ಉಕ್ರೇನ್ ಯುದ್ಧಕ್ಕೆ ಟ್ವಿಸ್ಟ್, ಪುಟಿನ್ ಹೊಸ ಪ್ಲಾನ್‌ಗೆ ಜಗತ್ತಿಗೆ ಶುರುವಾಯ್ತು ನಡುಕ!

  • ರಷ್ಯಾ ಉಕ್ರೇನ್ ನಡುವಿನ ಭೀಕರ ಯುದ್ದಕ್ಕೆ ಟ್ವಿಸ್ಟ್
  • ಹೊಸ ಪ್ಲಾನ್ ಮುಂದಿಟ್ಟ ರಷ್ಯಾ ಅಧ್ಯಕ್ಷ ಪುಟಿನ್
  • ಹೊಸ ಕಾರ್ಯತಂತ್ರದ ಮೂಲಕ ದಾಳಿ
First Published Jun 9, 2022, 10:15 PM IST | Last Updated Jun 9, 2022, 10:15 PM IST

ರಷ್ಯಾ ಉಕ್ರೇನ್ ಯುದ್ಧ ಇಂದು ಮುಗಿಯುತ್ತೆ, ನಾಳೆ ಮುಗಿಯುತ್ತೆ ಅಂದುಕೊಂಡರೆ ತಪ್ಪು. ನೂರು ದಿನ ದಾಟಿದರೂ ಯುದ್ಧ ನಿಂತಿಲ್ಲ. ಉಕ್ರೇನ್‌ನಲ್ಲಿ ಧ್ವಂಸಗೊಳಿಸಲು ಇನ್ನು ಕಟ್ಟಡ, ರಸ್ತೆ ಉಳಿದಿಲ್ಲ. ಆದರೂ ರಷ್ಯಾ ಸೇಡು ನಿಂತಿಲ್ಲ. ಇದೀಗ ಈ ಯುದ್ಧಕ್ಕೆ ಟ್ವಿಸ್ಟ್ ನೀಡಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮುಂದಾಗಿದ್ದಾರೆ.