Asianet Suvarna News Asianet Suvarna News

ಬಜ್ವಾ ಸೇವಾವಧಿ ವಿಸ್ತರಿಸದ ಪಾಕ್ ಸುಪ್ರೀಂಕೋರ್ಟ್: ಸೇನಾ ಕ್ರಾಂತಿ ನಕ್ಕಿ?

 ಪಾಕ್ ಸೇನಾಧ್ಯಕ್ಷ ಜನರಲ್ ಖಮರ್ ಜಾವೇದ್ ಬಜ್ವಾ ಅವರ ಸೇವಾ ಅವಧಿಯನ್ನು ಮೂರು ವರ್ಷಗಳ ಕಾಲ ವಿಸ್ತರಿಸುವ ಪ್ರಸ್ತಾವನೆಯನ್ನು ಪಾಕಿಸ್ತಾನ ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಇದೇ ನ.29ರಂದು ಬಜ್ವಾ ನಿವೃತ್ತಿ ಹೊಂದುತ್ತಿದ್ದು, ಅವರ ಸೇವಾ ಅವಧಿಯನ್ನು ಮೂರು ವರ್ಷಗಳವರೆಗೆ ವಿಸ್ತರಿಸಲು ಪಾಕಿಸ್ತಾನ ಸರ್ಕಾರ ಬಯಸಿತ್ತು. 

ಇಸ್ಲಾಮಾಬಾದ್(ನ.27): ಪಾಕ್ ಸೇನಾಧ್ಯಕ್ಷ ಜನರಲ್ ಖಮರ್ ಜಾವೇದ್ ಬಜ್ವಾ ಅವರ ಸೇವಾ ಅವಧಿಯನ್ನು ಮೂರು ವರ್ಷಗಳ ಕಾಲ ವಿಸ್ತರಿಸುವ ಪ್ರಸ್ತಾವನೆಯನ್ನು ಪಾಕಿಸ್ತಾನ ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಇದೇ ನ.29ರಂದು ಬಜ್ವಾ ನಿವೃತ್ತಿ ಹೊಂದುತ್ತಿದ್ದು, ಅವರ ಸೇವಾ ಅವಧಿಯನ್ನು ಮೂರು ವರ್ಷಗಳವರೆಗೆ ವಿಸ್ತರಿಸಲು ಪಾಕಿಸ್ತಾನ ಸರ್ಕಾರ ಬಯಸಿತ್ತು. ಅಲ್ಲದೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಳೆದ ಆ.19ರಂದು ಬಜ್ವಾ ಸೇವಾ ಅವಧಿಯ ವಿಸ್ತರಣಾ ಪತ್ರಕ್ಕೆ ಸಹಿ ಕೂಡ ಹಾಕಿದ್ದರು.

ಗುಂಡು, ಉಸಿರಿರುವವರೆಗೂ ಕಾಶ್ಮೀರಕ್ಕಾಗಿ ಹೋರಾಟ: ಪಾಕ್ ಸೇನಾ ಮುಖ್ಯಸ್ಥ!

ಆದರೆ ಈ ಪ್ರಸ್ತಾವನೆಯನ್ನು ತಳ್ಳಿ ಹಾಕಿರುವ ಮುಖ್ಯ ನ್ಯಾಯಮೂರ್ತಿ ಆಸೀಫ್ ಸೈಯ್ಯದ್ ಖೋಸಾ, ಸೇನಾ ಮುಖ್ಯಸ್ಥರ ಸೇವಾ ಅವಧಿ ವಿಸ್ತರಿಸುವ ಅಧಿಕಾರ ಕೇವಲ ಅಧ್ಯಕ್ಷರಿಗೆ ಮಾತ್ರ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.  ಖೋಸಾ ಅವರ ತೀರ್ಪು ಇದೀಗ  ವಿವಾದ ಸೃಷ್ಟಿಸಿದ್ದು, ಅವರು ನೀಡಿದ ತೀರ್ಪಿನ ನೈಜ ಪ್ರತಿ ಸುಪ್ರೀಂಕೋರ್ಟ್ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ. ಇದಕ್ಕೆ ಸುಪ್ರೀಂಕೋರ್ಟ್ ಅಧಿಕೃತ ವೆಬ್‌ಸೈಟ್ ಬ್ಲಾಕ್ ಆಗಿರುವುದೇ ಕಾರಣ ಎಂದು ಹೇಳಲಾಗಿದೆ.  ಇನ್ನು ಪಾಕಿಸ್ತಾನ ಅಧ್ಯಕ್ಷರ ಅಧಿಕೃತ ವೆಬ್‌ಸೈಟ್ ಕೂಡ ಬ್ಲಾಕ್ ಆಗಿದೆ ಎನ್ನಲಾಗಿದ್ದು, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರದ ಮಾತು ಕೇಳದ ಸೇನೆ ಮತ್ತೊಂದು ಸೇನಾ ಕ್ರಾಂತಿಗೆ ಸಿದ್ಧತೆ ನಡೆಸಿದೆ ಎಂಬ ಆತಂಕ ಎದುರಾಗಿದೆ.