Operation Ganga: ಕೊನೆಯ ಹಂತದಲ್ಲಿ, ಇಂದು 8 ವಿಮಾನದಲ್ಲಿ 1500 ಮಂದಿ ತವರಿಗೆ

ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ 16000 ಕ್ಕೂ ಹೆಚ್ಚು ಭಾರತೀಯರನ್ನು ರಕ್ಷಿಸುವ ‘ಆಪರೇಷನ್‌ ಗಂಗಾ’ ಬೃಹತ್‌ ಏರ್‌ಲಿಫ್ಟ್‌ ಕಾರ್ಯಾಚರಣೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ.

Share this Video
  • FB
  • Linkdin
  • Whatsapp

ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ 16000 ಕ್ಕೂ ಹೆಚ್ಚು ಭಾರತೀಯರನ್ನು ರಕ್ಷಿಸುವ ‘ಆಪರೇಷನ್‌ ಗಂಗಾ’ ಬೃಹತ್‌ ಏರ್‌ಲಿಫ್ಟ್‌ ಕಾರ್ಯಾಚರಣೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ. ಉಕ್ರೇನ್‌ನ ಅಕ್ಕಪಕ್ಕದ ದೇಶಗಳಾದ ರೊಮೇನಿಯಾ, ಹಂಗೇರಿ, ಸ್ಲೋವಾಕಿಯಾ ಹಾಗೂ ಪೋಲೆಂಡ್‌ನಿಂದ 2135 ಭಾರತೀಯರು ಭಾನುವಾರ 11 ವಿಮಾನಗಳಲ್ಲಿ ತವರಿಗೆ ಆಗಮಿಸಿದ್ದು, ಇಂದು 8 ವಿಮಾನಗಳಲ್ಲಿ ಇನ್ನೂ 1500 ಜನರು ತಾಯ್ನಾಡಿಗೆ ವಾಪಸಾಗಲಿದ್ದಾರೆ. ಅಲ್ಲಿಗೆ ಕಳೆದೊಂದು ವಾರದಲ್ಲಿ 82 ವಿಮಾನಗಳಲ್ಲಿ 16500ಕ್ಕೂ ಹೆಚ್ಚು ಜನರನ್ನು ತವರಿಗೆ ಕರೆತಂದಂತೆ ಆಗಲಿದೆ.

ಭಾರತೀಯ ವಾಯುಪಡೆ ಕೂಡ ಈವರೆಗೆ 10 ವಿಮಾನಗಳಲ್ಲಿ 2056 ಭಾರತೀಯರನ್ನು ಉಕ್ರೇನ್‌ನ ಅಕ್ಕಪಕ್ಕದ ದೇಶಗಳಿಂದ ಕರೆತಂದಿದೆ. ಜೊತೆಗೆ 26 ಟನ್‌ ನೆರವಿನ ಸಾಮಗ್ರಿಗಳನ್ನು ಉಕ್ರೇನ್‌ಗೆ ತಲುಪಿಸಿದೆ. ಇನ್ನುಳಿದಂತೆ ಇಂಡಿಗೋ, ಏರ್‌ ಇಂಡಿಯಾ, ವಿಸ್ತಾರ ಹಾಗೂ ಸ್ಪೈಸ್‌ಜೆಟ್‌ ವಿಮಾನಯಾನ ಕಂಪನಿಗಳು ಆಪರೇಷನ್‌ ಗಂಗಾ ಅಡಿ ಭಾರತ ಸರ್ಕಾರದ ಜೊತೆ ಕೈಜೋಡಿಸಿ ನಾಗರಿಕರನ್ನು ಕರೆತರುತ್ತಿವೆ.

Related Video