ಯಹೂದಿಗಳ ಹಬ್ಬದ ದಿನವೇ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಲು ಇದೆ ಕಾರಣ!
ಇಸ್ರೇಲ್ ಮೇಲೆ ಹಮಾಸ್ ಉಗ್ರರು ಶನಿವಾರ ನಡೆಸಿದ ಭೀಕರ ದಾಳಿಯ ಒಂದೊಂದು ದೃಶ್ಯಗಳು ಬೆಚ್ಚಿ ಬೀಳಿಸುತ್ತಿದೆ. ನೇರವಾಗಿ ಇಸ್ರೇಲ್ ಎದುರಿಸಲು ಸಾಧ್ಯವಾಗದ ಹಮಾಸ್ ಉಗ್ರರು ಅಕ್ಚೋಬರ್ 7 ರಂದು ದಾಳಿ ಮಾಡಿದ್ದಾರೆ. ಹಾಗಾದರೆ ಅಕ್ಟೋಬರ್ 7ರಂದೇ ದಾಳಿಗೆ ಕಾರಣವೇನು
ಇಸ್ರೇಲ್(ಅ.09) ಇಸ್ರೇಲ್ ಹಾಗೂ ಪ್ಯಾಲೆಸ್ತಿನ್ ನಡುವಿನ ಯುದ್ದ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ನಿರಂತರ ಏರ್‌ಸ್ಟ್ರೈಕ್ ನಡೆಸುತ್ತಿದೆ. ಇಷ್ಟಾದಾರೂ ಇಸ್ರೇಲ್ ಕೋಪ ತಣಿದಿಲ್ಲ. ಹಮಾಸ್ ಉಗ್ರರ ಬುಡ ಸಹಿತಿ ನಿರ್ನಾಮ ಮಾಡುವುದಾಗಿ ಇಸ್ರೇಲ್ ಶಫಥ ಮಾಡಿದೆ. ಕಾರಣ ಶನಿವಾರ ಹಮಾಸ್ ಉಗ್ರರು ಮಾಡಿದ ದಾಳಿ. ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಏಕಾಏಕಿ ಇಸ್ರೇಲ್ ಮೇಲೆ ದಾಳಿ ಮಾಡಲು ಪ್ರಮುಖ ಕಾರಣ ಶಬ್ಬತ್ ಅನ್ನೋ ಹಬ್ಬ. ಇಸ್ರೇಲ್ ಯಹೂದಿಗಳು ಅಕ್ಟೋಬರ್ 7 ರಂದು ಶಬ್ಬತ್ ಹಬ್ಬ ಆಚರಿಸುತ್ತಿದ್ದಂತೆ ದಾಳಿಯಾಗಿದೆ. ಈ ಹಬ್ಬದ ದಿನ ಯಹೂದಿಗಳು ಪ್ರಾರ್ಥನೆ ಬಿಟ್ಟು ಬೇರೇನು ಮಾಡುವುದಿಲ್ಲ. ಪಾರ್ಥನೆ ಬಿಟ್ಟು ಬೇರೇ ಏನೇ ಮಾಡಿದರೂ ಪಾಪ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ದಿನ ಶಸ್ತ್ರಾಸ್ತ್ರ ಬಳಕೆ, ಪ್ರತಿದಾಳಿಗೆ ಇಳಿಯುವುದಿಲ್ಲ ಅನ್ನೋದನ್ನು ಅರ್ಥಮಾಡಿಕೊಂಡಿದ್ದ ಹಮಾಸ್ ಉಗ್ರರು, ಶನಿವಾರ ದಾಳಿ ಮಾಡಿದ್ದಾರೆ.