ಮನುಷ್ಯ ಮೇಡ್ ಇನ್‌ ಲ್ಯಾಬ್‌ : ಹೊಸ ಪ್ರಯೋಗದಲ್ಲಿ ಯಶಸ್ವಿಯಾಗುತ್ತಾ ಚೀನಾ

ಕೃತಕ ಭ್ರೂಣ ತಂತ್ರಜ್ಞಾನವನ್ನು ಕಂಡು ಹಿಡಿದ  ಚೀನಾ ವಿಜ್ಞಾನಿಗಳು

First Published Feb 1, 2022, 4:53 PM IST | Last Updated Feb 1, 2022, 4:53 PM IST

ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆಲ್ಲಾ ಮನುಷ್ಯರು ಅಸಾಧ್ಯವಾದುದೆಲ್ಲವನ್ನೂ ಸಾಧಿಸುತ್ತಿದ್ದಾರೆ. ಟೆಸ್ಟ್‌ ಟ್ಯೂಬ್‌ ಬೇಬಿ ಬಗ್ಗೆ ನೀವು ಕೇಳಿರಬಹುದು. ಜೊತೆಗೆ ಲ್ಯಾಬ್‌ಗಳಲ್ಲಿ ಪ್ರಾಣಿಗಳ ಕೆಲವು ಅಂಗಾಂಗಳನ್ನು ಕೃತಕವಾಗಿ ಸೃಷ್ಟಿಸಿರುವುದನ್ನು ಕೇಳಿರಬಹುದು. ಆದರೆ ಲ್ಯಾಬ್‌ನಲ್ಲಿ  ಮಗುವೊಂದನ್ನು ಸೃಷ್ಟಿಸುವುದಕ್ಕೆ ಕೃತಕ ಭ್ರೂಣವೊಂದನ್ನು ಸೃಷ್ಟಿಸಿ ಕೃತಕವಾಗಿ ಮಗುವೊಂದನ್ನು ಸೃಷ್ಟಿ ಮಾಡುವ ವಿಚಾರವನ್ನು ಕೇಳಿದ್ದೀರಾ. ಇಲ್ಲ ಎಂದಾದರೆ ಇಲ್ಲಿ ಕೇಳಿ ಕೃತಕ ಭ್ರೂಣ ತಂತ್ರಜ್ಞಾನವನ್ನು ಚೀನಾ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಈ ಕೃತಕ ಭ್ರೂಣವನ್ನು ಒಂಭತ್ತು ತಿಂಗಳ ಕಾಲ ಆರೋಗ್ಯಯುತವಾಗಿ ನೋಡಿಕೊಂಡು ಮಗುವನ್ನು ಸೃಷ್ಟಿ ಮಾಡುವ ತಂತ್ರಜ್ಞಾನ ಇದಾಗಿದೆ. ಈ ಬಗ್ಗೆ ಡಿಟೇಲ್ಡ್ ಸ್ಟೋರಿ ಇಲ್ಲಿದೆ.