ವಿಶಾಲ ಸಹರಾ ಮರುಭೂಮಿಯಲ್ಲಿ ರಣಮಳೆಗೆ ಕಾರಣವೇನು? ಮುನಿಸಿಕೊಂಡಿದ್ಯಾ ಪ್ರಕೃತಿ? ಕಾದಿದ್ಯಾ ಆಪತ್ತು?
ಸೂರ್ಯನಿಗೆ ಸವಾಲು ಹಾಕಿ ಮರುಭೂಮಿಯನ್ನೇ ಮುಳುಗಿಸಿದ್ದಾನೆ ವರುಣ. ನೀರೇ ಕಾಣದ ಪ್ರದೇಶದಲ್ಲೀಗ ನೀರೋ ನೀರು. ಜಗತ್ತಿನ ಅತಿ ದೊಡ್ಡ ಮರುಭೂಮಿಯಲ್ಲಿ ಸುರಿದಿದ್ದು ದಶಕಗಳ ದಾಖಲೆಯ ಮಳೆ. ಮರಳಿನ ಮಧ್ಯೆ ನಿಂತಿರುವ ನೀರು ಜಗತ್ತನ್ನೇ ದಿಗ್ಭ್ರಾಂತಗೊಳಿಸ್ತಾ ಇದೆ. ಮರಳುಗಾಡಿನಲ್ಲಿ ಏನಿದು ವಿಚಿತ್ರ ಬೆಳವಣಿಗೆ? ಮುನಿಸಿಕೊಂಡಿತಾ ನಿಸರ್ಗ? ಅಸ್ವಾಭಾವಿಕ ಮಳೆ ತಂದಿರೋದು ಅದೆಂತಹ ಆತಂಕ? ಇದೇ ಈ ಹೊತ್ತಿನ ವಿಶೇಷ ಮರುಭೂಮಿಯಲ್ಲಿ ಪ್ರವಾಹ.
ಸಹರಾದಂತಹ ಮರುಭೂಮಿಯೇ ಪ್ರವಾಹಕ್ಕೆ ಸಾಕ್ಷಿಯಾಗಿದೆ. ಮೊರೊಕ್ಕೊ ದೇಶದಲ್ಲಿ ಸುರಿದ ಮಳೆಗೆ ಮರಳುಗಾಡಿನಲ್ಲಿಯೂ ನೀರು ನಿಂತಿದೆ. ಇದೇ ಸಹರಾ ಮರುಭೂಮಿ ಕುರಿತಾಗಿ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಒಂದು ವಿಚಾರ ಹೊರಹಾಕಿತ್ತು. ಆ ವಿಚಾರ ಆತಂಕದ ಜೊತೆಗೆ ಅಚ್ಚರಿಗೂ ಕಾರಣವಾಗಿತ್ತು. ಈಗ ಪ್ರವಾಹಕ್ಕೆ ಸಾಕ್ಷಿಯಾಗಿರುವ ಸಹರಾ ಮರುಭೂಮಿ, ಹಿಂದೊಮ್ಮೆ ಹಿಮಪಾತವನ್ನೂ ಕಂಡಿತ್ತು. ಅಷ್ಟೇ ಅಲ್ಲಾ ಈಗ ಜಗತ್ತಿನ ದೊಡ್ಡ ಮರುಭೂಮಿ ಅನ್ನಿಸಿಕೊಳ್ಳುವ ಸಹರಾ ಹಿಂದೊಮ್ಮೆ ಹಚ್ಚ ಹಸಿರಿನ ತಾಣವಾಗಿತ್ತು ಅನ್ನೋದು ಕೆಲ ವಿಜ್ಞಾನಿಗಳ ವಾದ. ಹಾಗಿದ್ರೆ, ಮರಳುಗಾಡಿನಲ್ಲಿ ಅಂದು ಹಿಮಪಾತವಾಗಿದ್ದೇಕೆ?