
'ಭಾರತದ ಒಂದಿಂಚು ಭೂಮಿಯನ್ನೂ ಸ್ಪರ್ಶಿಸಲು ವಿಶ್ವದ ಯಾವುದೇ ಶಕ್ತಿಗಳಿಂದ ಆಗದು'
‘ಭಾರತ ದುರ್ಬಲ ದೇಶವಲ್ಲ. ವಿಶ್ವದ ಯಾವುದೇ ಶಕ್ತಿಗೆ ಭಾರತದ ಒಂದು ಇಂಚು ಭೂಮಿಯನ್ನೂ ಮುಟ್ಟಲು ಸಾಧ್ಯವಿಲ್ಲ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಗುಡುಗಿದ್ದಾರೆ. ಈ ಮೂಲಕ ಇತ್ತೀಚೆಗೆ ಗಡಿ ತಂಟೆ ತೆಗೆದಿದ್ದ ಚೀನಾಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿ (ಜು. 18): ‘ಭಾರತ ದುರ್ಬಲ ದೇಶವಲ್ಲ. ವಿಶ್ವದ ಯಾವುದೇ ಶಕ್ತಿಗೆ ಭಾರತದ ಒಂದು ಇಂಚು ಭೂಮಿಯನ್ನೂ ಮುಟ್ಟಲು ಸಾಧ್ಯವಿಲ್ಲ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಗುಡುಗಿದ್ದಾರೆ. ಈ ಮೂಲಕ ಇತ್ತೀಚೆಗೆ ಗಡಿ ತಂಟೆ ತೆಗೆದಿದ್ದ ಚೀನಾಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
‘ಪೂರ್ವ ಲಡಾಖ್‌ನಲ್ಲಿ ಸೃಷ್ಟಿಯಾಗಿದ್ದ ಬಿಕ್ಕಟ್ಟನ್ನು ತಣಿಸಲು ಮಾತುಕತೆ ಪ್ರಗತಿಯಲ್ಲಿವೆ. ಆದರೆ ಬಿಕ್ಕಟ್ಟು ಎಷ್ಟರ ಮಟ್ಟಿಗೆ ಇತ್ಯರ್ಥ ಆಗುತ್ತದೆ ಎಂಬುದಕ್ಕೆ ಗ್ಯಾರಂಟಿ ನೀಡಲು ಆಗದು’ ಎಂದು ಅವರು ಸ್ಪಷ್ಟಪಡಿಸಿದರು.
ಚೀನಾ ಕಂಪನಿಯಿಂದ 3 ನೇ ಹಂತದ ಕೊರೋನಾ ಲಸಿಕೆ ಪ್ರಯೋಗ ಶುರು!
‘ಭಾರತ ದುರ್ಬಲ ದೇಶವಲ್ಲ. ದೇಶದ ಒಂದಿಂಚು ಜಮೀನನ್ನೂ ವಿಶ್ವದ ಯಾವುದೇ ಶಕ್ತಿಗೆ ‘ಟಚ್’ ಮಾಡಲು ಆಗದು. ಭಾರತದ ಯೋಧರ ಸಾವನ್ನು ವ್ಯರ್ಥವಾಗಲು ಬಿಡುವುದಿಲ್ಲ’ ಎಂದು ಅವರು ಇತ್ತೀಚೆಗೆ 20 ಭಾರತೀಯ ಯೋಧರು ಚೀನಾ ಯೋಧರ ಜತೆಗಿನ ಸಂಘರ್ಷದಲ್ಲಿ ಹುತಾತ್ಮರಾದ ಬಗ್ಗೆ ಉಲ್ಲೇಖಿಸಿದರು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.