ನಡೆಯುತ್ತೆ. ಆ ಮಾತುಕತೆ ನಂತರ ರಷ್ಯಾ ಉಕ್ರೇನ್ ನಡುವೆ ನಡೆಯುತ್ತಿರೋ ಯುದ್ಧ ಸಂಘರ್ಷ ಮುಗಿಯುತ್ತೆ ಅಂತಲೇ ಎಲ್ಲರೂ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ, ಆ ಗಣಿತವೇ ತಪ್ಪು ಅಂತ ಸಾಬೀತು ಮಾಡಿಬಿಟ್ಟಿದ್ದರು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ. 

ಇನ್ನೇನು ಕೆಲವೇ ಗಂಟೆಗಳಲ್ಲಿ ಸಂಧಾನದ ಮಾತುಕತೆ ನಡೆಯಬೇಕಿತ್ತು. ಆದರೆ, ಅದಕ್ಕೂ ಮೊದಲೇ ಒಂದೂವರೆ ವರ್ಷಗಳಿಂದ ನಡೆಸಿದ್ದ ತಯಾರಿಗೆ ಓಹ್ ಯಸ್ ಎಂದುಬಿಟ್ಟರು. ಅವತ್ತು ಝೆಲೆನ್ಸ್​ಕಿ ಕೈಗೊಂಡ ಆ ನಿರ್ಧಾರ, ಇವತ್ತು ಅದೆಷ್ಟು ದುಬಾರಿಯಾಗಿ ಕಾಡ್ತಾ ಇದೆ? ಉಕ್ರೇನ್ ಗತಿ ಏನಾಗಿದೆ? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..

ಇದಾದ ಮೇಲೆ ಉಕ್ರೇನ್ ಮಾಡಿದ ಆಪರೇಷನ್ ಇದ್ಯಲ್ಲಾ, ಅದರಿಂದಲೇ ರಷ್ಯಾ ಉಕ್ರೇನ್ ವಿರುದ್ಧ ಕಂಪ್ಲೀಟಾಗಿ ಕೆರಳೋ ಹಾಗಾಯ್ತು. ಅಷ್ಟಕ್ಕೂ ಉಕ್ರೇನ್ ಅದ್ಯಾವ ಧೈರ್ಯದ ಮೇಲೆ ರಷ್ಯಾ ವಿರುದ್ಧ ಎದೆಸೆಟೆಸಿ ನಿಂತಿತ್ತು. ಉಕ್ರೇನ್ ರಷ್ಯಾ ವಿರುದ್ಧ ಯುದ್ಧಕ್ಕೆ ಮುಂದಾಗಿದ್ದೇ, ತನ್ನ ಹಿಂದೆ ಅಮೆರಿಕಾದ ದೈತ್ಯ ಶಕ್ತಿ ಇದೆ ಅಂತ.. ಆದ್ರೆ ಈಗ ಅದೇ ಅಮೆರಿಕಾ ಉಕ್ರೇನೇ ತಪ್ಪು ಮಾಡಿದ್ದು ಅಂತಿದೆ.. ಅಷ್ಟಕ್ಕೂ ಉಕ್ರೇನ್ ಮಾಡಿದ ಆ ಎಡವಟ್ಟೇನು?

Related Video