ಗಾಜಾ ಗಡಿಯಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್, ಇಸ್ರೇಲ್ ಸದ್ಯದ ಪರಿಸ್ಥಿತಿಯ ಗ್ರೌಂಡ್ ರಿಪೋರ್ಟ್!
ಹಮಾಸ್ ಉಗ್ರರ ಮೇಲೆ ಇಸ್ರೇಲ್ ಭೀಕರ ದಾಳಿ ಮುಂದುವರಿಸಿದೆ. ಇದರ ನಡುವೆ ಗಾಜಾ, ಸಿರಿಯಾ ಗಡಿಯಿಂದ ಇಸ್ರೇಲ್‌ನಿಂದ ರಾಕೆಟ್‌ಗಳು ತೂರಿ ಬರುತ್ತಿದೆ. ಈ ಯುದ್ಧಭೂಮಿಯಿಂದ ಏಷ್ಯಾನೆಟ್ ಸುವರ್ಣನ್ಯೂಸ್ ನೀಡಿದ ಗ್ರೌಂಡ್ ರಿಪೋರ್ಟ್ ಇಲ್ಲಿದೆ.
ಹಮಾಸ್ ಉಗ್ರರು ನಡೆಸಿದ ನರಮೇಧಕ್ಕೆ ಪ್ರತಿಯಾಗಿ ಇಸ್ರೇಲ್ ಗಾಜಾ ಮೇಲೆ ಮುಗಿಬಿದ್ದಿದೆ. ಗಾಡಾ ಗಡಿಯಲ್ಲಿ ಭಾರಿ ಸೇನೆ ನಿಯೋಜನೆಗೊಂಡಿದೆ. ಇಸ್ರೇಲ್ ಏರ್‌ಸ್ಟ್ರೈಕ್ ಮಾತ್ರವಲ್ಲ, ಭೂಸೇನೆಯನ್ನೂ ನುಗ್ಗಿಸಿ ಹಮಾಸ್ ಉಗ್ರರ ಹತ್ಯೆಗೆ ಮುಂದಾಗಿದೆ. ಈ ಯುದ್ಧ ಭೂಮಿಯಿಂದ ಏಷ್ಯಾನೆಟ್ ಸುವರ್ಣನ್ಯೂಸ್ ವರದಿ ಮಾಡುತ್ತಿದೆ. ಗಾಜಾ ಗಡಿಯಿಂದ 12 ಕಿಲೋಮೀಟರ್ ದೂರದಲ್ಲಿನ ಪರಿಸ್ಥಿತಿ ಹೇಗಿದೆ? ಜನರ ಪರಿಸ್ಥಿತಿ ಹೇಗಿದೆ? ಇಸ್ರೇಲ್ ಪ್ರತಿ ದಾಳಿ ನಡೆಸುತ್ತಿದ್ದರೂ ಗಾಜಾದಿಂದ ರಾಕೆಟ್ ದಾಳಿ ನಡೆಯುತ್ತಲೇ ಇದೆ. ಇಸ್ರೇಲ್‌ನ ಸದ್ಯದ ಪರಿಸ್ಥಿತಿ ಕುರಿತು ಅಜಿತ್ ಹನಮಕ್ಕನವರ್, ಇಸ್ರೇಲ್‌ನಿಂದ ನೀಡಿದ ಗ್ರೌಂಡ್ ರಿಪೋರ್ಟ್ ಇಲ್ಲಿದೆ.