
ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಿದ ಪ್ರತಿಭಟನಾಕಾರರು, ಕಾರ್ ಕೀಗೆ ಹುಡುಕಾಟ, ಹಿಂಸಾತ್ಮಕ ಘರ್ಷಣೆ!
ಲಭ್ಯವಾದ ವೀಡಿಯೋ ತುಣುಕಿನಲ್ಲಿ ಪ್ರತಿಭಟನಾಕಾರರು ಶ್ರೀಲಂಕಾದ ಧ್ವಜಗಳು ಮತ್ತು ಹೆಲ್ಮೆಟ್‌ಗಳನ್ನು ಹಿಡಿದು ರಾಷ್ಟ್ರಪತಿ ಭವನಕ್ಕೆ ಪ್ರವೇಶಿಸುವುದನ್ನು ತೋರಿಸಲಾಗಿದೆ. ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ನೂರಾರು ಪ್ರತಿಭಟನಾಕಾರರು ಶ್ರೀಲಂಕಾದ ರಾಷ್ಟ್ರಪತಿ ಭವನದೊಳಗೆ ಘೋಷಣೆಗಳನ್ನು ಕೂಗುತ್ತಿರುವುದನ್ನು ಕಾಣಬಹುದು.
ಕೊಲಂಬೋ(ಜು.09): ಗಂಭೀರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ. ಪ್ರತಿಭಟನಾಕಾರರು ದೇಶದ ಅಧ್ಯಕ್ಷ ಗೋಟಬಾಯ ರಾಜಪಕ್ಸೆ ಅವರ ನಿವಾಸವನ್ನು ಸುತ್ತುವರೆದಿರುವ ವರದಿಗಳು ಬರುತ್ತಿವೆ. ರಾಜಪಕ್ಸೆ ಮನೆಯಿಂದ ಓಡಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲ ಸಮಯದ ಹಿಂದೆ, ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಭಾರೀ ಕೋಲಾಹಲದ ನಡುವೆ ರಾಜೀನಾಮೆ ನೀಡಿದಾಗ, ಹಿಂಸಾತ್ಮಕ ಪ್ರತಿಭಟನಾಕಾರರಿಂದ ಪಾರಾಗಲು ತಮ್ಮ ಕುಟುಂಬದೊಂದಿಗೆ ಮನೆಯಿಂದ ಓಡಿಹೋಗಿದ್ದರು.
ವರದಿಗಳನ್ವಯ ಪ್ರತಿಭಟನಾಕಾರರು ರಾಷ್ಟ್ರಪತಿ ಭವನಕ್ಕೆ ನುಗ್ಗಿ ಅದನ್ನು ಆಕ್ರಮಿಸಿಕೊಂಡಿದ್ದಾರೆ. ಇನ್ನು ಲಭ್ಯವಾದ ವೀಡಿಯೋ ತುಣುಕಿನಲ್ಲಿ ಪ್ರತಿಭಟನಾಕಾರರು ಶ್ರೀಲಂಕಾದ ಧ್ವಜಗಳು ಮತ್ತು ಹೆಲ್ಮೆಟ್‌ಗಳನ್ನು ಹಿಡಿದು ರಾಷ್ಟ್ರಪತಿ ಭವನಕ್ಕೆ ಪ್ರವೇಶಿಸುವುದನ್ನು ತೋರಿಸಲಾಗಿದೆ. ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ನೂರಾರು ಪ್ರತಿಭಟನಾಕಾರರು ಶ್ರೀಲಂಕಾದ ರಾಷ್ಟ್ರಪತಿ ಭವನದೊಳಗೆ ಘೋಷಣೆಗಳನ್ನು ಕೂಗುತ್ತಿರುವುದನ್ನು ಕಾಣಬಹುದು.
ರಾಷ್ಟ್ರಪತಿ ಭವನವನ್ನು ಸುತ್ತುವರಿದ ಉದ್ರಿಕ್ತ ಗುಂಪನ್ನು ತಡೆಯಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಹೀಗಿದ್ದರೂ ಅವರನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. "ಸಾವಿರಾರು ಪ್ರತಿಭಟನಾಕಾರರು ನಿವಾಸದ ಮುಖ್ಯ ದ್ವಾರಕ್ಕೆ ನುಗ್ಗಿ, ಬ್ಯಾರಿಕೇಡ್‌ಗಳನ್ನು ಮುರಿದಿದ್ದಾಋಎ. ಹೀಗಿರುವಾಗ ಪೊಲೀಸರು ಆ ಪ್ರದೇಶದಿಂದ ಹಿಂದೆ ಸರಿಯುತ್ತಿರುವುದು ಕಂಡುಬಂದಿದೆ" ಎಂದು ವರದಿ ತಿಳಿಸಿದೆ.