ಟಾರ್ಗೆಟ್ ಅಮೆರಿಕಾ, ಕ್ಷಿಪಣಿ ಉಡಾಯಿಸಿ ನಡುಕ ಹುಟ್ಟಿಸಿದ ಕಿಂಗ್ ಜಾಂಗ್ ಉನ್!
ದಕ್ಷಿಣ ಕೊರಿಯಾ ಹಾಗೂ ಅಮೆರಿಕ ಮಿಲಿಟರಿ ಪಡೆಗಳು ಒಟ್ಟಾಗಿ ಸಮರಾಭ್ಯಾಸ ನಡೆಸುತ್ತಿದ್ದು, ಸಹಿಸಿಕೊಳ್ಳಲಾಗದ ಉತ್ತರ ಕೊರಿಯಾವು ಕ್ಷಿಪಣಿಗಳನ್ನು ಹಾರಿಸುತ್ತಿದೆ.
ದಕ್ಷಿಣ ಕೊರಿಯಾ ಹಾಗೂ ಅಮೆರಿಕ ಮಿಲಿಟರಿ ಪಡೆಗಳು ಒಟ್ಟಾಗಿ ಸಮರಾಭ್ಯಾಸ ನಡೆಸುತ್ತಿದ್ದು, ಸಹಿಸಿಕೊಳ್ಳಲಾಗದ ಉತ್ತರ ಕೊರಿಯಾವು ಕ್ಷಿಪಣಿಗಳನ್ನು ಹಾರಿಸುತ್ತಿದೆ.ಅಮೆರಿಕ ಮತ್ತು ಚೀನಾ ನಡುವೆ ತಲೆದೋರಿರುವ ಉದ್ವಿಗ್ನತೆ ನಡುವೆ, ಉತ್ತರ ಕೊರಿಯಾ ಮಿಲಿಟರಿ ಸಾಮರ್ಥ್ಯ ಹೆಚ್ಚಾಗಿದೆ. ಇದು ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹೊಂದಿದ್ದು, ಅದು ಕೇವಲ 33 ನಿಮಿಷಗಳಲ್ಲಿ ಅಮೆರಿಕವನ್ನು ವಿನಾಶಗೊಳಿಸಬಹುದು ಎನ್ನಲಾಗಿದೆ. ಉತ್ತರ ಕೊರಿಯಾ ಕ್ಷಿಪಣಿಯು ಎರಡು ಹಂತದ ಪರಮಾಣು-ಸಾಮರ್ಥ್ಯದ ಅಸ್ತ್ರವಾಗಿದ್ದು, 13,000 ಕಿಮೀ ವ್ಯಾಪ್ತಿಯನ್ನು ಪರಿಣಾಮಕಾರಿಯಾಗಿ ತಲುಪುವ ಸಾಮರ್ಥ್ಯ ಹೊಂದಿದೆ. ಇದು ಇಡೀ ಅಮೆರಿಕವನ್ನು ನಾಶ ಮಾಡಲು ಸಾಕು ಎಂದು ಹೇಳಲಾಗಿದೆ. ಈ ಕ್ಷಿಪಣಿಯು ಮಧ್ಯ ಅಮೆರಿಕವನ್ನು 1,997 ಸೆಕೆಂಡುಗಳಲ್ಲಿ ಅಂದರೆ ಸರಿಸುಮಾರು 33 ನಿಮಿಷಗಳಲ್ಲಿ ತಲುಪಬಹುದು.