ಬಾಂಗ್ಲಾ, ಶ್ರೀಲಂಕಾದಂತೆ ಸಿರಿಯಾದಲ್ಲೂ ದಂಗೆ; ಮತ್ತೆ ವಶಕ್ಕೆ ಪಡೆಯುತ್ತಾ ಐಸಿಸ್?
ಬಂಡುಕೋರ ನಾಯಕ ಹಾಗೂ ಹಯಾತ್ ತಹ್ರೀರ್ ಅಲ್-ಶಾಮ್ (ಎಚ್‌ಟಿಎಸ್) ಎಂಬ ಇಸ್ಲಾಮಿಕ್ ಮೈತ್ರಿಕೂಟದ ಮುಖ್ಯಸ್ಥ ಅಬು ಮೊಹಮ್ಮದ್ ಅಲ್-ಗೋಲಾನಿ, ‘ಅಧಿಕಾರ ಹಸ್ತಾಂತರಕ್ಕೆಂದು ಸದ್ಯ ಪ್ರಾಧಿಕಾರವೊಂದನ್ನು ರಚಿಸಲಾಗಿದೆ. ಸಿರಿಯಾ ಹಾಲಿ ಪ್ರಧಾನಿ ಮೊಹಮ್ಮದ್ ಅಲ್-ಜಲಾಲಿ ಅವರನ್ನು ದೇಶದ ಸರ್ಕಾರಿ ಸಂಸ್ಥೆಗಳ ಉಸ್ತುವಾರಿಯಾಗಿ ನೇಮಿಸಲಾಗಿದೆ’ ಎಂದಿದ್ದಾನೆ.
ಸಿರಿಯಾದಲ್ಲಿನ ಅಸ್ಥಿರತೆಯನ್ನು ದುರ್ಬಳಕೆ ಮಾಡಿಕೊಂಡು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರ ಸಂಘಟನೆ ಮತ್ತೆ ತನ್ನ ಚಟುವಟಿಕೆ ಆರಂಭಿಸಬಹುದು ಎಂದು ಅಮೆರಿಕ ಅತಂಕ ವ್ಯಕ್ತಪಡಿಸಿದೆ. ‘ಆದರೆ ಪೂರ್ವ ಸಿರಿಯಾದಲ್ಲಿರುವ ಮನ್ನ ನೆಲೆಗಳಲ್ಲಿ ಉಪಸ್ಥಿತಿಯನ್ನು ಮುಂದುವರಿಸಲಿದ್ದೇವೆ ಹಾಗೂ ಯಾವುದೇ ಉಗ್ರ ಚಟುವಟಿಕೆ ಆರಂಭವಾಗದಂತೆ ಮುನ್ನೆಚ್ಚರಿಕೆ ವಹಿಸಲಿದ್ದೇವೆ’ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ.