ಇಸ್ರೇಲ್‌ ಗೃಹ ಸಚಿವಾಲಯದ ಮೇಲೆ ಇರಾನ್ ಭೀಕರ ದಾಳಿ

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಇರಾನ್ ಕ್ಷಿಪಣಿಗಳಿಂದ ಇಸ್ರೇಲ್‌ನ ಹೈಫಾ ನಗರದ ಮೇಲೆ ದಾಳಿ ನಡೆಸಿದೆ. ಇಸ್ರೇಲ್ ಪ್ರತೀಕಾರವಾಗಿ ಇರಾನ್‌ನ ಹಲವು ಕೇಂದ್ರಗಳ ಮೇಲೆ ಪ್ರತಿದಾಳಿ ನಡೆಸಿದೆ.

Share this Video

ಬೆಂಗಳೂರು (ಜೂ.21): ಇರಾನ್‌ ಹಾಗೂ ಇಸ್ರೇಲ್‌ ನಡುವಿನ ಸಂಘರ್ಷ ಇನ್ನೊಂದು ಹಂತಕ್ಕೇರಿದೆ. ಕಳೆದ ಒಂದು ವಾರದಿಂದ ಎರಡೂ ದೇಶಗಳ ನಡುವೆ ಕ್ಷಿಪಣಿ ವಾರ್‌ ನಡೆಯುತ್ತಿದ್ದು, ಶನಿವಾರ ಇರಾನ್‌ ತನ್ನ ಖಂಡಾಂತರ ಕ್ಷಿಪಣಿಗಳ ಮೂಲಕ ಇಸ್ರೇಲ್‌ ಮೇಲೆ ಘಾತಕ ದಾಳಿ ನಡೆಸಿದೆ.

ಇರಾನ್ ಮತ್ತು ಅವರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಏರೋಸ್ಪೇಸ್ ಫೋರ್ಸ್ ಬ್ಯಾಲಿಸ್ಟಿಕ್ ಕ್ಷಿಪಣಿಯೊಂದಿಗೆ ಗುರಿಯಿಟ್ಟ ನಂತರ, ಇಸ್ರೇಲ್‌ನ ಹೈಫಾದಲ್ಲಿರುವ ಫೆಡರಲ್ ಸರ್ಕಾರಿ ಕಚೇರಿಯಾದ ಆಂತರಿಕ ಸಚಿವಾಲಯದ ಕಟ್ಟಡದ ಬಳಿ ದಾಳಿ ನಡೆಸಲಾಗಿದೆ.

ಇರಾನ್‌ನ ಇಸ್ಫಹಾನ್ ಪರಮಾಣು ಕೇಂದ್ರದ ಮೇಲೆ ದಾಳಿ ನಡೆಸಿದ ಇಸ್ರೇಲ್‌!

ಇನ್ನೊಂದೆಡೆ, ಟೆಹ್ರಾನ್‌ನಲ್ಲಿರುವ ಶಸ್ತ್ರಾಸ್ತ್ರ ಕಾರ್ಖಾನೆ ಸೇರಿದಂತೆ ಹತ್ತು ಕೇಂದ್ರಗಳ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಅಹ್ವಾಜ್‌ನಲ್ಲೂ ಇಸ್ರೇಲ್ ದಾಳಿ ನಡೆಸಿದೆ. ಇರಾನ್‌ನ ಸೈಬರ್ ಘಟಕದ ಕಟ್ಟಡವನ್ನು ನಾಶಪಡಿಸಿದ್ದಾಗಿ ಇಸ್ರೇಲ್ ತಿಳಿಸಿದೆ.

 

 

Related Video