Russia- Ukraine War: ವಿದ್ಯಾರ್ಥಿ ಜೊತೆ ಉಕ್ರೇನ್ ಶ್ವಾನ ಬೆಂಗಳೂರಿಗೆ, ಕನ್ನಡ ಕಲಿಯಲಿದೆ!
ಉಕ್ರೇನ್‌ನಿಂದ ವಾಪಸ್ ಮರಳುತ್ತಿರುವವರು ತಮ್ಮ ಜೊತೆ, ತಮ್ಮ ಮುದ್ದಿನ ಸಾಕು ಪ್ರಾಣಿಗಳನ್ನೂ ಕರೆತರುತ್ತಿದ್ದಾರೆ. ಕೆಲವರು ಶ್ವಾನ, ಕೆಲವರು ಮುದ್ದಿನ ಬೆಕ್ಕನ್ನು ತಂದಿದ್ದನ್ನ ಗಮನಿಸಿದ್ಧೇವೆ.
ನವದೆಹಲಿ (ಮಾ. 07): ಉಕ್ರೇನ್‌ನಿಂದ ವಾಪಸ್ ಮರಳುತ್ತಿರುವವರು ತಮ್ಮ ಜೊತೆ, ತಮ್ಮ ಮುದ್ದಿನ ಸಾಕು ಪ್ರಾಣಿಗಳನ್ನೂ ಕರೆತರುತ್ತಿದ್ದಾರೆ. ಕೆಲವರು ಶ್ವಾನ, ಕೆಲವರು ಮುದ್ದಿನ ಬೆಕ್ಕನ್ನು ತಂದಿದ್ದನ್ನ ಗಮನಿಸಿದ್ಧೇವೆ.
ಮೆಡಿಕಲ್ ವಿದ್ಯಾರ್ಥಿ ರಂಜಿತ್ ರೆಡ್ಡಿ ಎಂಬುವವರು ವರ್ಷದಿಂದ ಉಕ್ರೇನ್‌ನಲ್ಲಿ ತಮ್ಮ ಜೊತೆಗಿದ್ದ ಪ್ರೀತಿಯ ಶ್ವಾನವನ್ನು ಕರೆ ತಂದಿದ್ದಾರೆ. ಚೀನಾ ಬ್ರೀಡ್ ಶ್ವಾನ ಹುಟ್ಟಿ ಬೆಳಿದಿದ್ದು ಉಕ್ರೇನ್‌ನಲ್ಲಿ. ಇಂಗ್ಲೀಷ್, ತೆಲಗು ಗೊತ್ತಂತೆ ಈ ಶ್ವಾನಕ್ಕೆ. ಇದೀಗ ಬೆಂಗಳೂರಿನಲ್ಲಿ ಅಮ್ಮನೊಡನೆ ಸೇರಿ ಕನ್ನಡ ಕಲಿಸುತ್ತಾರಂತೆ. ಉಕ್ರೇನ್ ಟು ಡೆಲ್ಲಿ ಶ್ವಾನದ ಜೊತೆಗಿನ ಜರ್ನಿ ಅನುಭವ ಹಂಚಿಕೊಂಡ ರಂಜಿತ್ ರೆಡ್ಡಿ..!