ಹಿಂದಿಯಲ್ಲಿ ಮೋದಿಗೆ ಸ್ವಾಗತ ಕೋರಿದ ಜಪಾನಿ ಬಾಲಕ, ಭಾಷಾಪ್ರೇಮಕ್ಕೆ ನಮೋ ಫಿದಾ!

 ಭಾರತ, ಅಮೆರಿಕ, ಜಪಾನ್‌ ಹಾಗೂ ಆಸ್ಪ್ರೇಲಿಯಾಗಳು ರಚನೆ ಮಾಡಿಕೊಂಡಿರುವ ಬಲಿಷ್ಠ ‘ಕ್ವಾಡ್‌ ಕೂಟ’ದ ಮಹತ್ವದ ಸಭೆ ಇಂದಿನಿಂದ ಆರಂಭವಾಗಿದೆ. 

Share this Video
  • FB
  • Linkdin
  • Whatsapp

ಭಾರತ, ಅಮೆರಿಕ, ಜಪಾನ್‌ ಹಾಗೂ ಆಸ್ಪ್ರೇಲಿಯಾಗಳು ರಚನೆ ಮಾಡಿಕೊಂಡಿರುವ ಬಲಿಷ್ಠ ‘ಕ್ವಾಡ್‌ ಕೂಟ’ದ ಮಹತ್ವದ ಸಭೆ ಇಂದಿನಿಂದ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಜಪಾನ್‌ಗೆ ತೆರಳಿದ್ದಾರೆ. ಈ ವೇಳೆ ಮೋದಿಯವರನ್ನು ಸ್ವಾಗತಿಸಿದ ಜಪಾನಿನ ವಿಝುಕಿ ಎಂಬ ಬಾಲಕ ಹಿಂದಿ ಭಾಷೆಯಲ್ಲಿ 'ಜಪಾನ್‌ಗೆ ಸ್ವಾಗತ, ದಯವಿಟ್ಟು ನಿಮ್ಮ ಆಟೋಗ್ರಾಫ್​ ಕೊಡಬಹುದೇ? ಎಂದು ಕೇಳಿದ. ಅವನ ಮಾತು ಕೇಳಿದ ಮೋದಿಯವರು, ವಾಹ್! ನೀನು ಎಲ್ಲಿಂದ ಹಿಂದಿ ಕಲಿತೆ?. ನಿನಗೆ ಹಿಂದಿ ಚೆನ್ನಾಗಿ ತಿಳಿದಿದೆಯೇ? ನೀನು ಹಿಡಿದಿರುವ ಫೈಲ್‌ನಲ್ಲಿ ಏನಿದೆ..? ಎಂದು ಪ್ರಶ್ನಿಸಿದರು.

Related Video