ಬಾಂಬ್ ಹಾಕಿದವರೇ ನಾಯಕರು , ಬುದ್ಧ ಪ್ರತಿಮೆ ಧ್ವಂಸ ಮಾಡಿದವನು ಪ್ರಧಾನಿ..! ಇದು ತಾಲಿಬಾನ್ ಸರ್ಕಾರ

ಕಾಬೂಲ್‌: ಅಷ್ಘಾನಿಸ್ತಾನದಲ್ಲಿ ತಾಲಿಬಾನ್‌ ನೂತನ ಸರ್ಕಾರವನ್ನು ರಚಿಸಿದೆ. ದೇಶದ ನೂತನ ಪ್ರಧಾನಿಯಾಗಿ, ಪಾಕಿಸ್ತಾನದ ಬಂಟ ಎಂದೇ ಕುಖ್ಯಾತಿ ಹೊಂದಿರುವ ಮುಲ್ಲಾ ಮೊಹಮ್ಮದ್‌ ಹಸನ್‌ ಅಖುಂದ್‌ನನ್ನು ನೇಮಿಸಲಾಗಿದೆ. 

Share this Video
  • FB
  • Linkdin
  • Whatsapp

ಕಾಬೂಲ್‌ (ಸೆ. 09):  ಅಷ್ಘಾನಿಸ್ತಾನದಲ್ಲಿ ತಾಲಿಬಾನ್‌ ನೂತನ ಸರ್ಕಾರವನ್ನು ರಚಿಸಿದೆ. ದೇಶದ ನೂತನ ಪ್ರಧಾನಿಯಾಗಿ, ಪಾಕಿಸ್ತಾನದ ಬಂಟ ಎಂದೇ ಕುಖ್ಯಾತಿ ಹೊಂದಿರುವ ಮುಲ್ಲಾ ಮೊಹಮ್ಮದ್‌ ಹಸನ್‌ ಅಖುಂದ್‌ನನ್ನು ನೇಮಿಸಲಾಗಿದೆ. 2001ರಲ್ಲಿ ಬಮಿಯಾನ್‌ನಲ್ಲಿ ಪುರಾತನ ಬುದ್ಧ ಪ್ರತಿಮೆ ಧ್ವಂಸ ನಡೆಸಿದ ಘಟನೆಯ ಉಸ್ತುವಾರಿಯನ್ನು ಈತನೇ ಹೊತ್ತುಕೊಂಡಿದ್ದ. ಇನ್ನು ಮುಲ್ಲಾ ಬರಾದರ್‌ ಮತ್ತು ಮುಲ್ಲಾ ಅಬ್ದುಸ್‌ ಸಲಾಂ ಅವರು ಉಪಪ್ರಧಾನಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. 

ಕಾಶ್ಮೀರ ಟಾರ್ಗೆಟ್ ಮಾಡಿದ ಪಾಕ್ ಬೆಂಬಲಿತ ತಾಲಿಬಾನ್: ದಿಢೀರ್ ಉನ್ನತ ಮಟ್ಟದ ಸಭೆ ನಡೆಸಿದ ಮೋದಿ

ನೂತನ ಸಂಪುಟದಲ್ಲಿ ಯಾವುದೇ ಮಹಿಳೆಯರಿಗೆ ಸ್ಥಾನ ನೀಡಿಲ್ಲ. ಹೊಸ ಸರ್ಕಾರದಲ್ಲಿ ಸ್ಥಾನ ಪಡೆದ ಬಹುತೇಕರು, ಈ ಹಿಂದೆ 1996ರಿಂದ 2001ರವರೆಗೆ ತಾಲಿಬಾನ್‌ ಸರ್ಕಾರದಲ್ಲಿ ವಿವಿಧ ಹುದ್ದೆ ಹೊಂದಿದವರೇ ಆಗಿದ್ದಾರೆ. ಉಗ್ರ ನಾಯಕರನ್ನೇ ಒಳಗೊಂಡಿರುವ ಸರ್ಕಾರದ ಜೊತೆ ಯಾವ ದೇಶಗಳು ಸಂಬಂಧ ಬೆಳೆಸಲು ಮುಂದಾಗಲಿವೆ ಎಂಬುದು ಕುತೂಹಲದ ವಿಷಯ.

Related Video