
Russia-Ukraine War: ಮರಿಯುಪೋಲ್‌ನಲ್ಲಿ ಶವ ಸಂಸ್ಕಾರಕ್ಕೂ ಬಿಡದೆ ರಷ್ಯಾದಿಂದ ಬಾಂಬ್, ಕ್ಷಿಪಣಿ ಮಳೆ
ರಷ್ಯಾ-ಉಕ್ರೇನ್ ಯುದ್ಧ 18 ನೇ ದಿನಕ್ಕೆ ಕಾಲಿಟ್ಟಿದೆ. ಕ್ರೇನ್ ಮೇಲಿನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ರಷ್ಯಾ ಸೇನೆ, ಭಾರೀ ಪ್ರಮಾಣದಲ್ಲಿ ವೈಮಾನಿಕ ದಾಳಿ ನಡೆಸಿದೆ.
ರಷ್ಯಾ-ಉಕ್ರೇನ್ ಯುದ್ಧ 18 ನೇ ದಿನಕ್ಕೆ ಕಾಲಿಟ್ಟಿದೆ. ಕ್ರೇನ್ ಮೇಲಿನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ರಷ್ಯಾ ಸೇನೆ, ಭಾರೀ ಪ್ರಮಾಣದಲ್ಲಿ ವೈಮಾನಿಕ ದಾಳಿ ನಡೆಸಿದೆ. ಜೊತೆಗೆ ರಾಜಧಾನಿ ಕೀವ್ ನಗರದಲ್ಲಿ ರಷ್ಯಾ ಹಾಗೂ ಉಕ್ರೇನಿ ಪಡೆಗಳ ನಡುವೆ ಸಂಘರ್ಷ ಮುಂದುವರಿದಿದ್ದು, ಕೀವ್ ನಗರದ ಮತ್ತಷ್ಟುಸನಿಹಕ್ಕೆ ರಷ್ಯಾ ಧಾವಿಸಿದೆ.
ನಾವು ಉಕ್ರೇನ್ ನೆಲದಲ್ಲಿ ನಿಂತು ಹೋರಾಡಲ್ಲ, ರಷ್ಯಾ ಮೇಲೆ ನಿರ್ಬಂಧ ಹೆಚ್ಚಿಸುತ್ತೇವೆ: ಅಮೆರಿಕಾ
ಈ ನಡುವೆ, ದಾಳಿಯಿಂದ ಭಾರೀ ಪ್ರಮಾಣದಲ್ಲಿ ತತ್ತರಿಸಿರುವ ಬಂದರು ನಗರಿ ಮರಿಯುಪೋಲ್ ಮೇಲೆ ಶವಸಂಸ್ಕಾರಕ್ಕೆ ಕೂಡ ಅವಕಾಶ ಮಾಡಿಕೊಡದೆ ರಷ್ಯಾ ವಾಯುದಾಳಿ ಕೈಗೊಂಡಿದೆ. 1500 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.