ಇರಾನ್-ಇಸ್ರೇಲ್ ತೀವ್ರ ಸಂಘರ್ಷ: ‘ಟ್ರೂ ಪ್ರಾಮಿಸ್ 3’ ದಾಳಿಯಿಂದ 2 ಸಾವು, 50 ಗಾಯ

ಇಸ್ರೇಲ್‌ನ 'ರೈಸಿಂಗ್ ಲಯನ್ಸ್' ಕಾರ್ಯಾಚರಣೆಗೆ ಪ್ರತಿಯಾಗಿ ಇರಾನ್ 'ಆಪರೇಷನ್ ಟ್ರೂ ಪ್ರಾಮಿಸ್ 3' ಮೂಲಕ ಪ್ರತಿದಾಳಿ ನಡೆಸಿದೆ. 100ಕ್ಕೂ ಹೆಚ್ಚು ಬ್ಯಾಲೆಸ್ಟಿಕ್ ಕ್ಷಿಪಣಿಗಳಿಂದ ಇಸ್ರೇಲ್‌ನ ರಾಜಧಾನಿ ಸೇರಿದಂತೆ ಹಲವು ಪ್ರದೇಶಗಳನ್ನು ಗುರಿಯಾಗಿಸಲಾಗಿದೆ. ಇಬ್ಬರು ಸಾರ್ವಜನಿಕರು ಸಾವನ್ನಪ್ಪಿದ್ದಾರೆ.

Share this Video

ಮದ್ಯಪ್ರಾಚ್ಯದಲ್ಲಿ ಇದೀಗ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇಸ್ರೇಲ್ ಮಾಡಿದಂತಹ ದಾಳಿಗೆ ಪ್ರತೀಕಾರವಾಗಿ ಇದೀಗ ಇರಾನ್ 'ಆಪರೇಷನ್ ಟ್ರೂ ಪ್ರಾಮಿಸ್ 3' ಮೂಲಕ ಮರು ದಾಳಿಯನ್ನು ಮಾಡಿದೆ. ಇಸ್ರೇಲ್‌ನ ರಾಜಧಾನಿ ಸೇರಿದಂತೆ ವಿವಿಧ ಪ್ರದೇಶಗಳ ಮೇಲೆ ಇರಾನ್ ದಾಳಿ ಮಾಡಿದೆ. ಇರಾನ್-ಇಸ್ರೇಲ್ ನಡುವೆ ಯುದ್ಧ ಆರಂಭವಾಯಿತೇ ಎಂಬ ಮುನ್ಸೂಚನೆ ಸಿಗುತ್ತಿದೆ. ಇಸ್ರೇಲ್ ನಡೆಸಿದ ದಾಳಿಗೆ ಪ್ರತಿದಾಳಿಯಾಗಿ 100ಕ್ಕೂ ಅಧಿಕ ಬ್ಯಾಲೆಸ್ಟಿಕ್ ಮಿಸೈಲ್‌ಗಳಿಂದ ದಾಳಿಯನ್ನು ಮಾಡಲಾಗಿದೆ. 

ಇರಾನ್‌ನಲ್ಲಿ ಶುಕ್ರವಾರ ಎಲ್ಲರೂ ಪ್ರಾರ್ಥನೆ ಮಾಡುವ ವೇಳೆ ಇಸ್ರೇಲ್ ದೇಶದಿಂದ ರೈಸಿಂಗ್ ಲಯನ್ಸ್ ಎಂಬ ಕಾರ್ಯಾಚರಣೆ ಮೂಲಕ ಇರಾನ್‌ನ ಸೇನಾಧಿಕಾರಿಗಳು ಮತ್ತು ವಿಜ್ಞಾನಿಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ಮಾಡಿತ್ತು. ಇದಕ್ಕೆ ಪ್ರತಿದಾಳಿಯಾಗಿ ಇರಾನ್ ಕೂಡ ದಾಳಿ ಮಾಡಿದ್ದು, ಇಸ್ರೇಲ್‌ನ ರಾಜಧಾನಿ ಸೇರಿದಂತೆ ಹಲವು ಜನವಸತಿ ಪ್ರದೇಶಗಳ ಮೇಲೆ ಮರುದಾಳಿ ಮಾಡಿದೆ. ಈ ದಾಳಿಯಿಂದ ಇಬ್ಬರು ಸಾರ್ವಜನಿಕರು ಸಾವನ್ನಪ್ಪಿದ್ದು, 50ಕ್ಕೂ ಅಧಿಕ ಸಾವು ಸಂಭವಿಸಿದೆ.

Related Video