Russia Ukraine War 227ನೇ ದಿನಕ್ಕೆ ಕಾಲಿಟ್ಟ ಯುದ್ಧ, ಇನ್ನೂ ತಣ್ಣಗಾಗದ ಕಿಚ್ಚು!
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಆರಂಭಗೊಂಡ 227 ದಿನಗಳು ಉರುಳಿದೆ. ಆದರೆ ಕಿಚ್ಚು ಮಾತ್ರ ಹಾಗೇ ಇದೆ. ಇದೀಗ ಮತ್ತೆ ದೊಡ್ಡ ದಾಳಿಗಳನ್ನು ಉಭಯ ದೇಶಗಳು ಸಂಘಟಿಸುತ್ತಿದೆ. ಇದೀಗ ರಷ್ಯಾ ಬೆಚ್ಚಿ ಬಿದ್ದಿದೆ.
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ಕಿಚ್ಚು ತೀವ್ರಗೊಂಡಿದೆ. ಬರೋಬ್ಬರಿ 227 ದಿನಗಳಿಂದ ನಡೆಯುತ್ತಿರುವ ಭೀಕರ ಯುದ್ದ ಮತ್ತೆ ತೀವ್ರಗೊಳ್ಳುತ್ತಿದೆ. ಇದೀಗ ರಷ್ಯಾದ ಪ್ರಮುಕ ಸೇತುವೆಯನ್ನು ಸ್ಫೋಟಿಸಲಾಗಿದೆ. ಕ್ರಿಮಿಯಾಜ ಕ್ರೆಚ್ ಬ್ರಿಡ್ಡ್ ಮೇಲೆ ಇಂಧನದ ಟ್ಯಾಂಕ್ ಸ್ಫೋಟಿಸಲಾಗಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜನ್ಮದಿನದ ಸಂಭ್ರಮ ಕಸಿಯುವ ಯತ್ನ ಎಂದು ರಷ್ಯಾ ಹೇಳಿದೆ. ಇತ್ತ ಉಕ್ರೇನ್ ಸೇನೆ ಈ ಸ್ಫೋಟದಲ್ಲಿ ನಮ್ಮ ಪಾತ್ರವಿಲ್ಲ ಎಂದು ಉಕ್ರೇನ್ ಸೇನಾಧಿಕಾರಿಗಳು ಹೇಳಿದ್ದಾರೆ.