ಭಾರತ ಈಗ ಸೂಪರ್ ಪವರ್ ಆಗುವುದಕ್ಕೆ ಹೊರಟಿದೆ: ರವಿ ಹೆಗಡೆ

ಒಂದು ಕಾಲಕ್ಕೆ ಸೂಪರ್ ಪವರ್ ಆಗಿದ್ದ ಬ್ರಿಟನ್ ಈಗ ಹಾಗೆ ಉಳಿದಿಲ್ಲ. ಕಾಲ ಬದಲಾಗಿದೆ. ಭಾರತ ಈಗ ಸೂಪರ್ ಪವರ್ ಆಗುವುದಕ್ಕೆ ಹೊರಟಿದೆ ಎಂದು 'ಕನ್ನಡಪ್ರಭ' ಹಾಗೂ 'ಏಷ್ಯಾನೆಟ್ ಸುವರ್ಣ ನ್ಯೂಸ್' ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದ್ದಾರೆ.
 

Share this Video
  • FB
  • Linkdin
  • Whatsapp

ಲಂಡನ್ (ಜ.20): ಒಂದು ಕಾಲಕ್ಕೆ ಸೂಪರ್ ಪವರ್ ಆಗಿದ್ದ ಬ್ರಿಟನ್ ಈಗ ಹಾಗೆ ಉಳಿದಿಲ್ಲ. ಕಾಲ ಬದಲಾಗಿದೆ. ಭಾರತ ಈಗ ಸೂಪರ್ ಪವರ್ ಆಗುವುದಕ್ಕೆ ಹೊರಟಿದೆ ಎಂದು 'ಕನ್ನಡಪ್ರಭ' ಹಾಗೂ 'ಏಷ್ಯಾನೆಟ್ ಸುವರ್ಣ ನ್ಯೂಸ್' ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದ್ದಾರೆ. ಲಂಡನ್‌ನ ಭಾರತೀಯ ವಿದ್ಯಾಭವನದಲ್ಲಿ ಸ್ಮಾರ್ಟ್ ಕೀ, ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿದ್ದ ಲಂಡನ್ ಸಂಸದೀಯ ನಾಯಕತ್ವ ಶೃಂಗಸಭೆ 2024 ಸಮಾರಂಭದಲ್ಲಿ ಅವರು ಮಾತನಾಡಿದರು. ಅವತ್ತು ಬ್ರಿಟನ್ ಪ್ರಜೆಗಳು ಭಾರತದಲ್ಲಿ ಮನೆ ಮಾಡಿಕೊಂಡಿದ್ದರೆ ಅವರ ಬಂಗ್ಲೆಗಳ ಮೆಟ್ಟಿಲುಗಳನ್ನು ಹತ್ತುವುದಕ್ಕೆ ಭಾರತೀಯರಿಗೆ ಅವಕಾಶ ಇರಲಿಲ್ಲ. 

ಅಂಥ ಬ್ರಿಟನ್ ಈ ನೆಲದಲ್ಲಿ ನಮ್ಮನ್ನು ಕರೆದು ಗೌರವಿಸುತ್ತಿರುವುದು ಸಣ್ಣ ಮಾತಲ್ಲ. ಭಾರತದಲ್ಲಿ ಇಂದು ಅತ್ಯಂತ ಪ್ರಭಾವಿ ನಾಯಕರು ಇದ್ದಾರೆ. ಜಾಗತಿಕ ನಾಯಕರು ಇದ್ದಾರೆ. ಈ ನಾಯಕರು ಪ್ರಪಂಚದ ಎಲ್ಲ ರೀತಿಯ ಶೃಂಗಸಭೆಗಳಲ್ಲಿ, ಸಮ್ಮಿಟ್‌ಗಳಲ್ಲಿ, ಲೀಡರ್‌ಶಿಪ್ ಸಮ್ಮಿಟ್‌ಗಳಲ್ಲಿ, ಟೆಕ್ನಾಲಜಿ ಸಮ್ಮಿಟ್‌ಗಳಲ್ಲಿ, ಎಕಾನಮಿ ಸಮ್ಮಿಟ್‌ಗಳಲ್ಲಿ ಭಾಗವಹಿಸಿ, ಮಿಂಚುತ್ತಿದ್ದಾರೆ. ಆದರೆ, ಅಲ್ಲಿ ನಾವು ನೋಡಿದರೆ ಕೆಲವೇ ಕೆಲವು ಶ್ರೀಮಂತ ಮತ್ತು ಪವರ್‌ಫುಲ್ ಇರುವವರು ಮಾತ್ರ ಕಾಣಿಸುತ್ತಾರೆ. ಹಾಗಾದರೆ ನಮ್ಮ ಮಧ್ಯೆ ಇರುವ ಲೀಡರ್‌ಗಳು ಅಷ್ಟೇನಾ? ಇಲ್ಲ, ಸಾವಿರಾರು, ಲಕ್ಷಾಂತರ ಲೀಡರ್‌ಗಳು ಇನ್ನು ಇದ್ದಾರೆ. ಇಂಥವರನ್ನು ಗುರುತಿಸುವುದು ಯಾವಾಗ? ಅವಕಾಶ ಸಿಗುವುದು ಯಾವಾಗ? ಇಂಥ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿದ್ದೇ ಲಂಡನ್ ಸಂಸದೀಯ ನಾಯಕತ್ವ ಶೃಂಗಸಭೆ ಕಾರ್ಯಕ್ರಮ ಎಂದರು.

Related Video