News Hour: ಗಾಜಾ ವಶಪಡಿಸಿಕೊಳ್ಳಲು ಸಜ್ಜಾಗಿ ನಿಂತ ಇಸ್ರೇಲ್, ನೇರ ಎಚ್ಚರಿಕೆ ನೀಡಿದ ಇರಾನ್!
ತನ್ನ ಸರ್ವಸನ್ನದ್ದ ಭೂಸೇನಾ ಪಡೆಗಳನ್ನು ಗಾಜಾದ ಗಡಿಯಲ್ಲಿ ನಿಲ್ಲಿಸಿರುವ ಇಸ್ರೇಲ್, ಯಾವುದೇ ಕ್ಷಣದಲ್ಲಿ ಬೇಕಾದರೂ ಗಡಿಗೆ ಪ್ರವೇಶಿಸುವ ಸಾಧ್ಯತೆ ಇದೆ. ಇದರ ನಡುವೆ ಇಸ್ರೇಲ್‌ಗೆ ಇರಾನ್ ನೇರ ಎಚ್ಚರಿಕೆಯನ್ನು ನೀಡಿದೆ.
ಬೆಂಗಳೂರು (ಅ.16): ತನ್ನ ನೆಮ್ಮದಿಗೆ ಮಗ್ಗುಲು ಮುಳ್ಳಾಗಿ ಕಾಡುತ್ತಿರುವ ಗಾಜಾಪಟ್ಟಿಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಇಸ್ರೇಲ್ ತನ್ನ ಶಸ್ತ್ರಸಜ್ಜಿತ ಭೂಸೇನಾ ಪಡೆಯುನ್ನು ಗಾಜಾದ ಗಡಿಭಾಗದಲ್ಲಿ ನಿಲ್ಲಿಸಿದೆ. ಒಂದು ಆದೇಶ ಸಿಕ್ಕರೆ, ಇಸ್ರೇಲ್‌ನ ಭೂಸೇನೆ ಗಾಜಾದ ಮೇಲೆ ಮುಗಿಬೀಳಲಿದೆ. ಆದರೆ, ಇಸ್ರೇಲ್ ಮಾತ್ರ ಮುಂದಾಗಬಹುದಾದ ಅಪಾಯಗಳ ಬಗ್ಗೆ ಎಚ್ಚರಿಕೆಯಲ್ಲಿದೆ.
ಹಾಗೇನಾದರೂ ಇಸ್ರೇಲ್ ಗಾಜಾ ವಶಪಡಿಸಿಕೊಂಡ್ರೆ ಪೂರ್ಣ ಪ್ರಮಾಣದ ಯುದ್ಧ ಶುರುವಾಗುತ್ತಾ ಎನ್ನುವ ಅನುಮಾನಗಳು ಎದ್ದಿವೆ. ಇದೇ ವಿಚಾರವಾಗಿ ಇಸ್ರೇಲ್‌ಗೆ ಇರಾನ್ ನೇರ ಎಚ್ಚರಿಕೆಯನ್ನೂ ರವಾನಿಸಿದೆ. ಗಾಜಾ ವಶವಾದ್ರೆ ಮಹಾ ಪ್ರಮಾದ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡ ಹೇಳಿದ್ದಾರೆ.
ರಾಕೆಟ್ ದಾಳಿಗೆ ಮುನ್ಸೂಚನೆಯಾಗಿ ಸೈರನ್, ಬಾಂಬ್ ಶೆಲ್ಟರ್ ಹೇಗಿದೆ ಗೊತ್ತಾ ?
ಗಾಜಾವನ್ನು ವಶಪಡಿಸಿಕೊಳ್ಳುವ ಪ್ರಯತ್ನ ಬೇಡ ಎಂದು ಅಮೆರಿಕ ಮನವಿ ಮಾಡಿದ್ದರೂ, ಇಸ್ರೇಲ್ ಮಾತ್ರ ತನ್ನ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ. ಇನ್ನೊಂದೆಡೆ, ಗಾಜಾದ ನಾಗರೀಕರನ್ನು ಸೇರಿಸಿಕೊಳ್ಳಲು ಮುಸ್ಲಿಂ ದೇಶ ಈಜಿಪ್ಟ್ ಕೂಡ ಒಪ್ಪುತ್ತಿಲ್ಲ.ತನ್ನ ರಫಾ ಬಾರ್ಡರ್ ಅನ್ನು ತೆರೆಯಲು ಈಜಿಪ್ಟ್ ನಿರಾಕರಿಸಿದೆ. ಇದರ ನಡುವೆ ಅಮೆರಿಕ ಅಧ್ಯಕ್ಷ ಬೈಡೆನ್ ಇಸ್ರೇಲ್‌ಗೆ ಬರಬಹುದು ಎನ್ನುವ ವರದಿಯಾಗಿದೆ.