ಕೊರೋನಾ ವೈರಸ್‌ನ ಹೊಸ ಮಾದರಿ ಪತ್ತೆ, ಎಚ್ಚರ ವಹಿಸದಿದ್ರೆ ಆಪತ್ತು ಗ್ಯಾರಂಟಿ..!

ಕಳೆದೊಂದು ವರ್ಷದಿಂದ ವಿಶ್ವವನ್ನೇ ನಡುಗಿಸಿರುವ ಕೊರೋನಾ ವೈರಸ್‌ ಹುಟ್ಟಡಗಿಸಲು ಕಳೆದ ವಾರದಿಂದ ಲಸಿಕೆ ವಿತರಣೆ ಆರಂಭಿಸಿರುವ ಬ್ರಿಟನ್‌ನಲ್ಲಿ ಮಾರಕ ವೈರಾಣುವಿನ ಹೊಸ ಮಾದರಿಯೊಂದು ಪತ್ತೆಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. 

First Published Dec 17, 2020, 5:43 PM IST | Last Updated Dec 17, 2020, 6:07 PM IST

ಬೆಂಗಳೂರು (ಡಿ. 17): ಕಳೆದೊಂದು ವರ್ಷದಿಂದ ವಿಶ್ವವನ್ನೇ ನಡುಗಿಸಿರುವ ಕೊರೋನಾ ವೈರಸ್‌ ಹುಟ್ಟಡಗಿಸಲು ಕಳೆದ ವಾರದಿಂದ ಲಸಿಕೆ ವಿತರಣೆ ಆರಂಭಿಸಿರುವ ಬ್ರಿಟನ್‌ನಲ್ಲಿ ಮಾರಕ ವೈರಾಣುವಿನ ಹೊಸ ಮಾದರಿಯೊಂದು ಪತ್ತೆಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಸಿಎಂ- ಮಾಜಿ ಸಿಎಂ ದಿನೇ ದಿನೇ ಹತ್ತಿರ; ಬೇರೆಯದೇ ಸುಳಿವು ನೀಡುತ್ತಿದೆ ರಾಜಕೀಯ ಸಮಿಕರಣ

ವೈರಸ್‌ನ ಹೊಸ ರೂಪಾಂತರದಿಂದಾಗಿ ಒಂದು ವಾರದಿಂದ ಬ್ರಿಟನ್‌ನಲ್ಲಿ ಸೋಂಕು ವೇಗವಾಗಿ ಹಬ್ಬುತ್ತಿದೆ. ಕೆಲವು ಪ್ರದೇಶಗಳಲ್ಲಿ ಸೋಂಕು ದ್ವಿಗುಣಗೊಳ್ಳುವ ಅವಧಿ 7 ದಿನಗಳಿಗೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್‌ ಸರ್ಕಾರ ಹೈ ಅಲರ್ಟ್‌ ಘೋಷಣೆ ಮಾಡಿದೆ.ಇಂಗ್ಲೆಂಡ್‌ನ ಕೆಲವು ಭಾಗಗಳಲ್ಲಿ ಕೊರೋನಾ ವೈರಸ್‌ನ ಹೊಸ ಮಾದರಿ ಪತ್ತೆಯಾಗಿದ್ದು, ವೇಗವಾಗಿ ಹಬ್ಬುತ್ತಿದೆ. 1000 ಮಂದಿಯಲ್ಲಿ ಹೊಸ ಬಗೆಯ ಕೊರೋನಾ ಕಂಡುಬಂದಿದೆ. ಇದನ್ನು 60 ವಿವಿಧ ಸ್ಥಳೀಯ ಸಂಸ್ಥೆಗಳು ವರದಿ ಮಾಡಿವೆ.

Video Top Stories