Asianet Suvarna News Asianet Suvarna News

ರಷ್ಯಾ-ಉಕ್ರೇನ್‌ ಕಾದಾಟಕ್ಕೆ ಸಾವಿರ ವರ್ಷ ಇತಿಹಾಸ: ಉಕ್ರೇನಿಗರಿಗೆ ಯುದ್ಧವೇ ಉಸಿರು!

ರಷ್ಯನ್ನರನ್ನು ಓಡಿಸ್ತಿರೋ ಶಕ್ತಿಯೇ ಸಾವಿರ ವರ್ಷದ ಚರಿತ್ರೆ. ಸಾವಿರ ವರ್ಷಗಳಿಂದಲೂ ಉಕ್ರೇನಿಯನ್ನರಿಗೆ ಯುದ್ಧವೇ ಉಸಿರು. ಉಕ್ರೇನ್ ಹೋರಾಟದ ಹಿಂದಿದೆ ಸಾವಿರ ವರ್ಷದ ಹಿಂದಿನ ಕಥೆ. 

First Published Apr 14, 2022, 2:15 PM IST | Last Updated Apr 14, 2022, 2:15 PM IST

ಕೀವ್(ಏ.14): ವಿಶೇಷ ಮಿಲಿಟರಿ ಕಾರ್ಯಾಚರಣೆ ಹೆಸರಿನಲ್ಲಿ ರಷ್ಯಾ ಉಕ್ರೇನ್‌ ಆರಂಭಿಸಿದ ಆಕ್ರಮಣ ಗುರುವಾರ 50 ದಿನ ಪೂರೈಸಲಿದೆ.ಈಗಲೂ ಕೀವ್‌, ಖಾರ್ಕೀವ್‌, ಮರಿಯುಪೋಲ್‌ ನಗರಗಳ ಮೇಲೆ ರಷ್ಯಾದ ದಾಳಿ ಮುಂದುವರೆದಿದೆ. ಖಾರ್ಕೀವ್‌ನಲ್ಲಿ ನಡೆದ ಹೊಸ ದಾಳಿಯಲ್ಲಿ ಬುಧವಾರ 7 ಮಂದಿ ಹತರಾಗಿದ್ದಾರೆ. ಈ ನಡುವೆ ಮರಿಯುಪೋಲ್‌ನಲ್ಲಿ ಇನ್ನೂ 1 ಲಕ್ಷ ಜನರು ರಷ್ಯಾ ದಾಳಿಯಿಂದಾಗಿ ಸಿಕ್ಕಿಹಾಕಿಕೊಂಡಿದ್ದು, ಈ ನಗರವನ್ನು ರಷ್ಯಾ ತನ್ನ ವಶಕ್ಕೆ ಪಡೆದುಕೊಂಡಿದೆ.

ಉಕ್ರೇನನ್ನು ಸುಲಭವಾಗಿ ವಶಕ್ಕೆ ಪಡೆದುಕೊಳ್ಳಬಹುದು ಎಂದು ಆಕ್ರಮಣ ಆರಂಭಿಸಿದ ರಷ್ಯಾಗೆ ಉಕ್ರೇನ್‌ ಪ್ರಬಲ ಪೈಪೋಟಿ ನೀಡಿದೆ. ಆದರೆ ರಷ್ಯಾದ ದಾಳಿಯಿಂದಾಗಿ ಸಾವಿರಾರು ಸೈನಿಕರು, ನಾಗರಿಕರು ಸಾವಿಗೀಡಾಗಿದ್ದಾರೆ. ಅಮಾಯಕರ ನರಮೇಧವೂ ನಡೆದಿದೆ. ದಾಳಿಗೆ ಅಂಜಿ 8.7 ಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರವಾಗಿದ್ದಾರೆ. ಅಷ್ಟಕ್ಕೂ ಉಕ್ರೇನ್‌ನಂತಹ ಪುಟ್ಟ ರಾಷ್ಟ್ರ ರಾಷ್ಯಾದಂತಹ ಬಲಿಷ್ಟ ದೇಶಕ್ಕೆ ಈ ಮಟ್ಟದ ಪೈಪೋಟಿ ನೀಡಿದ್ದು ಹೇಗೆ? ಇಲ್ಲಿದೆ ವಿವರ