ಪಾಕಿಸ್ತಾನದಲ್ಲಿ ಪೊಲೀಸ್‌ ದಂಗೆ; ಸರ್ಕಾರದ ವಿರುದ್ಧ ಪ್ರಬಲ ಹೋರಾಟ ಶುರು

ಇಮ್ರಾನ್‌ ಖಾನ್‌ ಪ್ರಧಾನಿಯಾದ ಎರಡು ವರ್ಷಗಳ ನಂತರ ಪಾಕಿಸ್ತಾನಕ್ಕೆ ಗಂಭೀರ ಬಿಕ್ಕಟ್ಟು ಎದುರಾಗಿದೆ. ರಾಜಕೀಯದಲ್ಲಿ ಸೇನೆ ಮೂಗು ತೂರಿಸುತ್ತಿದೆ, ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಈಗಾಗಲೇ 11 ರಾಜಕೀಯ ಪಕ್ಷಗಳು ಒಗ್ಗೂಡಿ ದೇಶವ್ಯಾಪಿ ಪ್ರತಿಭಟನೆ ಆರಂಭಿಸಿವೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 22): ಇಮ್ರಾನ್‌ ಖಾನ್‌ ಪ್ರಧಾನಿಯಾದ ಎರಡು ವರ್ಷಗಳ ನಂತರ ಪಾಕಿಸ್ತಾನಕ್ಕೆ ಗಂಭೀರ ಬಿಕ್ಕಟ್ಟು ಎದುರಾಗಿದೆ. ರಾಜಕೀಯದಲ್ಲಿ ಸೇನೆ ಮೂಗು ತೂರಿಸುತ್ತಿದೆ, ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಈಗಾಗಲೇ 11 ರಾಜಕೀಯ ಪಕ್ಷಗಳು ಒಗ್ಗೂಡಿ ದೇಶವ್ಯಾಪಿ ಪ್ರತಿಭಟನೆ ಆರಂಭಿಸಿವೆ. 

ವೈಷ್ಣೋದೇವಿ ದರ್ಶನಕ್ಕೆ 2200 ಕಿಮೀ ಸೈಕಲ್ ಸವಾರಿ ಮಾಡಿದ 82 ರ ವೃದ್ದೆ..!

ಇದೇ ಸಂದರ್ಭದಲ್ಲಿ ಪೊಲೀಸ್‌ ಮುಖ್ಯಸ್ಥರ ಅಪಹರಣ ಘಟನೆ ನಡೆದಿರುವುದು ಇಮ್ರಾನ್‌ ಸರ್ಕಾರ ಹಾಗೂ ಸೇನೆಗೆ ಭಾರಿ ಮುಳುವಾಗಿದೆ. ಈ ಘಟನೆ ಬಗ್ಗೆ ಪ್ರತಿಪಕ್ಷಗಳು ಟೀಕಾ ಪ್ರಹಾರ ನಡೆಸಿವೆ. ಸಿಂಧ್‌ನ ವಿವಿಧ ಭಾಗಗಳ 3 ಐಜಿಗಳು, 25 ಡಿಐಜಿಗಳು, 30 ವಿಶೇಷ ಪೊಲೀಸ್‌ ಅಧೀಕ್ಷಕರು, 12 ಎಸ್‌ಪಿಗಳು, ಡಿಎಸ್ಪಿಗಳು ಹಾಗೂ ಇನ್ಸ್‌ಪೆಕ್ಟರ್‌ಗಳು ಸಾಮೂಹಿಕ ರಜೆ ಹಾಕಿದ್ದು, ತಮ್ಮ ಐಜಿಪಿಯನ್ನು ಅಪಹರಿಸಿ, ಅವಾನ್‌ ಬಂಧನಕ್ಕೆ ಬಲವಂತದಿಂದ ಸರ್ಕಾರ ಸಹಿ ಹಾಕಿಸಿಕೊಂಡಿದೆ ಎಂದು ಸೇನೆ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಪಾಕ್ ಸರ್ಕಾರದ ವಿರುದ್ಧ ಹೋರಾಟವೊಂದು ಆರಂಭವಾಗಿದ್ದು, ಎಲ್ಲಿಗೆ ಹೋಗಿ ನಿಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ. 

Related Video