'ಅಪ್ಘಾನ್‌ನಲ್ಲಿ ಬೇರಾವ ದೇಶವೂ ಭಾರತ ಸರ್ಕಾರದ ಹಾಗೆ ತನ್ನ ನಾಗರಿಕರ ರಕ್ಷಣೆ ಮಾಡುತ್ತಿಲ್ಲ'

 ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ವಿಮಾನದ ಮೂಲಕ ಕರೆತರಲಾಗಿದ್ದು, ಈ ಪೈಕಿ ರಾಜ್ಯದ ಏಳು ಮಂದಿ ಕನ್ನಡಿಗರು ಸುರಕ್ಷಿತವಾಗಿ ದೇಶಕ್ಕೆ ಮರಳಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ಕನ್ನಡಿಗರು ಬಂದಿದ್ದು, ಅಲ್ಲಿಂದ ಕರ್ನಾಟಕ ತಲುಪಲಿದ್ದಾರೆ.

First Published Aug 23, 2021, 12:30 PM IST | Last Updated Aug 23, 2021, 12:50 PM IST

ನವದೆಹಲಿ(ಆ.23) ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ವಿಮಾನದ ಮೂಲಕ ಕರೆತರಲಾಗಿದ್ದು, ಈ ಪೈಕಿ ರಾಜ್ಯದ ಏಳು ಮಂದಿ ಕನ್ನಡಿಗರು ಸುರಕ್ಷಿತವಾಗಿ ದೇಶಕ್ಕೆ ಮರಳಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ಕನ್ನಡಿಗರು ಬಂದಿದ್ದು, ಅಲ್ಲಿಂದ ಕರ್ನಾಟಕ ತಲುಪಲಿದ್ದಾರೆ.

ಇನ್ನು ಏರ್‌ಲಿಫ್ಟ್‌ ಮೂಲಕ ಭಾರತಕ್ಕೆ ತಲುಪಿರುವ ಏಳು ಮಂದಿ ಕನ್ನಡಿಗರ ಪೈಕಿ ಮಂಗಳೂರಿನ ಮೂಡಬಿದರೆ ನಿವಾಸಿ ಜಗದಿಶ್ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. ಆಗಸ್ಟ್‌ 15ವರೆಗೆ ನಮಗೆ ಯಾವ ಭಯವೂ ಕಾಡಲಿಲ್ಲ. ಎಲ್ಲವೂ ಸರಿಯಾಗಿತ್ತು. ಆದರೆ ಆಗಸ್ಟ್ 16ರಿಂದ ಜನರು ಏರ್ಪೋರ್ಟ್‌ಗೆ ನುಗ್ಗಲಾರಂಭಿಸಿದರು. ಏರ್‌ಬೇಸ್‌ನಲ್ಲಿ ಏಕಾಏಕಿ ಊಟವನ್ನೂ ನಿಲ್ಲಿಸಿಬಿಟ್ಟರು. ಆದರೆ ಅಮೆರಿಕ ಸೇನೆ ಭದ್ರತೆಯಲ್ಲಿ ನಾವು ಸುರಕ್ಷಿತವಾಗಿದ್ದೆವು. ನಿಜ ಹೇಳಬೇಕೆಂದರೆ ನಮ್ಮ ಭಾರತದ ರಾಯಭಾರಿ ಕಚೇರಿ ಮಾಡುವಷ್ಟು ಪರಿಶ್ರಮ ಯಾವ ದೇಶವೂ ಮಾಡುತ್ತಿಲ್ಲ. ನಾನಿಂದು ಇಲ್ಲಿಗೆ ಸುರಕ್ಷಿತವಾಗಿ ಬಂದಿದ್ದೇನೆಂದರೆ ನಮ್ಮ ಸರ್ಕಾರ ಕಾರಣ. ಯಾರೂ ಹೀಗೆ ತಮ್ಮ ನಾಗರಿಕರ ಬಗ್ಗೆ ತಲೆಕೆಡಿಸಿಕೊಳದ್ಳುತ್ತಿಲ್ಲ. ಜೈ ಭಾರತ' ಎಂದಿದ್ದಾರೆ.

ಕಳೆದ ಹತ್ತು ವರ್ಷದಿಂದ ಕಾಬೂಲ್‌ ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ್ ಪೂಜಾರಿ, ಆಗಸ್ಟ್‌ ಆರಂಭದಲ್ಲಿ ಭಾರತಕ್ಕೆ ಬಂದಿದ್ದರು ಎಂಬುವುದು ಉಲ್ಲೇಖನೀಯ. 

Video Top Stories