ಗಾಜಾ ನಾಗರೀಕರ ಸ್ಥಳಾಂತರಕ್ಕೆ ನೀಡಿದ್ದ ಗಡುವು ವಿಸ್ತರಣೆ, ದಾಳಿ ನಿಲ್ಲಲ್ಲ ಎಂದ ಇಸ್ರೇಲ್!
ಇಸ್ರೇಲ್ ಯುದ್ಧಭೂಮಿಯಿಂದ ಪ್ರತ್ಯಕ್ಷ ವರದಿ ಮಾಡುತ್ತಿರುವ ಏಷ್ಯಾನೆಟ್ ಸುವರ್ಣನ್ಯೂಸ್, ಇದೀಗ ಗಾಜಾ ಮೇಲಿನ ದಾಳಿ ಹಾಗೂ ದಾಳಿ ಸ್ಥಗಿತದ ಕುರಿತು ನಿಖರ ಮಾಹಿತಿ ಬಹಿರಂಗಪಡಿಸಿದೆ. ನಾಗರೀಕರಿಗೆ ನೀಡಿದ್ದ ಗಡುವು ವಿಸ್ತರಣೆ ಕುರಿತು ಮಾಹಿತಿ ಇಲ್ಲಿದೆ.
ಹಮಾಸ್ ಉಗ್ರರ ದಾಳಿಗೆ ಪ್ರತಿಯಾಗಿ ಇಸ್ರೇಲ್ ಗಾಜಾದ ಮೇಲೆ ನಡೆಸುತ್ತಿರುವ ದಾಳಿಯನ್ನು ಕೆಲಕಾಲ ಮುಂದೂಡಿದೆ. ಗಾಜಾದಲ್ಲಿನ ನಾಗರೀಕರು ಸುರಕ್ಷಿತರ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ನೀಡಿದ್ದ 3 ಗಂಟೆಗಳ ಗಡುವು ಅಂತ್ಯಗೊಂಡ ಬೆನ್ನಲ್ಲೇ ಇದೀಗ ಮತ್ತೆ 4 ಗಂಟೆಗಳ ಕಾಲ ವಿಸ್ತರಣೆ ಮಾಡಿದೆ. ಆದರೆ ದಾಳಿ ನಿಲ್ಲಲ್ಲ ಎಂದು ಎಚ್ಚರಿಕೆ ನೀಡಿದ. ಏಷ್ಯಾನೆಟ್ ಸುವರ್ಣನ್ಯೂಸ್ ಇಸ್ರೇಲ್‌ನಿಂದ ಪ್ರತ್ಯಕ್ಷ ವರದಿ ಮಾಡುತ್ತಿದೆ. ಮಿಸೈಲ್ ದಾಳಿ, ಸೈರನ್ ಅಲರ್ಟ್ ನಡುವೆ ಏಷ್ಯಾನೆಟ್ ಸುವರ್ಣನ್ಯೂಸ್ ಕ್ಷಣ ಕ್ಷಣದ ಪ್ರತ್ಯಕ್ಷ ವರದಿಯಲ್ಲಿ ಇಸ್ರೇಲ್ ಸೇನೆಗೆ ಅಲ್ಲಿನ ಸ್ಥಳೀಯರು ನೀಡುತ್ತಿರುವ ಬೆಂಬಲ ಕುರಿತು ಮಹತ್ವದ ಮಾಹಿತಿ ಬಹಿರಂಗವಾಗಿದೆ.