Ukraine Russia War: ರಷ್ಯಾ ಜತೆ ಭಾರತ ಮಾತನಾಡುವಂತೆ ಉಕ್ರೇನ್ ಮನವಿ

ಪೂರ್ವ ಉಕ್ರೇನ್‌ನಲ್ಲಿ 'ಮಿಲಿಟರಿ ಕಾರ್ಯಾಚರಣೆ' ಪ್ರಾರಂಭಿಸುವ ನಿರ್ಧಾರವನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸುತ್ತಿದ್ದಂತೆ ಭಾರತದ ಮದ್ಯಪ್ರವೇಶಕ್ಕೆ ಉಕ್ರೇನ್ ಮನವಿ ಮಾಡುತ್ತಿದೆ. 

Share this Video
  • FB
  • Linkdin
  • Whatsapp

ಪೂರ್ವ ಉಕ್ರೇನ್‌ನಲ್ಲಿ 'ಮಿಲಿಟರಿ ಕಾರ್ಯಾಚರಣೆ' ಪ್ರಾರಂಭಿಸುವ ನಿರ್ಧಾರವನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸುತ್ತಿದ್ದಂತೆ ಭಾರತದ ಮದ್ಯಪ್ರವೇಶಕ್ಕೆ ಉಕ್ರೇನ್ ಮನವಿ ಮಾಡುತ್ತಿದೆ. ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಕಛೇರಿ ಮನವಿ ಮಾಡಿದೆ. ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾ ಯಾರ ಮಾತನ್ನು ಕೇಳುತ್ತಿಲ್ಲ. ಹೀಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅಧ್ಯಕ್ಷ ಪುಟಿನ್ ಜೊತೆ ಮಾತನಾಡಲಿ ಅಂತ ಮನವಿ ಮಾಡಿದೆ. ಈ ಕುರಿತು ಮಾತನಾಡಿರುವ ಉಕ್ರೇನಿಯನ್ ರಾಯಭಾರಿ ಇಗೊರ್ ಪೋಲಿಖಾ, ರಷ್ಯಾದ ಅಧ್ಯಕ್ಷ ಪುಟಿನ್ ಮತ್ತು ನಮ್ಮ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ತಕ್ಷಣವೇ ಸಂಪರ್ಕಿಸಲು ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.

Related Video