ಅಮೆರಿಕಾದಲ್ಲಿ ಮೋದಿ ಮೋಡಿ, ಭಾರತ - ಅಮೆರಿಕಾ ಸ್ನೇಹ ನೋಡಿ ಪಾಕ್-ಚೀನಾಗೆ ಉರಿ!
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಮತ್ತು ಎನ್‌ಎಸ್‌ಜಿಯಲ್ಲಿ ಭಾರತಕ್ಕೆ ಸ್ಥಾನ ಕಲ್ಪಿಸುವ ವಿಷಯವನ್ನು ಬೆಂಬಲಿಸುವುದಾಗಿ ಅಮೆರಿಕದ ಘೋಷಿಸಿದೆ.
ಬೆಂಗಳೂರು (ಸೆ. 26): ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಮತ್ತು ಎನ್‌ಎಸ್‌ಜಿಯಲ್ಲಿ ಭಾರತಕ್ಕೆ ಸ್ಥಾನ ಕಲ್ಪಿಸುವ ವಿಷಯವನ್ನು ಬೆಂಬಲಿಸುವುದಾಗಿ ಅಮೆರಿಕದ ಘೋಷಿಸಿದೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಗೆ ಅತ್ಯಂತ ದೊಡ್ಡ ಯಶಸ್ಸು ಸಿಕ್ಕಂತಾಗಿದೆ.
Modi in USA; ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮೋದಿ ಭಾಷಣ; ಪ್ರಧಾನಿ ಮಾತಿನ ಹೈಲೈಟ್ಸ್!
ಇನ್ನು ಜಾಗತಿಕವಾಗಿ ಹರಡುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಭಾರತ ಮತ್ತು ಅಮೆರಿಕ ಖಂಡಿಸುತ್ತವೆ. ವಿಶ್ವಸಂಸ್ಥೆ ನಿಷೇಧಿಸಿರುವ ಎಲ್ಲಾ ಉಗ್ರಗಾಮಿ ಸಂಘಟನೆಗಳ ವಿರುದ್ಧ ಹೋರಾಟ ನಡೆಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ದ್ವಿಪಕ್ಷೀಯ ಮಾತುಕತೆಯ ನಂತರ ಶ್ವೇತ ಭವನ ಜಂಟಿ ಹೇಳಿಕೆ ನೀಡಿದೆ. ಮೋದಿ ಅಮೆರಿಕಾ ಭೇಟಿ, ಬೈಡೆನ್ ಜೊತೆಗಿನ ಮಾತುಕತೆ, ಜಾಗತಿಕ ಸಂದೇಶಗಳ ಬಗ್ಗೆ ಒಂದು ವರದಿ ಇಲ್ಲಿದೆ.