
ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; 3ನೇ ಮಹಾಯುದ್ದವಾದ್ರೆ ಭಾರತದ ಮೇಲಾಗುವ ಪರಿಣಾಮವೇನು?
ನೋಡೋಕೇನೋ ಇರಾನ್ ಹಠವನ್ನೂ ಬಿಡದೆ, ಅಮೆರಿಕಾದ ಆರ್ಭಟಕ್ಕೂ ಅಲುಗದೆ ನಿಶ್ಚಲವಾಗಿ ನಿಂತಿದೆ. ಆದ್ರೆ, ಆ ದೇಶದ ಒಳಗೇ ಈಗ ಆಕ್ರೋಶದ ಕಾಳ್ಗಿಚ್ಚು ಧಗಧಗ ಅಂತಿದೆ. ಅದರಿಂದ ಬಚಾವ್ ಆಗೋಕೆ ಸಾಧ್ಯವೇ ಇಲ್ಲದಂಥಾ ಸ್ಥಿತಿ ನಿರ್ಮಾಣವಾಗಿದೆ.
ಇರಾನ್. ಅದೀಗ ಬರೀ ದೇಶವಲ್ಲ. ಜ್ವಾಲಾಮುಖಿ ಆಸ್ಫೋಟಗೊಳ್ತಾ ಇರೋ ಅಗ್ನಿಪರ್ವತ. ಒಳಗೊಳಗೇ ಕೊತಕೊತ ಅಂತ ಕುದೀತಿರೋ ಆ ಪರ್ವತವನ್ನ, ಹೊರಗಿನಿಂದಲೂ ಸರ್ವನಾಶ ಮಾಡೋಕೆ, ಡೊನಾಲ್ಡ್ ಟ್ರಂಪ್ ತುದಿಗಾಲಲ್ಲಿ ನಿಂತಿದ್ದಾರೆ. ಜಸ್ಟ್ 18 ದಿನಗಳ ಹಿಂದಷ್ಟೇ ಶುರುವಾದ, ಆಂದೋಲನ, ಇಡೀ ಮಧ್ಯಪ್ರಾಚ್ಯದ ಭೂಪಟವನ್ನೇ ಬದಲಿಸೋ ಹಾಗೆ ಕಾಣ್ತಾ ಇದೆ. ಅಷ್ಟೇ ಅಲ್ಲ, ಟ್ರಂಪ್ ಕೈಗೆತ್ತಿಕೊಂಡಿರೋ ಒಂದು ನಿರ್ಧಾರ, ಟ್ರಂಪ್ ವಿರುದ್ಧ ಖಮೇನಿಗಿರೋ ಮತ್ಸರ, ಮೂರನೇ ಮಹಾಯುದ್ಧಕ್ಕೆ ಕಾರಣವಾಗೋ ಸರ್ವಸಾಧ್ಯತೆಗಳೂ ದಟ್ಟವಾಗಿ ಎದ್ದು ಕಾಣ್ತಾ ಇದಾವೆ. ಇದೆಲ್ಲದರ ಹಿಂದಿರೋ ಕತೆ ಏನು? ನಮ್ಮ ಮೇಲೆ, ಭಾರತದ ಮೇಲೆ ಅದರ ಪರಿಣಾಮ ಏನು? ಇಲ್ಲಿದೆ ನೋಡಿ, ಕಂಪ್ಲೀಟ್ ಸ್ಟೋರಿ.