Asianet Suvarna News Asianet Suvarna News

ಅಮೆರಿಕದಲ್ಲಿ ಮೋದಿ: ಅನಿವಾಸಿ ಭಾರತೀಯರ ಭೇಟಿಯಾದ 'ನಮೋ'!

Sep 23, 2021, 9:09 AM IST

ವಾಷಿಂಗ್ಟನ್(ಸೆ.23) ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ತಮ್ಮ ಮೂರು ದಿನಗಳ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಬುಧವಾರ ವಾಷಿಂಗ್ಟನ್ ಡಿಸಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ಎಲ್ಲೆಡೆ 'ಮೋದಿ-ಮೋದಿ' ಎಂಬ ಧ್ವನಿ ಆಗಸದಲ್ಲಿ ಪ್ರತಿಧ್ವನಿಸಿದೆ. ಅವರನ್ನು ಸ್ವಾಗತಿಸಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು.

ಭಾರತೀಯ ಮೂಲದ ಮಂದಿ ಜಂಟಿ ಬೇಸ್ ಆಂಡ್ರ್ಯೂಸ್ ನಲ್ಲಿ ಜಮಾಯಿಸಿದ್ದರು. ಕೋವಿಡ್ 19(Coronavirus) ರ ಬಳಿಕ ಮೋದಿಯಮೊದಲ ಅಮೆರಿಕ(USA) ಭೇಟಿ ಇದಾಗಿದೆ. ಅಮೆರಿಕಕ್ಕೆ ಆಗಮಿಸಿದ ಮೋದಿಯನ್ನು ಉಪಕಾರ್ಯದರ್ಶಿ ಟಿಎಚ್ ಬ್ರಿಯಾನ್ ಮೆಕೇನ್ ಸೇರಿದಂತೆ ಯುಎಸ್ ಆಡಳಿತದ ಇತರ ಅಧಿಕಾರಿಗಳು ಬರಮಾಡಿಕೊಂಡರು.

ಅನಿವಾಸಿ ಭಾರತೀಯರು ಮೋದಿಯನ್ನು ಕಾಣಲು ಬಹಳಷ್ಟು ಉತ್ಸಾಹದಿಂದ ನೆರೆದಿದ್ದರು. ದೀರ್ಘ ಪ್ರಯಾಣದ ಹೊರತಾಗಿಯೂ, ಮೋದಿಯವರ ಮುಖದಲ್ಲಿ ಯಾವುದೇ ದಣಿವು ಇರಲಿಲ್ಲ. ಜನರನ್ನು ನಗು ನಗುತ್ತಲೇ ಭೇಟಿಯಾಗಿದ್ದಾರೆ.